ಮಹಾ ಮಂಗಳವಾರ: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ

Karnataka Assembly Election counting to be held on May 15

3:17 PM IST

ವರುಣಾದಲ್ಲಿ ಸಿಎಂ ಮಗ, ಚಾಮುಂಡೇಶ್ವರಿ, ಬಾದಾಮಿಯಲ್ಲಿ ಸಿದ್ದರಾಮಯ್ಯ ಕಣದಲ್ಲಿ

ಮೈಸೂರು ಜಿಲ್ಲೆಯ ವರುಣಾ ಸಿಎಂ ಸಿದ್ದರಾಮಯ್ಯ ಅವರ ತವರು ಕ್ಷೇತ್ರ. ಆದರೆ, ಈ ಬಾರಿ ಈ ಕ್ಷೇತ್ರವನ್ನುಮಗ ಡಾ.ಯತೀಂದ್ರ ಅವರಿಗೆ ಬಿಟ್ಟುಕೊಟ್ಟ ಸಿದ್ದರಾಮಯ್ಯ ಪಕ್ಕದ ಚಾಮುಂಡೇಶ್ವರಿ ಹಾಗೂ ಬಾಗಲಕೋಟೆ ಜಿಲ್ಲೆಯ ವರುಣಾದಲ್ಲಿ ಅದೃಷ್ಟ ಪರೀಕ್ಷಿಸಿಕೊಳ್ಳುತ್ತಿದ್ದಾರೆ.

3:17 PM IST

ಕಾಂಗ್ರೆಸ್‌ನೊಂದಿಗೆ ಜೆಡಿಎಸ್ ಹೊಂದಾಣಿಕೆ

3:17 PM IST

ಸಿಎಂ ತವರು ಜಿಲ್ಲೆಯಲ್ಲಿ ಭಾರಿ ಬೆಟ್ಟಿಂಗ್

ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿಲ್ಲಿ ಬೆಟ್ಟಿಂಗ್ ದಂಧೆ ಜೋರಾಗಿದೆ. ಸಿಎಂ ತವರು ಕ್ಷೇತ್ರ ವರುಣಾದಲ್ಲಿ ಮಗ ಡಾ.ಯತೀಂದ್ರ ಸ್ಪರ್ಧಿಸಿದ್ದು, ಚಾಮುಂಡೇಶ್ವರಿ ಕ್ಷೇತ್ರದಿಂದ ಸಿದ್ದರಾಮಯ್ಯ ಅವರೇ ಸ್ಪರ್ಧಿಸಿದ್ದಾರೆ. 

ಸಿಎಂ ತವರಲ್ಲಿ ಬೆಟ್ಟಿಂಗ್

3:17 PM IST

ಪಕ್ಷಗಳ ಕಾರ್ಯಕರ್ತರ ನಡುವೆ ಮಾರಾಮಾರಿ

ರಾಜ್ಯದ ವಿವಿಧಡೆ ಬೆಟ್ಟಿಂಗ್ ಜೋರಾಗಿದ್ದು, ಪಕ್ಷಗಳ ಕಾರ್ಯಕರ್ತರ ನಡುವೆ ಮಾರಾಮಾರಿಯಾಗಿರುವ ಘಟನೆಗಳೂ ವರದಿಯಾಗಿದೆ.

ಹಾಸನದಲ್ಲಿ ಕಾಂಗ್ರೆಸ್ -ಜೆಡಿಎಸ್ ಕಾರ್ಯಕರ್ತರ ಮಾರಾಮಾರಿ

3:17 PM IST

ಕೈ ಪಾಳಯದಲ್ಲಿ ಶುರವಾಗಿದೆ ದಲಿತ ಸಿಎಂ ಚರ್ಚೆ

ಕರ್ನಾಟಕ ವಿಧಾನಸಭೆ ಪಲಿತಾಂಶ ಹೊರ ಬೀಳಲು ಕ್ಷಣಗಣನೆ ಆರಂಭವಾಗಿದೆ. ವಿವಿಧ ಸಂಸ್ಥೆಗಳು ನೀಡಿರುವ ಸಮೀಕ್ಷೆಗಳೂ ಅತಂತ್ರವಾಗಿದೆ. ಸಿಎಂ ಸಿದ್ದರಾಮಯ್ಯ ಸಹ ಇದೀಗ ಕುರ್ಚಿ ಬಿಟ್ಟು ಕೊಡುವುದಾಗಿ ಹೇಳುತ್ತಿದ್ದು, ದಲಿತ ಸಿಎಂ ಚರ್ಚೆ ಮುನ್ನಲೆಗೆ ಬರುತ್ತಿದೆ.

 

ಕೈ ಪಾಳಯದಲ್ಲಿ ಶುರವಾಗಿದೆ ದಲಿತ ಸಿಎಂ ಚರ್ಚೆ

 

3:17 PM IST

ಹೆಬ್ಬಾಳ ಕಾಂಗ್ರೆಸ್ ಅಭ್ಯರ್ಥಿ ಭೈರತಿ ಬಸವರಾಜ್ ವಿರುದ್ಧ ಹಣ ಹಂಚಿಕೆ ಆರೋಪ

3:17 PM IST

ಮೋದಿ ವಿರುದ್ಧ ರಾಷ್ಟ್ರಪತಿಗೆ ದೂರು ಸಲ್ಲಿಸಿದ ಕಾಂಗ್ರೆಸ್

ಅಸಂವಿಧಾನಕ ಪದಗಳನ್ನು ಬಳಸಿ ಪ್ರಧಾನಿ ನರೇಂದ್ರ ಮೋದಿ ಚುನಾವಣೆ ಪ್ರಚಾರ ಮಾಡಿದ್ದಾರೆ. ಸುಳ್ಳು ದಾಖಲೆಗಳನ್ನು ಜನರಿಗೆ ನೀಡಿದ್ದಾರೆ ಆರೋಪಿಸಿ, ಕಾಂಗ್ರೆಸ್ ರಾಷ್ಟ್ರಪತಿಗೆ ದೂರು ಸಲ್ಲಿಸಿದೆ. ಈ ಬಗ್ಗೆ ಕಾಂಗ್ರೆಸ್ ಟ್ವೀಟ್ ಮಾಡಿದೆ.

 

INC COMMUNIQUE

Letter to the President of India by Former Prime Minister, Dr Manmohan Singh; LoP Rajya Sabha, Leader of CPP in LS & other senior leaders pointing out the negation of Constitutional oath by PM @narendramodi, and his unacceptable conduct. pic.twitter.com/WXAhFKgupQ

— INC Sandesh (@INCSandesh) May 14, 2018

 

ಮೇ 12ರಂದು ನಡೆದ ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆದಿದ್ದು, 2636 ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದೆ. ಬೆಂಗಳೂರಿನ ಆರ್‌ಆರ್‌ ನಗರ ಮತ್ತು ಜಯನಗರ ಹೊರತುಪಡಿಸಿ, 222 ಕ್ಷೇತ್ರಗಳಿಗೆ ಮತದಾನದ ಪ್ರಕ್ರಿಯೆ ನಡೆದಿದೆ. ಮತ ಎಣಿಕೆಗೆ ಎಲ್ಲೆಡೆ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಸಂಸ್ಥೆಗಳು ನೀಡಿರುವ ಚುನಾವಣೋತ್ತರ ಸಮೀಕ್ಷೆಗಳೂ ಅತಂತ್ರವಾಗಿರುವುದರಿಂದ, ಈ ಫಲಿತಾಂಶವನ್ನು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ.