ಮಾಜಿ ಶಾಸಕಿ ಪೂರ್ಣಿಮಾ ಅವರ ಪುತ್ರಿ ವಿನಿಶಾ ಯಾದವ್‌ ಅವರನ್ನ ಆಂಜನೇಯ ತಳ್ಳಿದ್ದಾರೆ. ತಕ್ಷಣ ತಡೆದ ಪ್ರಿಯಾಂಕಾ ಗಾಂಧಿ ಕೆಂಗಣ್ಣು ಬೀರಿದ್ದಾರೆ. ಆಂಜನೇಯ ಭುಜದ ಮೇಲೆ ಕೈಹಾಕಿ ಹಿಂದಕ್ಕೆಳೆದ ಸಿಎಂ ಸಿದ್ದರಾಮಯ್ಯ 

ಚಿತ್ರದುರ್ಗ(ಏ.23): ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಅವರಿಗೆ ಸನ್ಮಾನ ವೇಳೆ ಮಾಜಿ ಸಚಿವ ಎಚ್‌. ಆಂಜನೇಯ ಯಡವಟ್ಟು ಮಾಡಿಕೊಂಡಿದ್ದಾರೆ. ಹೌದು, ಇಂದು(ಮಂಗಳವಾರ) ಚಿತ್ರದುರ್ಗದಲ್ಲಿ‌ ನಡೆದ ಕಾಂಗ್ರೆಸ್ ನ್ಯಾಯ ಸಂಕಲ್ಪ ರ್‍ಯಾಲಿಯಲ್ಲಿ ಪ್ರಿಯಾಂಕಾ ಗಾಂಧಿ ಪಕ್ಕದಲ್ಲಿದ್ದ ಯುವತಿಗಯನ್ನ ತಳ್ಳುವ ಹೆಚ್.ಆಂಜನೇಯ ಯಡವಟ್ಟು ಮಾಡಿಕೊಂಡಿದ್ದಾರೆ.

ಮಾಜಿ ಶಾಸಕಿ ಪೂರ್ಣಿಮಾ ಅವರ ಪುತ್ರಿ ವಿನಿಶಾ ಯಾದವ್‌ ಅವರನ್ನ ಆಂಜನೇಯ ತಳ್ಳಿದ್ದಾರೆ. ತಕ್ಷಣ ತಡೆದ ಪ್ರಿಯಾಂಕಾ ಗಾಂಧಿ ಕೆಂಗಣ್ಣು ಬೀರಿದ್ದಾರೆ. ಸಿಎಂ ಸಿದ್ದರಾಮಯ್ಯ ಆಂಜನೇಯ ಭುಜದ ಮೇಲೆ ಕೈಹಾಕಿ ಹಿಂದಕ್ಕೆಳೆದಿದ್ದಾರೆ. 

ಕೃಷಿ ಸಚಿವ ಚಲುವರಾಯಸ್ವಾಮಿ ಕಾಟೇರಾ ಸಿನಿಮಾದ ವಿಲನ್ ಇದ್ದಂಗಿದ್ದಾರೆ; ಡಾ.ರವೀಂದ್ರ

ಯುವತಿಯನ್ನ ಹಿಂದಕ್ಕೆ ಸರಿಸಿ ಆಂಜನೇಯ ಅವಮಾನ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಜನರು ಆರೋಪಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾಜಿ ಸಚಿವ ಹೆಚ್. ಆಂಜನೇಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಜನರು ಕಿಡಿ ಕಾರಿದ್ದಾರೆ.