ರಿಲಯನ್ಸ್‌ ಇಂಡಸ್ಟ್ರೀಸ್‌ ಚೇರ್ಮನ್‌ ಮುಖೇಶ್‌ ಅಂಬಾನಿ ಅವರ ಕಿರಿಯ ಮಗ ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಅವರ ವಿವಾಹ ಲಂಡನ್‌ನಲ್ಲಿ ನಡೆಯಲಿದೆ ಎಂದು ವರದಿಯಾಗಿತ್ತು. ಆದರೆ, ಈ ಸುದ್ದಿ ಸುಳ್ಳು ಎಂದು ಅಂಬಾನಿ ಕುಟುಂಬದ ಮೂಲಗಳು ತಿಳಿಸಿವೆ. 

ಮುಂಬೈ (ಏ.23): ರಿಲಯನ್ಸ್‌ ವೆಂಚರ್ಸ್‌ ಲಿಮಿಟೆಡ್‌ನ ನಿರ್ದೇಶಕ ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಅವರ ವಿವಾಹ ಸಮಾರಂಭ ಮುಂಬೈನಲ್ಲಿಯೇ ನಡೆಯಲಿದೆ ಎಂದು ಅಂಬಾನಿ ಕುಟುಂಬದ ಮೂಲಗಳು ತಿಳಿಸಿವೆ. ಇದಕ್ಕೂ ಮುನ್ನ ಅನಿಲ್‌ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಅವರ ವಿವಾಹ ಲಂಡನ್‌ನಲ್ಲಿ ಮುಖೇಶ್‌ ಅಂಬಾನಿ 592 ಕೋಟಿ ಕೊಟ್ಟು ಖರೀದಿ ಮಾಡಿರುವ ಸ್ಟೋಕ್‌ ಪಾರ್ಕ್‌ ಎಸ್ಟೇಟ್‌ನಲ್ಲಿ ಜುಲೈನಲ್ಲಿ ನಡೆಯಲಿದೆ ಎಂದು ವರದಿಯಾಗಿತ್ತು. ಇನ್ನೂ ಕೆಲವು ವರದಿಗಳು ಇವರ ಮದುವೆ ಸಮಾರಂಭ ಅಬುಧಾಬಿಯಲ್ಲಿ ನಡೆಯುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ, ಈ ಎಲ್ಲಾ ಸುದ್ದಿಗಳನ್ನು ಕುಟುಂಬ ನಿರಾಕರಿಸಿದ್ದು, ವಿವಾಹ ಕಾರ್ಯಕ್ರಮ ಜುಲೈ 12 ರಂದು ಮುಂಬೈನಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ. ಇವರ ಪ್ರಿ ವೆಡ್ಡಿಂಗ್‌ ಸಮಾರಂಭ ಮಾರ್ಚ್‌ ಮೊದಲ ವಾರದಲ್ಲಿ ಗುಜರಾತ್‌ನ ಜಾಮ್‌ನಗರದಲ್ಲಿ ಅದ್ದೂರಿಯಾಗಿ ನೆರವೇರಿತ್ತು. ಈ ಕಾರ್ಯಕ್ರಮಕ್ಕೆ ದೇಶ-ವಿದೇಶದ ಗಣ್ಯರು ಆಗಮಿಸಿದ್ದರು.

Exclusive: ಲಂಡನ್‌ನ ಸ್ಟೋಕ್‌ಪಾರ್ಕ್‌ನಲ್ಲಿ ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ಮದುವೆ

ಎರಡು ದಿನಗಳ ಹಿಂದೆ ವರದಿಯಾದಂತೆ ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಅವರ ವಿವಾಹ ಸಮಾರಂಭ ಲಂಡನ್‌ನ ಸ್ಟೋಕ್‌ಪಾರ್ಕ್‌ನಲ್ಲಿ ನಡೆಯಲಿದೆ ಎನ್ನಲಾಗಿತ್ತು. ಆದರೆ, ಮುಂಬೈನ ಪ್ರಸಿದ್ಧ ಪಾಪರಾಜಿ ಇನ್ಸ್‌ಟಾಗ್ರಾಮ್‌ ಖಾತೆ ಅಂಬಾನಿ ಕುಟುಂಬದ ಮೂಲವನ್ನು ಉಲ್ಲೇಖಿಸಿ ವರದಿ ಮಾಡಿದ್ದು, ಮದುವೆ ಸಮಾರಂಭ ಜುಲೈ 12 ರಂದು ಮುಂಬೈನಲ್ಲಿಯೇ ನಡೆಯಲಿದೆ ಎಂದು ತಿಳಿಸಿದೆ. ಆದರೆ, ಅಂಬಾನಿ ಕುಟುಂಬ ಮಾತ್ರ ಅಧಿಕೃತವಾಗಿ ಈ ಸುದ್ದಿ ತಿಳಿಸಿಲ್ಲ.

ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ಗ್ರ್ಯಾಂಡ್‌ ವೆಡ್ಡಿಂಗ್ ನಡೀತಿರೋ ಸ್ಟೋಕ್‌ಪಾರ್ಕ್‌ ಹೇಗಿದೆ?