ದಾವಣಗೆರೆಯಲ್ಲಿ ಸಂಚಲನ ಸೃಷ್ಟಿಸಿದ ಸ್ವಾಭಿಮಾನಿ ವಿನಯ್ ಕುಮಾರ್!2 ಪಕ್ಷಗಳಿಗೆ ನಡುಕ ಹುಟ್ಟಿಸಿದ್ರಾ ರೆಬೆಲ್ ನಾಯಕ?
ದಾವಣಗೆರೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿ ಕೊನೆ ಹಂತದಲ್ಲಿ ಉಂಟಾದ ಬದಲಾವಣೆಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಜಿ ಬಿ ವಿನಯ್ ಕುಮಾರ್ ಅವರು ಈ ಬಾರಿ ಗೆಲ್ಲುವ ವಿಶ್ವಾಸ ಹೊರಹಾಕಿದ್ದಾರೆ.
ಲೋಕಸಭಾ ಚುನಾವಣೆ (Lok Sabha) ಹಿನ್ನೆಲೆ ರಾಜ್ಯಾದ್ಯಂತ ದೊಡ್ಡ ಮಟ್ಟದ ಕಾರ್ಯ ನಡೆಯುತ್ತಿದೆ. ಈ ನಡುವೆ ದಾವಣಗೆರೆಯಲ್ಲಿ (Davangere) ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿ ಕೊನೆ ಹಂತದಲ್ಲಿ ಉಂಟಾದ ಬದಲಾವಣೆಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿರುವ ಜಿ ಬಿ ವಿನಯ್ ಕುಮಾರ್ (GB Vinay Kumar) ಅವರು ರಾಜಕೀಯ ಕ್ಷೇತ್ರಕ್ಕೆ ಯಾಕೆ ಬಂದರು ಅನ್ನೋದನ್ನು ವಿವರಿಸಿದ್ದಾರೆ. ಇನ್‌ಸೈಡ್ಸ್ ಐಎಎಸ್ ಎಂಬ ಸಂಸ್ಥೆ ಮೂಲಕ ಹೆಸರುಗಳಿಸಿರುವ ಇವರು ಇದೀಗ ರಾಜಕಾರಣಿ ಆಗಲು ಪಣ ತೊಟ್ಟಿದ್ದಾರೆ. ಕೇವಲ ಕೋಚಿಂಗ್ ಸೆಂಟರ್‌ನಲ್ಲಿ ಇದ್ದರೆ ಸಮಾಜಕ್ಕೆ ನಿಮ್ಮ ಕೊಡುಗೆ ಅಷ್ಟು ಇರುವುದಿಲ್ಲ, ಯಾವುದಾದೂ ಕ್ಷೇತ್ರ ಆಯ್ಕೆ ಮಾಡಿಕೊಂಡು ನಿಲ್ಲಿ, ನಾವು ನಿಮಗೆ ಸಪೋರ್ಟ್ ಮಾಡುತ್ತೇವೆ ಎಂದು ಸಾಕಷ್ಟು ಜನರು ಒತ್ತಾಯ ಮಾಡಿದರು ಈ ಕಾರಣಕ್ಕೆ ನಾನು ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟೆ ಎಂದು ತಿಳಿಸಿದ್ದಾರೆ.
ಇದನ್ನೂ ವೀಕ್ಷಿಸಿ: ಬಿಜೆಪಿ ವಿರುದ್ಧ ಕಾಂಗ್ರೆಸ್ “ಖಾಲಿ ಚೊಂಬು” ಅಸ್ತ್ರ..! "ಕಾಂಗ್ರೆಸ್ ಡೇಂಜರ್,ಎಚ್ಚರಿಕೆ" ಎಂದಿದ್ದೇಕೆ ಕೇಸರಿ ಪಕ್ಷ..?