ಬಿಜೆಪಿ ವಿರುದ್ಧ ಕಾಂಗ್ರೆಸ್‌ “ಖಾಲಿ ಚೊಂಬು” ಅಸ್ತ್ರ..! "ಕಾಂಗ್ರೆಸ್ ಡೇಂಜರ್‌,ಎಚ್ಚರಿಕೆ" ಎಂದಿದ್ದೇಕೆ ಕೇಸರಿ ಪಕ್ಷ..?

ಮೋದಿ ಮುಂದೆಯೇ "ಚೊಂಬು ಜಾಹೀರಾತು" ಪ್ರದರ್ಶಿಸಿದ ದೇವೇಗೌಡರು..!
ಕೈ "ಖಾಲಿ ಚೊಂಬು"ಜಾಹೀರಾತಿಗೆ "ಡೇಂಜರ್" ಸಿಗ್ನಲ್ ಮೊಳಗಿಸಿದ ಬಿಜೆಪಿ..!
ಲೋಕಸಭಾ ಚುನಾವಣೆ ನಂತರ "ಕಾಂಗ್ರೆಸ್‌ಗೆ ಚೊಂಬೇ ಗತಿ" ಅಂದಿದ್ಯಾರು..?

Share this Video
  • FB
  • Linkdin
  • Whatsapp

ರಂಗೇರುತ್ತಿದೆ ಲೋಕಸಭಾ ರಣಕಣ. ಎದ್ದು ನಿಂತಿದೆ ಜಾಹೀರಾತು(Advertisement) ಜಂಗೀಕುಸ್ತಿಯ ಹೂರಣ. ಒಬ್ರು ಖಾಲಿ ಚೊಂಬು ಅಂದ್ರೆ, ಇನ್ನೊಬ್ರು ಡೇಂಜರ್ ಅಂತಿದ್ದಾರೆ. ನೀವು ರಾಜ್ಯಕ್ಕೆ ಕೊಟ್ಟದ್ದು ಚೊಂಬು ಅಂತ ಕಾಂಗ್ರೆಸ್(Congress) ಹೇಳಿದ್ರೆ, ರಾಜ್ಯಕ್ಕೆ ಕಾಂಗ್ರೆಸ್‌ಯೇ ಡೇಂಜರ್ ಅಂತಿದೆ ಬಿಜೆಪಿ(BJP). ಏಟಿಗೆ ಏಟು, ಅಸ್ತ್ರಕ್ಕೆ ಪ್ರತ್ಯಸ್ತ್ರ. ರಣರಂಗದಲ್ಲಿ ಕೈ-ಕಮಲ ಕಲಿಗಳ ಮಧ್ಯೆ ಜಾಹೀರಾತು ಯುದ್ಧ. ಕಟ್ಟಪ್ಪನ ರೀತಿಯಲ್ಲಿ ಕಮಲ ಪಕ್ಷದ ರಕ್ಷಣೆಗೆ ನಿಂತ ದಳಪತಿಗಳು. ಒಬ್ಬರದ್ದು ಖಾಲಿ ಚೊಂಬು.. ಇನ್ನೊಬ್ಬರದ್ದು ಡೇಂಜರ್. ಒಬ್ಬರದ್ದು ಸೇರಾದ್ರೆ, ಇನ್ನೊಬ್ಬರದ್ದು ಸವ್ವಾ ಸೇರು. ಇದು ಲೋಕಸಭಾ ರಣರಂಗದಲ್ಲಿ ಕರ್ನಾಟಕದ(Karnataka) ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಶುರುವಾಗಿರೋ ಚೊಂಬು Vs ಡೇಂಜರ್ ಜಟಾಪಟಿ, ಜಾಹೀರಾತು ಜಂಗೀಕುಸ್ತಿ. ಪ್ರಧಾನಿ ನರೇಂದ್ರ ಮೋದಿಯವ್ರು(Narendra Modi) ಲೋಕಸಭಾ ಚುನಾವಣಾ ಪ್ರಚಾರಕ್ಕೆ ಶನಿವಾರ ರಾಜ್ಯಕ್ಕೆ ಬಂದಿದ್ರು. ಚಿಕ್ಕಬಳ್ಳಾಪುರ ಮತ್ತು ಬೆಂಗಳೂರನಲ್ಲಿ ಸಮಾವೇಶಗಳನ್ನು ನಡೆಸಿ ಭಾಷಣ ಮಾಡಿದ್ರು. ಮೋದಿಯವ್ರು ಬರೋದನ್ನೇ ಕಾಯ್ತಾ ಇದ್ದ ಕಾಂಗ್ರೆಸ್ ಪಕ್ಷ, ಮೋದ ಆಗಮನಕ್ಕೆ ಒಂದು ದಿನ ಮೊದ್ಲೇ, ಅಂದ್ರೆ ಶುಕ್ರವಾರ ಖಾಲಿ ಚೊಂಬಿನ ಜಾಹೀರಾತೊಂದನ್ನು ನೀಡಿ ಮೋದಿಯವರನ್ನು ರಾಜ್ಯಕ್ಕೆ ವೆಲ್ಕಮ್ ಮಾಡಿತ್ತು. 

ಇದನ್ನೂ ವೀಕ್ಷಿಸಿ:  Lok Sabha elections 2024: ಅಂದು ಮನಮೋಹನ್ ಸಿಂಗ್ ಹೇಳಿದ್ದೇನು..? ಈಗ ಮೋದಿ ಹೇಳಿದ್ದೇನು..?

Related Video