News Hour: ಕಾಂಗ್ರೆಸ್​ಗೆ ನರೇಂದ್ರ ಮೋದಿ ಸಂಪತ್ತಿನ ಸವಾಲ್!

ಲೋಕಸಭೆ ಚುನಾವಣೆ ಕಣದಲ್ಲಿ ಕಾಂಗ್ರೆಸ್‌ ಘೋ‍ಷಣೆ ಮಾಡಿರುವ ಸಂಪತ್ತಿನ ಮರುಹಂಚಿಕೆ ವಿಚಾರ ಭರ್ಜರಿಯಾಗಿ ಚರ್ಚೆ ಆಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಇದನ್ನು ಭಾಷಣದಲ್ಲಿ ಹೇಳುವವರೆಗೂ ಕಾಂಗ್ರೆಸ್‌ನ ಇಂಥದ್ದೊಂದು ಯೋಜನೆ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ.
 

First Published Apr 23, 2024, 10:49 PM IST | Last Updated Apr 23, 2024, 10:49 PM IST

ಬೆಂಗಳೂರು (ಏ.23): ಲೋಕ ಸಮರದಲ್ಲಿ ಕಿಚ್ಚೆಬ್ಬಿಸಿದ ಮೋದಿ ಸಂಪತ್ತಿನ ಸವಾಲ್​ ಚರ್ಚೆಯಾಗುತ್ತಿದೆ. ಕಾಂಗ್ರೆಸ್​ ಗೆದ್ರೆ ನಿಮ್ಮ ಆಸ್ತಿಯಲ್ಲ.. ಮನೆ ಕೂಡ ಉಳಿಯಲ್ಲ ಎಂದು ಗುಡುಗಿದ್ದಾರೆ. ಪ್ರಧಾನಿ ದೊಡ್ಡ ಸುಳ್ಳುಗಾರ ಎಂದು ಖರ್ಗೆ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್‌ ಗೆದ್ದಲ್ಲಿ ಸಂಪತ್ತಿನ ಮರುಹಂಚಿಕೆ ಮಾಡುತ್ತದೆ ಎನ್ನುವ ಪ್ರಧಾನಿ ಮೋದಿ ವಾಗ್ದಾಳಿ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ. ಮೋದಿ ಸುಳ್ಳುಗಾರ, ಒಂದೂ ಭರವಸೆ ಈಡೇರಿಸಿಲ್ಲ ಎಂದು ಹೇಳಿದ್ದಾರೆ.

'ತಾಯಂದಿರೇ.. ನಿಮ್ಮ ಮಂಗಳಸೂತ್ರ ಕೂಡ ಸೇಫ್‌ ಆಗಿರೋಕೆ ಬಿಡೋದಿಲ್ಲ..' ಮೋದಿ ಮಾತಿಗೆ ಕಾಂಗ್ರೆಸ್‌ ಕೊತಕೊತ!

ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ ದಿನ ಹತ್ತಿರವಾಗುತ್ತಿದ್ದಂತೆ, ಸ್ಟಾರ್‌ ಪ್ರಚಾರಕರ ಕ್ಯಾಂಪೇನ್‌ ಜೋರಾಗಿದೆ. ಮಂಗಳವಾರ ಬೆಂಗಳೂರು ದಕ್ಷಿಣದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭರ್ಜರಿ ರೋಡ್‌ ಶೋ ಮಾಡಿದ್ದಾರೆ. ಇನ್ನು ಪ್ರಿಯಾಂಕಾ ವಾದ್ರಾ ಚಿತ್ರದುರ್ಗ ಹಾಗೂ ಬೆಂಗಳೂರು ದಕ್ಷಿಣದಲ್ಲಿ ಪ್ರಚಾರ ಮಾಡಿದ್ದಾರೆ.