ಲೋಕಸಭಾ ಚುನಾವಣೆ 2024: ಲಿಂಗಾಯತ, ದಲಿತ ಆಯ್ತು ಈಗ ಎಸ್.ಟಿ ಮತಕ್ಕೆ ಬಿಜೆಪಿ ಗಾಳ..!
ನನ್ನನ್ನ ಸುನೀಲ್ ಬೋಸ್ ಮಿಮಿಕ್ರಿ ಮಾಡ್ಕೊಂಡು ಹಾಡು ಹೇಳ್ಕೊಂಡು ತಿರುಗುವವರಿಗೆ ಮತ ಹಾಕ್ಬೇಡಿ ಅಂತ ಹೇಳ್ತಾರೆ. ನಾನು ಹೇಳಿದ ಹಾಡುಗಳೆಲ್ಲ ಬರಿ ಭಕ್ತಿ ಗೀತೆಗಳೆ ಮಾದಪ್ಪನ ಪದ ಹಾಡಿದ್ದೇನೆ. ಮಾದಪ್ಪನ ಪದ ಹಾಡಿದ್ದು ತಪ್ಪಾ?, ಗಾಯಕರಿಗೆ ಅಪಮಾನ ಮಾಡೋದು ಎಷ್ಟು ಸರಿ ಅಂತ ಪ್ರಶ್ನಿಸಿದ ಎಸ್.ಬಾಲರಾಜ್
ಚಾಮರಾಜನಗರ(ಏ.23): ಲಿಂಗಾಯತ ಆಯ್ತು ದಲಿತ ಎಡಗೈ ಆಯ್ತು ಈಗ ಎಸ್.ಟಿ ಮತಗಳಿಗೆ ಬಿಜೆಪಿ ಗಾಳ ಹಾಕಿದೆ. ಇಂದು(ಮಂಗಳವಾರ) ಚಾಮರಾಜನಗರದಲ್ಲಿ ಬಿಜೆಪಿಯಿಂದ ಎಸ್.ಟಿ ಸಮಾವೇಶ ನಡೆದಿದೆ. ಸಮಾವೇಶದಲ್ಲಿ ಜನರ ಎದುರಿಗೆ ಬಿಜೆಪಿ ಅಭ್ಯರ್ಥಿ ಬಾಲರಾಜ್ ಅವರು ಮತ ಬಿಕ್ಷೆ ಕೇಳಿದ್ದಾರೆ.
ನನ್ನನ್ನ ಸುನೀಲ್ ಬೋಸ್ ಮಿಮಿಕ್ರಿ ಮಾಡ್ಕೊಂಡು ಹಾಡು ಹೇಳ್ಕೊಂಡು ತಿರುಗುವವರಿಗೆ ಮತ ಹಾಕ್ಬೇಡಿ ಅಂತ ಹೇಳ್ತಾರೆ. ನಾನು ಹೇಳಿದ ಹಾಡುಗಳೆಲ್ಲ ಬರಿ ಭಕ್ತಿ ಗೀತೆಗಳೆ ಮಾದಪ್ಪನ ಪದ ಹಾಡಿದ್ದೇನೆ. ಮಾದಪ್ಪನ ಪದ ಹಾಡಿದ್ದು ತಪ್ಪಾ?, ಗಾಯಕರಿಗೆ ಅಪಮಾನ ಮಾಡೋದು ಎಷ್ಟು ಸರಿ ಅಂತ ಎಸ್.ಬಾಲರಾಜ್ ಪ್ರಶ್ನಿಸಿದ್ದಾರೆ.
ಬಿಜೆಪಿ ವಿರುದ್ಧ ಪ್ರಚಾರಕ್ಕೆ ಬಂದಿದ್ದ ರೈತ ಸಂಘದ ಕಾರ್ಯಕರ್ತರಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ತರಾಟೆ!
ಇದು ಧರ್ಮ ಯುದ್ಧ, ಈ ಯುದ್ದದಲ್ಲಿ ಧರ್ಮ ಗೆದ್ದೇ ಗೆಲ್ಲುತ್ತದೆ. ನಾನು ನಿಮ್ಮ ಕೈಗೆ ಸದಾ ಕಾಲ ಸಿಗುತ್ತೇನೆ ಆದ್ರೆ ಆ ಅಭ್ಯರ್ಥಿ ಸಿಗ್ತಾರಾ?. ಅವ್ರದ್ದು ಏನಿದ್ರು ರಾತ್ರಿ ಕಾರ್ಯಾಚರಣೆ ಅಷ್ಟೇ ಅವರ ಗುಣಗಳನ್ನ ನಾನು ಹೇಳೋಲ್ಲ ಟಿ.ನರಸೀಪುರದ ಜನತೆ ಹೇಳ್ತಾರೆ. ಅವರ ತಂದೆ ಸಮಾಜ ಕಲ್ಯಾಣ ಇಲಾಖಾ ಸಚಿವರು ಅಪ್ಪ ಮಂತ್ರಿ ಈಗ ಮಗನನ್ನ ಎಂಪಿ ಮಾಡೋಕೆ ಬಂದಿದ್ದಾರೆ ಅಂತ ಲೇವಡಿ ಮಾಡಿದ್ದಾರೆ.
ನನ್ನ ಆಪ್ತ ಸಹಾಯಕನಿಗೆ ಅಪರಿಚಿತ ನಂಬರ್‌ಗಳಿಂದ ಕರೆ ಬರ್ತಾಯಿದೆ. ನನ್ನ ಆಪ್ತ ಸಹಾಯಕನಿಗೆ ಧಮ್ಕಿ ಹಾಕ್ತಾಯಿದ್ದಾರೆ. ಈ ಧಮ್ಕಿ ಬೆದರಿಕೆಗೆ ನಾನು ಹೆದರೋದು ಇಲ್ಲ, ಬೆದರೋದು ಇಲ್ಲ ಅಂತ ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್ ಪ್ರತಿಕ್ರಿಯೆ ನೀಡಿದ್ದಾರೆ.