ಹೊಸದಾಗಿ ಕೆಲಸಕ್ಕೆ ಸೇರುವ ಉದ್ಯೋಗಿಗಳಿಗೆ ಇಪಿಎಫ್‌ಓ ಮಹತ್ವದ ಎಚ್ಚರಿಕೆ ನೀಡಿದೆ. ಪ್ರಧಾನಮಂತ್ರಿ ವಿಕಸಿತ್ ಭಾರತ್ ರೋಜ್ ಗಾರ್ ಯೋಜನೆ ಅಡಿಯಲ್ಲಿ ₹15,000 ಲಾಭ ಪಡೆಯಲು, ಉದ್ಯೋಗಿಗಳು ತಮ್ಮ ಪಿಎಫ್ ಖಾತೆಗೆ ಸಂಬಂಧಿಸಿದ ಡಿಬಿಟಿ ಸೌಲಭ್ಯ ಮತ್ತು ಎನ್‌ಪಿಸಿಐ ಮ್ಯಾಪಿಂಗ್ ಅನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಈ ಪ್ರಕ್ರಿಯೆಗಳನ್ನು ಪೂರ್ಣಗೊಳಿಸದಿದ್ದರೆ ಆರ್ಥಿಕ ನೆರವು ಕೈತಪ್ಪಲಿದೆ.
ಇಪಿಎಫ್‌ಓ ಬಿಗ್ ಅಲರ್ಟ್ ನೀಡಿದೆ. ಹೊಸದಾಗಿ ಕೆಲಸಕ್ಕೆ ಸೇರುವವರು ತಪ್ಪದೇ ಮಾಡಬೇಕಾದವರು ಈ ಕೆಲಸಗಳನ್ನು ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದೆ. ಇಲ್ಲ ಎಂದರೆ ಖಾತೆ ಬೀಳಲಿರುವ 15 ಸಾವಿರ ರೂಪಾಯಿ ಮಿಸ್ ಆಗಲಿದೆ ಎಂದು ತಿಳಿಸಿದೆ. ಬ್ಯಾಂಕ್ ಖಾತೆಗೆ ಡಿಬಿಟಿ ಸೌಲಭ್ಯ ತಪ್ಪದೇ ಇರಬೇಕು, ಎನ್‌ಪಿಸಿಐ ಮ್ಯಾಪಿಂಹ್ ಪೂರ್ತಿಗೊಳಿಸಬೇಕು ಎಂದು ಸ್ಪಷ್ಟಪಡಿಸಿದೆ.
ಇಪಿಎಫ್‌ಓ ಎಚ್ಚರಿಕೆ: ಈ ತಪ್ಪಿನಿಂದ ₹15,000 ನಷ್ಟ!
ಹೊಸದಾಗಿ ಕೆಸಲಕ್ಕೆ ಸೇರುವವರಿಗೆ ಲಾಭಗಳಿಸಲು, ಉದ್ಯೋಗ ಕೊಡುವ ಕಂಪನಿಗಳಿಗೆ ಪ್ರೋತ್ಸಹ ನೀಡಲು ಕೇಂದ್ರ ಸರ್ಕಾರ ಪ್ರಧಾನಮಂತ್ರಿ ವಿಕಸಿತ್ ಭಾರತ್ ರೋಜ್ ಗಾರ್ ಯೋಜನೆಯನ್ನು ಜಾರಿ ಮಾಡಿದೆ. ಈ ಯೋಜನೆಯ ಮೂಲಕ ಹೊಸದಾಗಿ ಕೆಲಸಕ್ಕೆ ಸೇರಿದವರಿಗೆ 15 ಸಾವಿರ ರೂಪಾಯಿ ಆರ್ಥಿಕ ನೆರವು ನೀಡಲಿದೆ. ಒಮ್ಮೆ ಮಾತ್ರ ಈ ಹಣವನ್ನು ಕೇಂದ್ರ ಸರ್ಕಾರ ನೀಡುತ್ತದೆ. ಆದರೆ ಎರಡು ಹಂತಗಳಲ್ಲಿ ಈ ಹಣ ಫಲಾನುಭವಿಯ ಖಾತೆಗೆ ಜಮಾ ಮಾಡಲಿದೆ. ಇನ್ನು, ಕೆಲಸ ನೀಡುವ ಕಂಪನಿಗೂ ಓರ್ವ ಉದ್ಯೋಗಿಗೆ ಮೂರು ಸಾವಿರ ರೂಪಾಯಿಗಳನ್ನು ಕೇಂದ್ರ ಸರ್ಕಾರ ನೀಡುತ್ತದೆ.
ದೇಶದಲ್ಲಿ ಉದ್ಯೋಗ ಸೃಷ್ಟಿ, ಕಂಪನಿಗಳು ಉದ್ಯೋಗ ನೀಡುವುದನ್ನು ಹೆಚ್ಚಿಸಲು ಈ ಯೋಜನೆಯನ್ನು ಜಾರಿ ಮಾಡುತ್ತಿದೆ. ಈ ಯೋಜನೆ ಮೂಲಕ ಲಕ್ಷಾಂತರ ಮಂದಿಗೆ ಉದ್ಯೋಗಗಳು ಲಾಭ ಪಡೆದುಕೊಳ್ಳಲಿದ್ದಾರೆ. ಆದರೆ ಈ ಯೋಜನೆಯ ಕುರಿತು ಈಪಿಎಫ್‌ಓ ಬಿಗ್ ಅಪ್‌ಡೇಟ್ ನೀಡಿ, ಉದ್ಯೋಗಿಗಳಿಗೆ ಅಲರ್ಟ್ ನೀಡಿದೆ.
ಈ ಕೆಲಸ ಮಾಡಿದರೆ ಮಾತ್ರ ಖಾತೆ ಹಣ ಬರುತ್ತದೆ!
ಹೊಸದಾಗಿ ಕೆಲಸಕ್ಕೆ ಸೇರುವವರು ಈ ಯೋಜನೆಗೆ ಲಾಭ ಪಡೆದುಕೊಳ್ಳಲು ಪಿಎಫ್ ಖಾತೆ ಹೊಂದಿರಬೇಕು. ಪಿಎಫ್ (PF) ಯೋಜನೆಯ ವ್ಯಾಪ್ತಿಗೆ ಬರುವ ಕಂಪನಿಗೆ ಸೇರಿದರೆ ಮಾತ್ರ ನೀವು ಹಣವನ್ನು ಪಡೆಯುತ್ತೀರಿ. ನಿಮಗೆ ಪಿಎಫ್ ಖಾತೆ ಇದ್ದರೆ ಮಾತ್ರ ಸಾಕಾಗುವುದಿಲ್ಲ. ನಿಮಗೆ ಯಎಎನ್ ನಂಬರ್ ಕೂಡ ಆಕ್ಟೀವ್ ಮಾಡಿಕೊಳ್ಳಬೇಕು ಎಂದು ಈಪಿಎಫ್‌ಓ ಅಲರ್ಟ್ ನೀಡಿದೆ. ಫೇಸ್ ಅಥೆಂಟಿಕೇಷನ್ ಪ್ರಕ್ರಿಯೆ ಮೂಲಕ ಈ ಪ್ರೋಸೆಸ್ ಪೂರ್ತಿ ಮಾಡಬೇಕು. ಇಷ್ಟೇ ಅಲ್ಲದೆ, ಈಪಿಎಫ್‌ಓ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಡಿಬಿಟಿ ಸೌಕರ್ಯ ಕೂಡ ಇರ್ಬೇಕು ಅಂತ ಚೆಕ್ ಮಾಡಿಕೊಳ್ಳಬೇಕು. ಡಿಬಿಟಿ ಸೌಕರ್ಯ ಇಲ್ಲ ಎಂದರೆ ನಿಮ್ಮ ಬ್ಯಾಂಕ್ ಖಾತೆಯನ್ನು ಅಪ್‌ಡೇಟ್ ಮಾಡಿಕೊಳ್ಳಿ. ಉದ್ಯೋಗಿಗಳು ಈ ಪ್ರಕ್ರಿಯೆ ಪೂರ್ಣಗೊಳಿಸಿದರೆ 15 ಸಾವಿರ ರೂಪಾಯಿ ಖಾತೆ ಜಮೆ ಆಗಲಿದೆ. ಇಲ್ಲ ಎಂದರೆ ಸಮಸ್ಯೆಗಳು ಎದುರಾಗುತ್ತದೆ. ಈ ವಿಚಾರವನ್ನ ಈಪಿಎಫ್ಓ ತನ್ನ ಎಕ್ಸ್ ಫ್ಲಾಟ್‌ಫಾರ್ಮ್‌ನಲ್ಲಿ ತಿಳಿಸಿದೆ.
ಮೊದಲ ವರ್ಷವೇ ಖಾತೆಗೆ ಬರುತ್ತೆ ಹಣ!
ಬ್ಯಾಂಕ್ ಖಾತೆಗೆ ಎನ್‌ಪಿಸಿಐ ಮ್ಯಾಪಿಂಗ್ ಪೂರ್ಣಗೊಳಿಸಬೇಕು. ಪ್ರಧಾನಮಂತ್ರಿ ವಿಕಸಿತ್ ಭಾರತ್ ಯೋಜನೆಯನ್ನು ಆಗಸ್ಟ್ 15, 2025ರಂದು ಪ್ರಧಾನಿ ಮೋದಿ ಪ್ರಾರಂಭಿಸಿದ್ದರು. ಕೆಲಸಕ್ಕೆ ಸೇರಿದ ಮೊದಲ ವರ್ಷವೇ ಈ ಯೋಜನೆಯ ಲಾಭ ಸಿಗಲಿದೆ. ಒಂದು ಲಕ್ಷ ರೂಪಾಯಿ ಒಳಗೆ ಸಂಬಳ ಇರುವ ಈ ಸೌಲಭ್ಯ ಸಿಗುತ್ತದೆ. ಈ ಯೋಜನೆಗೆ ನೀವು ಯಾವುದೇ ವಿಶೇಷ ಅರ್ಜಿ ಸಲ್ಲಿಕೆ ಮಾಡುವ ಅಗತ್ಯವಿಲ್ಲ. ಪಿಎಫ್ ಅಕೌಂಟ್ ಇದ್ದರೆ ಸತತವಾಗಿ ಆರು ತಿಂಗಳ ಕಾಲ ನಿಮ್ಮ ಖಾತೆಗೆ ಪಿಎಫ್ ಹಣ ಜಮೆಯಾದರೆ, ಎರಡು ಹಂತಗಳಲ್ಲಿ ಉದ್ಯೋಗಿಯ ಬ್ಯಾಂಕ್ ಖಾತೆಗೆ ಜಮೆ ಮಾಡಲಿದೆ. ಮೊದಲ ಹಂತದಲ್ಲಿ 8 ಸಾವಿರ ರೂಪಾಯಿ, ಎರಡನೇ ಹಂತದಲ್ಲಿ 7 ಸಾವಿರ ರೂಪಾಯಿ ನಿಮ್ಮ ಖಾತೆಗೆ ಹಣ ಜಮೆ ಆಗುತ್ತದೆ.


