10:46 PM (IST) Aug 29

India News Live 29th August: ಸಾಕ್ಷಿಯೋ? ಅಪರಾಧಿಯೋ? ‘I Nobody’ ಕಥೆಯ ಈ ಪ್ರಶ್ನೆ ನಿಮ್ಮನ್ನು ಕೊನೆಯವರೆಗೂ ಕಾಡುತ್ತೆ!

ಸಾಮಾನ್ಯ ಸರ್ಕಾರಿ ನೌಕರನೊಬ್ಬ ಅಚಾನಕ್ಕಾಗಿ ಬ್ಯಾಂಕ್ ದರೋಡೆ ಕೇಸ್‌ನಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ಪೊಲೀಸ್, ಮೀಡಿಯಾ, ಸಮಾಜದ ಅನುಮಾನ ಹೀಗೆ ಎಲ್ಲ ಕಡೆಯಿಂದ ಒತ್ತಡ ಬಂದಾಗ, ತನ್ನ ಕುಟುಂಬವನ್ನು ಉಳಿಸಲು ಆತ ಏನು ಮಾಡುತ್ತಾನೆ ಎನ್ನುವುದೇ ಈ ವಿಭಿನ್ನ ಥ್ರಿಲ್ಲರ್ ಕಥೆಯ ತಿರುಳು.

Read Full Story
10:32 PM (IST) Aug 29

India News Live 29th August: ಮಧ್ಯರಾತ್ರಿಯಿಂದ ಇನ್​ಸ್ಟಾ, ಫೇಸ್​ಬುಕ್​ ಸ್ಟಾಪ್​! ಹಗಲಲ್ಲೂ ಟೈಮ್​ ಲಿಮಿಟ್​ - ಯಾವಾಗಿಂದ ಜಾರಿ- ಏನಿದು ರೂಲ್ಸ್​

ಸಾಮಾಜಿಕ ಮಾಧ್ಯಮ ವ್ಯಸನದ ಆರೋಪಗಳ ಹಿನ್ನೆಲೆಯಲ್ಲಿ, ಮೆಟಾ ತನ್ನ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹದಿಹರೆಯದವರಿಗಾಗಿ ಕಠಿಣ ನಿಯಮಗಳನ್ನು ಜಾರಿಗೆ ತರುತ್ತಿದೆ. ಈ ಹೊಸ ನಿಯಮಗಳ ಅಡಿಯಲ್ಲಿ, 18 ವರ್ಷದೊಳಗಿನ ಬಳಕೆದಾರರಿಗೆ ಪ್ರತಿದಿನ ಎರಡು ಗಂಟೆಗಳ ಬಳಕೆಯ ಮಿತಿ ಮತ್ತು ರಾತ್ರಿ ವೇಳೆ ಸ್ವಯಂಚಾಲಿತ ಪ್ರವೇಶ ನಿರ್ಬಂಧವನ್ನು ವಿಧಿಸಲಾಗುತ್ತದೆ. ಈ ಬದಲಾವಣೆಗಳು ಮುಂಬರುವ ತಿಂಗಳುಗಳಲ್ಲಿ ಜಾರಿಗೆ ಬರಲಿವೆ.
Read Full Story
10:20 PM (IST) Aug 29

India News Live 29th August: 6, 6, 6, 6, 6, 6.. CSK ಆಟಗಾರನ ರೌದ್ರಾವತಾರ! 234ರ ಸ್ಟ್ರೈಕ್‌ರೇಟ್‌ನಲ್ಲಿ ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿದ ಸ್ಟಾರ್‌

ಸಿಎಸ್‌ಕೆ ಆಟಗಾರ ಡೆವಾಲ್ಡ್ ಬ್ರೆವಿಸ್ ಜಿಂಬಾಬ್ವೆ ವಿರುದ್ಧದ ಟಿ20 ಪಂದ್ಯದಲ್ಲಿ ಕೇವಲ 32 ಎಸೆತಗಳಲ್ಲಿ ಅಜೇಯ 75 ರನ್ ಚಚ್ಚುವ ಮೂಲಕ ದಕ್ಷಿಣ ಆಫ್ರಿಕಾಕ್ಕೆ 7 ವಿಕೆಟ್‌ಗಳ ಭರ್ಜರಿ ಜಯ ತಂದುಕೊಟ್ಟಿದ್ದಾರೆ. 234ರ ಸ್ಟ್ರೈಕ್ ರೇಟ್‌ನಲ್ಲಿ ಆಡಿ 6 ಭರ್ಜರಿ ಸಿಕ್ಸರ್ ಹಾಗೂ 7 ಬೌಂಡರಿ ಬಾರಿಸಿದ ಬ್ರೆವಿಸ್, ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾವನ್ನು ತ್ರಿಕೋನ ಸರಣಿಯಲ್ಲಿ ಜೀವಂತವಾಗಿರಿಸಿದ್ದಾರೆ.

Read Full Story
09:16 PM (IST) Aug 29

India News Live 29th August: ಟಾಕ್ಸಿಕ್ 'Vicious Fight' ಸೀಕ್ರೆಟ್ ಔಟ್ - ಯಶ್ ಕ್ರಿಯೇಟಿವಿಟಿಗೆ ಹಾಲಿವುಡ್ ಸ್ಟಂಟ್ ಮಾಸ್ಟರ್ ಫಿದಾ

'ಟಾಕ್ಸಿಕ್' ಸಿನಿಮಾದ 'ವಿಷಯಸ್ ಫೈಟ್' ಅನ್ನೋ ಸರ್ಕಸ್ ಆ್ಯಕ್ಷನ್ ಸೀನ್‌ನ ಮೇಕಿಂಗ್ ವಿಡಿಯೋ ರಿಲೀಸ್ ಆಗಿದೆ. ಹಾಲಿವುಡ್ ಸ್ಟಂಟ್ ಕೋಆರ್ಡಿನೇಟರ್ ಜೆಜೆ ಪೆರ್ರಿ, ನಟ ಯಶ್ ಅವರ ಫಿಟ್ನೆಸ್ ಹಾಗೂ ಕ್ರಿಯೇಟಿವ್ ಇನ್‌ಪುಟ್‌ಗಳನ್ನು ಹಾಡಿ ಹೊಗಳಿದ್ದಾರೆ.

Read Full Story
09:16 PM (IST) Aug 29

India News Live 29th August: ವಿಚಿತ್ರ ಕಳ್ಳತನ! ಮನೆ ಕಳ್ಳತನಕ್ಕೆ ಬಂದ ಕಳ್ಳರು ಈ ನಾಯಿಗೆ ಏನು ಮಾಡಿದ್ದಾರೆ ನೋಡಿ..

ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ಕಳ್ಳತನ ಮಾಡುವಾಗ ಸಾಕುನಾಯಿ ಬೊಗಳಬಾರದು ಎಂಬ ಕಾರಣಕ್ಕೆ ಕಳ್ಳರು ಅದರ ಬಾಯಿಗೆ ಪ್ಲಾಸ್ಟರ್ ಅಂಟಿಸಿ ದರೋಡೆ ನಡೆಸಿದ್ದಾರೆ. ಮಧ್ಯರಾತ್ರಿ ಸುರಿದ ಭಾರಿ ಮಳೆಯ ಲಾಭ ಪಡೆದು ಮನೆಯ ಬೀಗ ಮುರಿದ ಖದೀಮರು ಸುಮಾರು 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 40,000 ರೂ. ನಗದು ದೋಚಿ ಪರಾರಿಯಾಗಿದ್ದಾರೆ.

Read Full Story
07:28 PM (IST) Aug 29

India News Live 29th August: ಏಷ್ಯನ್ ಗೇಮ್ಸ್‌ಗೂ ಮುನ್ನ ಭಾರತಕ್ಕೆ ಬಿಗ್ ಶಾಕ್; ನೀರಜ್ ಚೋಪ್ರಾ ಟೂರ್ನಿಯಿಂದ ಔಟ್!

ಒಲಿಂಪಿಕ್ ಪದಕ ವಿಜೇತ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಅವರು ಪಾದದ ಗಾಯದ ಕಾರಣದಿಂದಾಗಿ ಈ ಸೀಸನ್‌ನ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಈ ನಿರ್ಧಾರದಿಂದಾಗಿ, ಅವರು ಮುಂಬರುವ ಏಷ್ಯನ್ ಗೇಮ್ಸ್ ಮತ್ತು ಡೈಮಂಡ್ ಲೀಗ್ ಫೈನಲ್‌ನಲ್ಲಿ ಭಾಗವಹಿಸುವುದಿಲ್ಲ. ತರಬೇತಿ ವೇಳೆ ಗಾಯಗೊಂಡಿರುವ ಬಗ್ಗೆ ಅವರು ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
Read Full Story
06:59 PM (IST) Aug 29

India News Live 29th August: Income Tax - ಆಗಸ್ಟ್ 31ರ ಗಡುವು ನಿಮಗೂ ಅನ್ವಯಿಸುತ್ತಾ? ಯಾರಿಗೆಲ್ಲಾ ಕಡ್ಡಾಯ?

ವ್ಯಾಪಾರ ಅಥವಾ ವೃತ್ತಿ ಆದಾಯವಿದ್ದು, ಟ್ಯಾಕ್ಸ್ ಆಡಿಟ್ ಅಗತ್ಯವಿಲ್ಲದವರಿಗೆ ಐಟಿಆರ್ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನವಾಗಿದೆ. ಈ ಗಡುವು ತಪ್ಪಿದರೆ ದಂಡ ಸಹಿತ 'ಬಿಲೇಟೆಡ್ ರಿಟರ್ನ್' ಸಲ್ಲಿಸಬಹುದು, ಆದರೆ ಆಡಿಟ್ ಅಗತ್ಯವಿರುವವರಿಗೆ ಅಕ್ಟೋಬರ್ 31ರವರೆಗೆ ಸಮಯಾವಕಾಶವಿದೆ.
Read Full Story
06:32 PM (IST) Aug 29

India News Live 29th August: 22 ಸಾವಿರ ಕೋಟಿ ಸಾಲಕ್ಕೆ 6.5 ಕೋಟಿ ರೂ. ಇತ್ಯರ್ಥ ವಿವಾದ - ಅಂಬಾನಿ ವಿರುದ್ಧ ಸುಭಾಷ್‌ ಚಂದ್ರ ಗರಂ, ನನ್ನ ಬಳಿ ಈಗೇನೂ ಇಲ್ಲ!

ಎಸ್ಸೆಲ್ ಗ್ರೂಪ್ ಸಂಸ್ಥಾಪಕ ಡಾ. ಸುಭಾಷ್ ಚಂದ್ರ ಅವರು, ಮುಖೇಶ್ ಅಂಬಾನಿ ಮಾಲೀಕತ್ವದ 'ನೆಟ್‌ವರ್ಕ್ 18' ತಮ್ಮ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ತಮ್ಮ ಮೇಲಿರುವುದು ವೈಯಕ್ತಿಕ ಸಾಲವಲ್ಲ, ಬದಲಿಗೆ ಕಂಪನಿ ಸಾಲಗಳಿಗೆ ನೀಡಿದ ವೈಯಕ್ತಿಕ ಗ್ಯಾರಂಟಿ ಎಂದು ಸ್ಪಷ್ಟಪಡಿಸಿರುವ ಅವರು, ಈ ದುರುದ್ದೇಶಪೂರಿತ ಪ್ರಚಾರವನ್ನು ನಿಲ್ಲಿಸುವಂತೆ ಅಂಬಾನಿಯವರಿಗೆ ಮನವಿ ಮಾಡಿದ್ದಾರೆ.
Read Full Story
05:57 PM (IST) Aug 29

India News Live 29th August: Kidney Stone - ಕಿಡ್ನಿಯಲ್ಲಿ ಕಲ್ಲು ಉಂಟಾದರೆ ಹೇಗೆ ಗೊತ್ತಾಗುತ್ತೆ? ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ, ಅಪಾಯ ಕಟ್ಟಿಟ್ಟ ಬುತ್ತಿ!

ಇತ್ತೀಚಿಗಿನ ವರ್ಷಗಳಲ್ಲಿ ನಮ್ಮ ಅನಾರೋಗ್ಯಕರ ಜೀವನಶೈಲಿ ಹಾಗೂ ಆಹಾರ ಪದ್ದತಿಯಿಂದ ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆಯಾಗುವುದನ್ನು ಕೇಳುತ್ತಲೇ ಬರುತ್ತಿದ್ದೇವೆ. ಅಷ್ಟಕ್ಕೂ ಕಿಡ್ನಿಯಲ್ಲಿ ಕಲ್ಲಾಗುವುದು ಅಂದರೆ ಏನು? ಅದರ ಲಕ್ಷಣಗಳೇನು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್

Read Full Story
05:55 PM (IST) Aug 29

India News Live 29th August: ನಟಿ ಮೀನಾಕ್ಷಿ ಚೌಧರಿಗೆ ಸಿಕ್ಕಾಪಟ್ಟೆ ಇಷ್ಟವಾದ ಆ ಹೀರೋ ಯಾರು? ಹೆಸರು ಕೇಳಿ ಅಭಿಮಾನಿಗಳೇ ಶಾಕ್

ಟಾಲಿವುಡ್ ನಟಿ ಮೀನಾಕ್ಷಿ ಚೌಧರಿ ಸಿಂಬು ಬಗ್ಗೆ ಹಿಂದೆ ನೀಡಿದ್ದ ಹೇಳಿಕೆಯೊಂದು ಇದೀಗ ಮತ್ತೆ ವೈರಲ್ ಆಗಿದೆ. ಸಿನಿಮಾ ಇಂಡಸ್ಟ್ರಿಯ ಯಾವ ಹೀರೋ ಜೊತೆ ‘ಮೂವಿ ಡೇಟ್’ಗೆ ಹೋಗಲು ಇಷ್ಟಪಡುತ್ತೀರಿ ಎಂಬ ಪ್ರಶ್ನೆಗೆ ಮೀನಾಕ್ಷಿ, ತಾನು ಸಿಂಬು ಜೊತೆ ಹೋಗಲು ಇಷ್ಟಪಡುತ್ತೇನೆ ಎಂದು ಹೇಳಿದ್ದರು.

Read Full Story
05:37 PM (IST) Aug 29

India News Live 29th August: 1978ರಲ್ಲಿ ದೇಶವನ್ನೇ ಬೆಚ್ಚಿಬೀಳಿಸಿದ ರಂಗಾ-ಬಿಲ್ಲಾ ಕೇಸ್ - ಈಗ OTTಯಲ್ಲಿ ಸೃಷ್ಟಿಸುತ್ತಿದೆ ಭಯ

OTT ಪ್ಲಾಟ್‌ಫಾರ್ಮ್‌ಗಳು ಹೊಸ ಸಿನಿಮಾಗಳು ಮತ್ತು ವೆಬ್ ಸಿರೀಸ್‌ಗಳಿಗೆ ದೊಡ್ಡ ವೇದಿಕೆಯಾಗಿವೆ. ಪ್ರತಿವಾರ ಹತ್ತಾರು ಸಿನಿಮಾಗಳು, ಸಿರೀಸ್‌ಗಳು ಬಿಡುಗಡೆಯಾದರೂ ಕೆಲವೇ ಕೆಲವು ಕಂಟೆಂಟ್‌ಗಳು ಮಾತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತವೆ.

Read Full Story
05:36 PM (IST) Aug 29

India News Live 29th August: 'ಅಪ್ಪ, ಅಮ್ಮನ ಒಬ್ಬಂಟಿಯಾಗಿ ಬಿಡಬೇಡ..' ಬೆಳಗ್ಗೆ ರಾಖಿ ಕಟ್ಟಿಸಿಕೊಂಡು ಸಂಜೆ ಅಕ್ಕನಿಗೆ ಶಾಕಿಂಗ್‌ ಗಿಫ್ಟ್‌ ಕೊಟ್ಟ ತಮ್ಮ

ಬೆಳಗ್ಗೆ ಅಕ್ಕನ ಮನೆಗೆ ಹೋಗಿ ಖುಷಿ ಖುಷಿಯಾಗಿ ರಾಖಿ ಕಟ್ಟಿಸಿಕೊಂಡು ಬಂದಿದ್ದ. ಸಂಜೆ ವೇಳೆಗೆ ಅದೇ ಅಕ್ಕನಿಗೆ ಶಾಕಿಂಗ್‌ ಮೆಸೇಜ್‌ ಒಂದು ಬಂದಿತ್ತು. ಮಮತೆಯ ತೊಟ್ಟಿಲಾಗಿದ್ದ ಅಕ್ಕನಿಗೆ ರಕ್ಷಾ ಬಂಧನ್‌ ದಿನವೇ ತಮ್ಮ ಮರೆಯಲಾಗದ ನೆನಪನ್ನು ಕೊಟ್ಟು ಹೋಗಿದ್ದಾನೆ.

Read Full Story
05:34 PM (IST) Aug 29

India News Live 29th August: Planetary Transit - ಸೆಪ್ಟೆಂಬರ್‌ನಲ್ಲಿ 4 ಗ್ರಹಗಳ ಮಹಾಸಂಚಾರ - ಈ 8 ರಾಶಿಗಳಿಗೆ ಶುಭ ದಿನಗಳು ಆರಂಭ!

ಸೆಪ್ಟೆಂಬರ್ ತಿಂಗಳಲ್ಲಿ ಸೂರ್ಯ, ಬುಧ, ಶುಕ್ರ ಮತ್ತು ಮಂಗಳ ಗ್ರಹಗಳು ತಮ್ಮ ರಾಶಿಗಳನ್ನು ಬದಲಾಯಿಸಲಿವೆ. ಈ ಮಹಾ ಸಂಚಾರವು ಕೆಲವು ರಾಶಿಗಳಿಗೆ ಅದೃಷ್ಟವನ್ನು ತರಲಿದೆ. ಆ ರಾಶಿಗಳು ಯಾವುವು ಅಂತ ನೋಡೋಣ.

Read Full Story
05:18 PM (IST) Aug 29

India News Live 29th August: ಶೀಘ್ರವೇ ಆಗಸಕ್ಕೆ ಚಿಮ್ಮಲಿದೆ ಇಸ್ರೋದ GSLV-F17 ರಾಕೆಟ್, ಬಾಹ್ಯಾಕಾಶದಲ್ಲಿದ್ದು ಭಾರತ ಕಾಯಲಿದೆ EOS-5!

ಹಿಂದಿನ ವೈಫಲ್ಯಗಳಿಂದ ಪಾಠ ಕಲಿತಿರುವ ಇಸ್ರೋ, GSLV-F17 ರಾಕೆಟ್ ಮೂಲಕ 'EOS-5' ಭೂ-ವೀಕ್ಷಣಾ ಉಪಗ್ರಹವನ್ನು ಉಡಾವಣೆ ಮಾಡಲು ಸಜ್ಜಾಗಿದೆ. ಈ ಉಪಗ್ರಹವು ಭೂಮಿಯಿಂದ 36,000 ಕಿ.ಮೀ ಎತ್ತರದಲ್ಲಿ ನೆಲೆನಿಂತು, ನೈಸರ್ಗಿಕ ವಿಕೋಪಗಳ ಮೇಲೆ ನಿರಂತರ ನಿಗಾ ವಹಿಸಲಿದೆ. ಈ ಉಡಾವಣೆಯು 'ಗಗನಯಾನ್' ಸೇರಿದಂತೆ ಇಸ್ರೋದ ಭವಿಷ್ಯದ ಯೋಜನೆಗಳಿಗೆ ನಿರ್ಣಾಯಕವಾಗಿದೆ.
Read Full Story
05:05 PM (IST) Aug 29

India News Live 29th August: 'ಮನುಷ್ಯರಲ್ಲಿ 2 ರೀತಿ, ಹಣ ಇರೋರು' - ನಾಗಾರ್ಜುನ 100ನೇ ಸಿನಿಮಾ ಟೈಟಲ್ ಗ್ಲಿಂಪ್ಸ್ ರೋಮಾಂಚನಕಾರಿ

ಕಿಂಗ್ ನಾಗಾರ್ಜುನ ಅವರ ಬಹುನಿರೀಕ್ಷಿತ 100ನೇ ಸಿನಿಮಾ 'ಕಿಂಗ್ 100'ನ ಟೈಟಲ್ ಗ್ಲಿಂಪ್ಸ್ ಬಿಡುಗಡೆಯಾಗಿದೆ. ಕಾರ್ತಿಕ್ ನಿರ್ದೇಶನದ ಈ ಚಿತ್ರದಲ್ಲಿ ನಾಗಾರ್ಜುನ ಅವರು ಬಡತನದಿಂದ ಸಾವಿರಾರು ಕೋಟಿ ರೂಪಾಯಿ ಸಾಮ್ರಾಜ್ಯ ಕಟ್ಟಿದ ಉದ್ಯಮಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

Read Full Story
04:33 PM (IST) Aug 29

India News Live 29th August: ಪ್ರವಾಹದಲ್ಲಿ ಕೊಚ್ಚಿಬಂದ ಬ್ಯಾಂಕ್‌ ಲಾಕರ್..‌ ಅದೃಷ್ಟ ಖುಲಾಯಿಸಿತು ಎಂದು 57 ಲಕ್ಷ ರೂಪಾಯಿ ದೋಚಿದರು

ನೇಪಾಳದ ರಸುವಾ ಜಿಲ್ಲೆಯಲ್ಲಿ ಪ್ರವಾಹಕ್ಕೆ ಕೊಚ್ಚಿಹೋಗಿದ್ದ ನಗದು ತುಂಬಿದ ಭದ್ರತಾ ಪೆಟ್ಟಿಗೆಯೊಂದು ನೆರೆಯ ಧಾಡಿಂಗ್ ಜಿಲ್ಲೆಯ ತ್ರಿಶೂಲಿ ನದಿಯ ದಡದಲ್ಲಿ ಪತ್ತೆಯಾಗಿದೆ. ಈ ಪೆಟ್ಟಿಗೆಯನ್ನು ಕಂಡ ಸ್ಥಳೀಯರು ಒಡೆದು ಹಣ ದೋಚಿದ್ದು, ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ 29 ಜನರನ್ನು ಬಂಧಿಸಿ ಸುಮಾರು 57 ಲಕ್ಷ ರೂ. ನಗದನ್ನು ಜಪ್ತಿ ಮಾಡಿದ್ದಾರೆ.

Read Full Story
04:27 PM (IST) Aug 29

India News Live 29th August: 2027ರಲ್ಲಿ ದೇಶೀಯ ಹೋಟೆಲ್ ಉದ್ಯಮಕ್ಕೆ ಭಾರಿ ಸುಗ್ಗಿ ಕಾಲ, ಲೀಲಾ, ತಾಜ್, ಐಟಿಸಿ ಆದಾಯದಲ್ಲಿ ಭಾರಿ ಜಿಗಿತ!

ಫಿಲಿಪ್ ಕ್ಯಾಪಿಟಲ್ ವರದಿಯ ಪ್ರಕಾರ, ದೇಶೀಯ ಪ್ರವಾಸೋದ್ಯಮ ಮತ್ತು ಕಾರ್ಪೊರೇಟ್ ಕ್ಷೇತ್ರದ ಚೇತರಿಕೆಯಿಂದಾಗಿ 2027ರ ವೇಳೆಗೆ ಭಾರತೀಯ ಹೋಟೆಲ್ ಉದ್ಯಮವು ಭಾರಿ ಪ್ರಗತಿ ಸಾಧಿಸಲಿದೆ. ಜಾಗತಿಕ ಸವಾಲುಗಳ ನಡುವೆಯೂ, ವಿಹಾರ ತಾಣಗಳಲ್ಲಿನ ಬೇಡಿಕೆ ಹೆಚ್ಚಳ ಮತ್ತು ಸೀಮಿತ ಹೊಸ ಹೋಟೆಲ್ ಪೂರೈಕೆಯಿಂದಾಗಿ ಉದ್ಯಮವು ಮೊದಲ ತ್ರೈಮಾಸಿಕದಲ್ಲಿ ಉತ್ತಮ ಆದಾಯ ಗಳಿಸಿದೆ.
Read Full Story
04:19 PM (IST) Aug 29

India News Live 29th August: 'ಬಿಗ್ ಬಾಸ್' ಶೋನ ನಿಜವಾದ ಓನರ್ ಇವರೇ ನೋಡಿ.. ಪ್ರತೀ ಸೀಸನ್‌ಗೆ ಗಳಿಸುವ ಹಣ ಎಷ್ಟು ಗೊತ್ತಾ?

ಭಾರತದಲ್ಲಿ 2006ರಲ್ಲಿ ಮೊದಲ ಬಾರಿಗೆ ಬಿಗ್ ಬಾಸ್ ಶುರುವಾದಾಗ ಅರ್ಷದ್ ವಾರ್ಸಿ ನಿರೂಪಣೆ ಮಾಡಿದ್ದರು. ಆಮೇಲೆ ಶಿಲ್ಪಾ ಶೆಟ್ಟಿ, ಮಹಾ ನಾಯಕ ಅಮಿತಾಭ್ ಬಚ್ಚನ್ ಕೂಡ ಬಂದು ಹೋದರು. ಆದರೆ ಬಾಲಿವುಡ್‌ನಲ್ಲಿ ಸಲ್ಮಾನ್ ಖಾನ್ ಮತ್ತು ಕನ್ನಡದಲ್ಲಿ ಕಿಚ್ಚ ಸುದೀಪ್ ಈ ಶೋಗೆ ಬ್ರಾಂಡ್ ವ್ಯಾಲ್ಯೂ ತಂದುಕೊಟ್ಟರು. ಈ ಸೀಕ್ರೆಟ್ ನೋಡಿ..

Read Full Story
04:08 PM (IST) Aug 29

India News Live 29th August: ಪ್ರತಿ 10 ನಿಮಿಷಕ್ಕೊಂದು ಭಯಾನಕ ತಿರುವು; OTTಯಲ್ಲಿರೋ ನಿಗೂಢ ಮಲಯಾಳಂ ಹಾರರ್ ಸಿನಿಮಾ

2021ರಲ್ಲಿ ಬಿಡುಗಡೆಯಾದ ಮಲಯಾಳಂನ ಒಂದು ನಿಗೂಢ ಹಾರರ್ ಸಿನಿಮಾವಾಗಿದೆ. ಆರೋಪಿಯೊಬ್ಬನನ್ನು ಬಂಧಿಸಲು ಕಾಡಿನ ಗ್ರಾಮಕ್ಕೆ ಮಾರುವೇಷದಲ್ಲಿ ಬರುವ ಪೊಲೀಸರು, ಅಲ್ಲಿನ ವಿಚಿತ್ರ ಘಟನೆಗಳಿಂದ ಭಯಭೀತರಾಗಿ ಸಿಕ್ಕಿಹಾಕಿಕೊಳ್ಳುತ್ತಾರೆ. ಈ ರೋಚಕ ಸಿನಿಮಾ ಸೋನಿ ಲಿವ್ ಓಟಿಟಿಯಲ್ಲಿ ಲಭ್ಯವಿದೆ.

Read Full Story
03:55 PM (IST) Aug 29

India News Live 29th August: Mamata Banerjee - ಕೋರ್ಟ್ ಆದೇಶ ಉಲ್ಲಂಘಿಸಿ ರ‍್ಯಾಲಿ; ಮಮತಾ ಬ್ಯಾನರ್ಜಿ ವಿರುದ್ಧ FIR!

ಕೋಲ್ಕತ್ತಾದಲ್ಲಿ ಹೈಕೋರ್ಟ್ ಆದೇಶವನ್ನು ಮೀರಿ ಬೃಹತ್ ರ‍್ಯಾಲಿ ನಡೆಸಿದ ಆರೋಪದ ಮೇಲೆ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಮತ್ತು ಆಯೋಜಕರ ವಿರುದ್ಧ ಕೋಲ್ಕತ್ತಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Read Full Story