Asianet Suvarna News Asianet Suvarna News

ಗರ್ಭಾವಸ್ಥೆಯ ಮೊದಲ ಮೂರು ತಿಂಗಳು ಯಾಕೆ ತುಂಬಾ ಮುಖ್ಯ?

ಗರ್ಭಾವಸ್ಥೆಯಲ್ಲಿ ತಾಯಿ ಹಾಗೂ ಮಗುವಿನ ಆರೋಗ್ಯದ ಬಗ್ಗೆ ಅತೀ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಅದರಲ್ಲೂ ಗರ್ಭಿಣಿಗೆ ಮೊದಲ ಮೂರು ತಿಂಗಳು ತುಂಬಾ ಮುಖ್ಯ ಎಂದು ಹೇಳುತ್ತಾರೆ. ಅದ್ಯಾಕೆ?
 

ತಾಯ್ತನ ಅನ್ನೋದು ಪ್ರತಿ ಹೆಣ್ಣಿನ ಜೀವನದಲ್ಲೂ ಅತ್ಯಂತ ಮಹತ್ವದ್ದಾಗಿದೆ. ಒಂಭತ್ತು ತಿಂಗಳುಗಳ ಕಾಲ ಮಗುವೊಂದನ್ನು ಗರ್ಭದಲ್ಲಿಟ್ಟು, ಎಲ್ಲಾ ನೋವನ್ನು ಸಹಿಸಿಕೊಂಡು, ಅದಕ್ಕೆ ಜನ್ಮ ನೀಡುವುದು ಆಕೆಯ ಪಾಲಿಗೆ ಪುರ್ನಜನ್ಮವಿದ್ದಂತೆ ಎಂದೇ ಎಲ್ಲರೂ ಹೇಳುತ್ತಾರೆ. ಯಾಕೆಂದರೆ ಕೆಲವೊಮ್ಮೆ ಹೆರಿಗೆಯ ಸಂದರ್ಭದಲ್ಲಿ ಮಗುವಿನ ಅಥವಾ ತಾಯಿಯ ಜೀವಕ್ಕೆ ಅಪಾಯವಾಗುವುದೂ ಇದೆ. ಹೀಗಾಗಿ ಗರ್ಭಧಾರಣೆಯ ಸಂದರ್ಭ ಮಹಿಳೆ ಎಷ್ಟು ಎಚ್ಚರಿಕೆಯಿಂದಿದ್ದರೂ ಸಾಲದು. ಸುರಕ್ಷಿತ ತಾಯ್ತನವನ್ನು ಪ್ರತಿಯೊಬ್ಬ ಮಹಿಳೆಯರೂ ಬಯಸ್ತಾರೆ. ಆದರೆ ಅದಕ್ಕಾಗಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳುವುದೂ ಮುಖ್ಯ.  ಅದರಲ್ಲೂ ಗರ್ಭಿಣಿಗೆ ಮೊದಲ ಮೂರು ತಿಂಗಳು ತುಂಬಾ ಮುಖ್ಯ ಎಂದು ಹೇಳುತ್ತಾರೆ. ಅದ್ಯಾಕೆ? ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು  ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ.ಅರುಣಾ ಮುರಳೀಧರ್ ಮಾಹಿತಿ ನೀಡಿದ್ದಾರೆ.

ಗರ್ಭಿಣಿಯಾಗುವ ಮುಂಚೆ ಯಾವೆಲ್ಲಾ ಮುಂಜಾಗ್ರತ ಕ್ರಮ ತಗೊಳ್ಬೇಕು


 

Video Top Stories