ದೊಡ್ಮನೆಯಲ್ಲಿ ಪ್ರೇಮ, ಜಗಳ, ಡ್ರಾಮಾ: ಸೇರಿಗೆ ಸವಾ ಸೆರ್.. ಕಾವ್ಯಗೆ ಗಿಲ್ಲಿ ಕೌಂಟರ್!

ಬಿಗ್ ಬಾಸ್ ಮನೆ ಈಗ ಬೆಂಕಿ ಉಂಡೆ ಆಗಿದೆ. ಜಂಟಿ ಆಗಿದ್ದವರು ಒಂಟಿ ಆಗಿ ಹೊರಡೋ ಸಮಯ ಬಂದಿದೆ. ಕಾವು ವಿಚಾರದಲ್ಲಿ ಯಾರ್ ಏನೆ ಆಗ್ಲಿ ನನ್ ನಿನ್ನ ಬಿಡಲಾರೆ ಏನ್ನುತಿದ್ದ ಗಿಲ್ಲಿ ನಟ ಈಗ ಕಾವ್ಯ ಕೌಂಟರ್ ಮೇಲೆ ಕೌಂಟರ್ ಕೊಡ್ತಾ ಇದ್ದಾನೆ.

Share this Video
  • FB
  • Linkdin
  • Whatsapp

ಬಿಗ್ ಬಾಸ್ ಮನೆ ಈಗ ಬೆಂಕಿ ಉಂಡೆ ಆಗಿದೆ. ಜಂಟಿ ಆಗಿದ್ದವರು ಒಂಟಿ ಆಗಿ ಹೊರಡೋ ಸಮಯ ಬಂದಿದೆ. ಕಾವು ವಿಚಾರದಲ್ಲಿ ಯಾರ್ ಏನೆ ಆಗ್ಲಿ ನನ್ ನಿನ್ನ ಬಿಡಲಾರೆ ಏನ್ನುತಿದ್ದ ಗಿಲ್ಲಿ ನಟ ಈಗ ಕಾವ್ಯ ಕೌಂಟರ್ ಮೇಲೆ ಕೌಂಟರ್ ಕೊಡ್ತಾ ಇದ್ದಾನೆ. ಅಷ್ಟೇ ಅಲ್ಲ ಈ ಬಿಗ್ ಬಾಸ್ ಮನೆಗೆ ಪ್ರೇಮ ಗುರು ಬೇರೆ ಎಂಟ್ರಿ ಕೊಟ್ಟಿದಾರೆ. ಹಾಗಾದ್ರೆ ಕಳೆದ ರಾತ್ರಿ ಓಂಟಿ ಮನೆಯಲ್ಲಿ ಏನೆಲ್ಲ ಅಯ್ತು. ಒಂಟಿ ಮನೆ ಆಟ ಗೆಲ್ಲೋಕೆ ಗಿಲ್ಲಿ ಕಾವ್ಯಾ ಮಾತಿಗೆ ಮಾತು ಏಟಿಗೆ ಏಟು ಅಂತ ವಾರ್ ಮಾಡಿದ್ದಾರೆ. ಬಿಗ್ ಬಾಸ್ ಮನೆಯ ಚಾಕಲೇಟ್ ಹುಡ್ಗ ಸೂರಜ್ ರಾಶಿಕಾಗೆ ರೋಜ್ ಕೊಟ್ಟು ಸ್ನೇಹವನ್ನ ಕುದುರಿಸಿಕೊಂಡಿದ್ದು ನೀವೆಲ್ಲ ನೋಡಿದ್ದೀರಾ. ಇಬ್ರು ಲವ್ ವಲ್ಲಿ ಬಿದ್ದಿದ್ದಾರೆ ಅಂತ ಸುದ್ದಿ ಆಗಿದ್ದು ಸುಳ್ಳಲ್ಲಾ..ಒಂದು ಕಡೆ ಸೂರಜ್ ರಾಶಿಕ ಜೋಡಿ ಆದ್ರೆ ಮತ್ತೊಂದ್ ಕಡೆ ಅವರಿಗೆ ಟಕ್ಕರ್ ಕೊಡೋಕೆ ಗಿಲ್ಲಿ ಕಾವ್ಯಾ ನಿಂತಿದ್ರು.

ಆದ್ರೆ ಗೊಂಬೆ ಆಡ್ಸೋ ಕೀಲಿ ಕೈ ಈಗ ರಕ್ಷಿತಾ ದೃವಂತ್ ಕೈಗೆ ಬಿಗ್ ಬಾಸ್ ಕೊಟ್ಟಿದ್ದಾರೆ. ಈಗ್ಲೇ ನೋಡಿ ಒಂಟಿ ಮನೆ ಮಜಾ ಬಂದಿರೋದು. ಸೂರಜ್ ಕಾವ್ಯನಾ ಜೋಡಿ ಮಾಡಿ ಗಿಲ್ಲಿ ಜೊತೆ ಕಾವ್ಯ ಕಿತ್ತಾಡೋ ಹಾಗಾಯ್ತು. ಕಾವ್ಯ ಗಿಲ್ಲಿ ಈ ಬಾರಿಯ ಬಿಗ್ ಬಾಸ್ ಶೋ ನ ಬೆಸ್ಟ್ ಜೋಡಿ. ಇವರಿಬ್ಬರು ಫೈನೆಲ್ ಗೆ ಬರ್ಬೇಕು ಅನ್ನೋದು ಇಬ್ಬರ ಫ್ಯಾನ್ಸ್ ಅಸೆ. ಇಷ್ಟು ದಿನ ಫ್ರೆಂಡ್ ಶಿಪ್ ನ ಉಳಿಸಿಕೊಂಡು ಬಂದಿರೋ ಗಿಲ್ಲಿ ಕಾವ್ಯಾ ಈಗ ಕಿತ್ತಾಟಕೆ ನಿಂತಿದಾರೆ. ಇದೆಲ್ಲಾ ಬಿಗ್ ಬಾಸ್ ನ ಮಹಿಮೆ ಅನೋದು ಮರೀಬೇಡಿ. ಬಿಗ್ ಬಾಸ್ ಮನೆ ಲವ್ ಸ್ಟೋರಿಗಳಿಗೆ ಸಾಕ್ಷಿಯಾಗಿದ್ದು ಇದೆ. ಈ ಮನೆ ಪ್ರೇಮದ ಕಥೆ ಇರದೆ ಪೂರ್ಣ ಆಗಲ್ಲ. ಅಷ್ಟೇ ಅಲ್ಲ ಈ ಮನೆ ಯಾರನ್ನ ಸೆಳೆಯೋಲ್ಲ ಹೇಳಿ. ನಮ್ ಕ್ರೇಜಿ ಸ್ಟಾರ್ ರವಿ ಚಂದ್ರನ್ ಕೂಡ ಮನೆಗೆ ಬಂದಿದ್ರು. ರವಿ ಚಂದ್ರನ್ ಅಲ್ಲಿರೋ ಜೋಡಿಗಳಿಗೆ ಪ್ರಮಾದ ಪಾಠ ಮಾಡಿದ್ದಾರೆ.

Related Video