ಸಮರ್ಜಿತ್ ಲಂಕೇಶ್-ಮೋಹನ್ ಲಾಲ್ ಜೋಡಿ: ವೃಷಭ ಚಿತ್ರದ ಅದ್ದೂರಿ ಟ್ರೇಲರ್ ಅನಾವರಣ

ಸ್ಯಾಂಡಲ್‌ವುಡ್ ನಿರ್ದೇಶಕ ನಂದ ಕಿಶೋರ್ ಆ್ಯಕ್ಷನ್-ಕಟ್ ಹೇಳಿರುವ ‘ವೃಷಭ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ನಿನ್ನೆ ಕೊಚ್ಚಿಯಲ್ಲಿ ಅದ್ದೂರಿಯಾಗಿ ಟ್ರೇಲರ್ ರಿಲೀಸ್ ಕಾರ್ಯಕ್ರಮ ನಡೆಯಿತು.

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್ ನಿರ್ದೇಶಕ ನಂದ ಕಿಶೋರ್ ಆ್ಯಕ್ಷನ್-ಕಟ್ ಹೇಳಿರುವ ‘ವೃಷಭ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ನಿನ್ನೆ ಕೊಚ್ಚಿಯಲ್ಲಿ ಅದ್ದೂರಿಯಾಗಿ ಟ್ರೇಲರ್ ರಿಲೀಸ್ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಚಿತ್ರದ ತಾರಾಗಣದಲ್ಲಿರುವ ಮೋಹನ್ ಲಾಲ್, ಸಮರ್ಜಿತ್ ಲಂಕೇಶ್, ರಾಗಿಣಿ ದ್ವಿವೇದಿ ಮತ್ತು ನಯನ್ ಸಾರಿಕಾ, ನಿರ್ದೇಶಕ ನಂದ ಕಿಶೋರ್ ಹಾಜರಿದ್ರು. ವೃಷಭ‌ ಸಿನಿಮಾ ಪ್ರೀತಿ, ವಿಧಿ ಮತ್ತು ತ್ಯಾಗದ ಕಥೆಯಾಗಿದೆ. ಮೋಹನ್ ಲಾಲ್ ಡಬ್ಬಲ್ ರೋಲ್ ನಲ್ಲಿ ನಟಿಸಿದ್ದಾರೆ. ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ ಮೋಹನ್ ಲಾಲ್ ಮಗನ ಪಾತ್ರ ಮಾಡಿದ್ದಾರೆ. ಡಿಸೆಂಬರ್ 25ಕ್ಕೆ ವಿಶ್ವದಾದ್ಯಂತ ವೃಷಭ ಚಿತ್ರ ತೆರೆಗೆ ಬರಲಿದೆ.

ಬಲರಾಮನ ದಿನಗಳು ಹಾಡು ಬಿಡುಗಡೆ: "ಆ ದಿನಗಳು" ಚಿತ್ರದ ಭರ್ಜರಿ ಯಶಸ್ಸಿನ 18 ವರ್ಷಗಳ ನಂತರ ನಿರ್ದೇಶಕ ಕೆ. ಎಂ ಚೈತನ್ಯ ನಿರ್ದೇಶನ ಮಾಡಿರುವ "ಬಲರಾಮನ ದಿನಗಳು" ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇದೀಗ ಈ ಚಿತ್ರದ ಮೊದಲ ಹಾಡು ರಿಲೀಸ್ ಆಗಿದೆ. ಪದ್ಮಾವತಿ ಜಯರಾಮ್ ಮತ್ತು ಶ್ರೇಯಸ್ ಬಂಡವಾಳ ಹೂಡಿರುವ ಚಿತ್ರದಲ್ಲಿ ಟೈಗರ್ ವಿನೋದ್ ಪ್ರಭಾಕರ್ ನಾಯಕನಾಗಿ ಕಾಣಿಸಿಕೊಂಡಿದ್ದು ಇದು ವಿನೋದ್ ಅವರ 25 ನೇ ಚಿತ್ರ. ನಾಯಕಿಯಾಗಿ ಪ್ರಿಯಾ ಆನಂದ್ ನಟಿಸಿದ್ದಾರೆ. ಉಳಿದಂತೆ ಅವಿನಾಶ್ , ಅತುಲ್ ಕುಲಕರ್ಣಿ, ಆಶಿಶ್ ವಿದ್ಯಾರ್ಥಿ, ವಿನಯ್ ಗೌಡ ಸೇರಿದಂತೆ ಹಿರಿ- ಕಿರಿಯ ಕಲಾವಿದರ ದಂಡು ಚಿತ್ರದಲ್ಲಿದೆ. ಶುರು ಶುರು ಹಾಡಿಗೆ ತಮಿಳಿನ ಸಂತೋಷ್ ನಾರಾಯಣನ್ ಸಂಗೀತ ನೀಡಿದ್ದು ಹಿರಿಯ ಗೀತ ರಚನೆಕಾರ ಜಯಂತ್ ಕಾಯ್ಕಿಣಿ ಸಾಹಿತ್ಯ ರಚಿಸಿದ್ದಾರೆ. ಸಂಚಿತ್ ಹೆಗ್ಡೆ ಹಾಗು ಪುಣ್ಯ ಹಾಡಿದ್ದಾರೆ. ಸಧ್ಯದಲ್ಲೇ ಬಲರಾಮನ ದಿನಗಳು ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗಲಿದೆ.

ಸೆಟ್ಟೇರಿದ ಕುಡುಕ ನನ್ಮಕ್ಳು ಸಿನಿಮಾ: ಸದಭಿರುಚಿಯ ಸಿನಿಮಾ ನಿರ್ದೇಶಕ ಆಸ್ಕರ್ ಕೃಷ್ಣ ಅವರ ಎಂಟನೇ ಹೊಸ ಚಿತ್ರ ಕುಡುಕ ನನ್ಮಕ್ಳು. ಈ ಸಿನಿಮಾದ ಮುಹೂರ್ತ ಸಮಾರಂಭ ಬೆಂಗಳೂರಿನ ಶ್ರೀ ವಿದ್ಯಾ ಗಣಪತಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆದಿದೆ. ಹಿರಿಯ ಚಿತ್ರ ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್ ಪ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡಿದ್ರೆ, ಡಾ.ಬಿ.ಆರ್.ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷರಾದ ಪಿ.ಮೂರ್ತಿ ಕ್ಯಾಮಾರಾ ಸ್ವಿಚ್ ಆನ್ ಮಾಡಿದ್ರು. ಹಿರಿಯ ಸಂಗೀತ ಸಂಯೋಜಕ, ನಟ ಹಾಗೂ ನಿರ್ದೇಶಕ ವಿ.ಮನೋಹರ್ ಹಾಜರಿದ್ರು. ಮಜಾಭಾರತ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಚಂದ್ರಪ್ರಭ, ವಿನೋದ್ ಗೊಬ್ಬರಗಾಲ, ಮಿಮಿಕ್ರಿ ಗೋಪಿ ಮತ್ತು ಸಚಿನ್ ಪುರೋಹಿತ್ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚೈತ್ರಾ ಕೊಟ್ಟೂರು, ಲಯಾ ಕೋಕಿಲ, ಧರಣಿ, ನಿಸರ್ಗ ಮಂಜುನಾಥ್, ಪ್ರಿಯಾಂಕ, ಮಮತಾ ಸಿನಿಮಾದಲ್ಲಿದ್ದಾರೆ.

Related Video