ಸೋಷಿಯಲ್ ಮೀಡಿಯಾದಲ್ಲಿ ನಕಲಿ ಸಂದೇಶ, ಪೊಲೀಸ್ ಠಾಣೆ ಮೆಟ್ಟಿಲೇರಿದ ಉಪ್ಪಿನಂಗಡಿ ವರ್ತಕರ ಸಂಘ

ಮುಸ್ಲಿಂ ವರ್ತಕರಿಗೆ ನಿಷೇಧ (Ban Muslim Traders) ಮುಂದುವರೆದ ಬೆನ್ನಲ್ಲೇ, ಉಪ್ಪಿನಂಗಡಿ (Uppinangadi) ವರ್ತಕರ ಸಂಘ ಪೊಲೀಸ್ ಠಾಣೆ ಮೆಟ್ಟಿಲೇರಿದೆ. 'ಅಂಗಡಿ ಸಾಮಗ್ರಿಗಳನ್ನು ಮುಸ್ಲಿಂಮರಿಗೆ ಕೊಡುವುದಿಲ್ಲ. ನಮಗೆ ಹಿಂದೂ ಸಹೋದರರ ವ್ಯಾಪಾರ ಧಾರಾಳ' ಎನ್ನುವ ಸಂದೇಶ ಹರಿದಾಡುತ್ತಿದೆ. 

Share this Video
  • FB
  • Linkdin
  • Whatsapp

ಮಂಗಳೂರು (ಮಾ. 25): ಮುಸ್ಲಿಂ ವರ್ತಕರಿಗೆ ನಿಷೇಧ (Ban Muslim Traders) ಮುಂದುವರೆದ ಬೆನ್ನಲ್ಲೇ, ಉಪ್ಪಿನಂಗಡಿ (Uppinangadi) ವರ್ತಕರ ಸಂಘ ಪೊಲೀಸ್ ಠಾಣೆ ಮೆಟ್ಟಿಲೇರಿದೆ. 'ಅಂಗಡಿ ಸಾಮಗ್ರಿಗಳನ್ನು ಮುಸ್ಲಿಂಮರಿಗೆ ಕೊಡುವುದಿಲ್ಲ. ನಮಗೆ ಹಿಂದೂ ಸಹೋದರರ ವ್ಯಾಪಾರ ಧಾರಾಳ' ಎನ್ನುವ ಸಂದೇಶ ಹರಿದಾಡುತ್ತಿದೆ. 

Ban Muslim Traders: ರಾಜ್ಯಾದ್ಯಂತ ಮುಸ್ಲಿಂ ವ್ಯಾಪಾರ ನಿರ್ಬಂಧಿಸಬೇಕು: ಮುತಾಲಿಕ್

ಈ ಸಂದೇಶದಲ್ಲಿ ಉಪ್ಪಿನಂಗಡಿಯ 32 ಅಂಗಡಿಗಳ ಹೆಸರು ಉಲ್ಲೇಖಿಸಲಾಗಿದೆ. ಹಿಂದೂ ವರ್ತಕರ ಹೆಸರಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸಂದೇಶವನ್ನು ವೈರಲ್ ಮಾಡಲಾಗಿದೆ ಎಂದು ಉಪ್ಪಿನಂಗಡಿ ವರ್ತಕರ ಸಂಘ ಪೊಲೀಸರಿಗೆ ದೂರು ನೀಡಿದ್ದಾರೆ. ಕಿಡಿಗೇಡಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಒತ್ತಾಯಿಸಿದ್ದಾರೆ. 

Related Video