Ban Muslim Traders: ರಾಜ್ಯಾದ್ಯಂತ ಮುಸ್ಲಿಂ ವ್ಯಾಪಾರ ನಿರ್ಬಂಧಿಸಬೇಕು: ಮುತಾಲಿಕ್
ಮುಸ್ಲಿಂರ ಮಾನಸಿಕತೆ ಬದಲಾಗುವವರೆಗೂ ಗೋಹತ್ಯೆ, ಗೋಮಾಂಸ ತಿನ್ನುವುದನ್ನು ನಿಲ್ಲಿಸುವವರೆಗೂ ಮುಸ್ಲಿಮರ ಜತೆ ವ್ಯಾಪಾರ ವಹಿವಾಟ ಬಂದ್ ಮಾಡಲಾಗುತ್ತದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಹೇಳಿದ್ದಾರೆ.
ಮುಸ್ಲಿಂರ ಮಾನಸಿಕತೆ ಬದಲಾಗುವವರೆಗೂ ಗೋಹತ್ಯೆ, ಗೋಮಾಂಸ ತಿನ್ನುವುದನ್ನು ನಿಲ್ಲಿಸುವವರೆಗೂ ಮುಸ್ಲಿಮರ ಜತೆ ವ್ಯಾಪಾರ ವಹಿವಾಟ ಬಂದ್ ಮಾಡಲಾಗುತ್ತದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಹೇಳಿದ್ದಾರೆ.
ಸವದತ್ತಿ ಯಲ್ಲಮ್ಮ ದೇವಸ್ಥಾನ ಆವರಣದಲ್ಲಿರುವ ಮುಸ್ಲಿಂ ಅಂಗಡಿಗಳನ್ನು ತೆಗೆಸುತ್ತೇವೆ. ದೇವಸ್ಥಾನದ ನೂರು ಮೀಟರ್ ಆವರಣದಲ್ಲಿ ಅಂಗಡಿ ಇರಬಾರದು. ಮೊದಲಿಗೆ ಮುಜರಾಯಿ ಅಧಿಕಾರಿಗಳಿಂದ ನೋಟಿಸ್ ಕೊಡಿಸುತ್ತೇವೆ. ನೋಟಿಸ್ ಕೊಟ್ಟನಂತರವೂ ಅಂಗಡಿಗಳನ್ನು ತೆರವು ಮಾಡದಿದ್ದರೆ ನಾವೇ ಅಂಗಡಿ ತೆಗೆಸ ಮುನ್ನುಗ್ಗುತ್ತೇವೆ ಎಂದು ಇದೇ ವೇಳೆ ಮುತಾಲಿಕ್ ಎಚ್ಚರಿಕೆ ನೀಡಿದರು.