ಶ್ರೀನಿವಾಸ್‌ ಗೌಡ ವಿರುದ್ಧ ದೂರು: ಕಂಬಳ ಸಮಿತಿ ಹೇಳೋದೇನು?

ಕಂಬಳ ಅಕಾಡೆಮಿ ನಡೆಸುತ್ತಿರುವ ಗುಣಪಾಲ ಕಡಂಬರಿಂದ ಶ್ರೀನಿವಾಸ ಗೌಡ ಬಳಸಿ ವಂಚನೆ ಮಾಡಲಾಗಿದೆ ಎಂದು ದ‌.ಕ ಜಿಲ್ಲಾ ಕಂಬಳ ಸಮಿತಿ ಸದಸ್ಯ, ಕೋಣಗಳ ಯಜಮಾನ ಲೋಕೇಶ್ ಶೆಟ್ಟಿ ಎಂಬವರು ದೂರು ನೀಡಿದ್ದರು. 

Share this Video
  • FB
  • Linkdin
  • Whatsapp

ಮೂಡಬಿದ್ರೆ(ಜು.20): ಕರಾವಳಿಯ ಕಂಬಳ ಕ್ರೀಡೆಯಲ್ಲಿ ಕೋಣಗಳನ್ನು ಓಡಿಸುವ ವೇಳೆ ಅತ್ಯಂತ ವೇಗವಾಗಿ ಓಡಿಸಿ ಗುರಿ ಮುಟ್ಟುವ ಮೂಲಕ ಅಂತಾರಾಷ್ಟ್ರೀಯ ಅಥ್ಲೀಟ್ ಉಸೇನ್ ಬೋಲ್ಟ್ ದಾಖಲೆಯನ್ನೇ ಮುರಿದಿದ್ದರು ಎನ್ನಲಾದ ಶ್ರೀನಿವಾಸ ಗೌಡ ದಾಖಲೆ ಸುಳ್ಳು ಎನ್ನುವ ಮಾತುಗಳು ಕೇಳಿ ಬಂದಿವೆ. ಇದೀಗ ಕಂಬಳ ಸಮಿತಿ ಆಯೋಜಕರು ಅಚ್ಚರಿಯ ಹೇಳಿಕೆ ನೀಡಿದ್ದಾರೆ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಂಬಳ ಅಕಾಡೆಮಿ ನಡೆಸುತ್ತಿರುವ ಗುಣಪಾಲ ಕಡಂಬರಿಂದ ಶ್ರೀನಿವಾಸ ಗೌಡ ಬಳಸಿ ವಂಚನೆ ಮಾಡಲಾಗಿದೆ ಎಂದು ದ‌.ಕ ಜಿಲ್ಲಾ ಕಂಬಳ ಸಮಿತಿ ಸದಸ್ಯ, ಕೋಣಗಳ ಯಜಮಾನ ಲೋಕೇಶ್ ಶೆಟ್ಟಿ ಎಂಬವರು ದೂರು ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಯೋಜಕರು, ಲೋಕೇಶ್ ಶೆಟ್ಟಿ ನೀಡಿದ ಪೊಲೀಸ್ ದೂರಿನಲ್ಲಿ ಸತ್ಯಾಂಶವಿದೆ. ಶ್ರೀನಿವಾಸಗೌಡ ಒಳ್ಳೆ ಹುಡುಗ, ಬಲಿಪಶು ಆಗ್ತಾನೆ ಅಂತ ಗೊತ್ತಿತ್ತು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಗೌರವಾಧ್ಯಕ್ಷ ಪಿ.ಆರ್.ಶೆಟ್ಟಿ ಹೇಳಿಕೆ ನೀಡಿದ್ದಾರೆ.

ಕಂಬಳದ 'ಉಸೇನ್ ಬೋಲ್ಟ್' ದಾಖಲೆ ಸುಳ್ಳಂತೆ: ಮೂಡಬಿದ್ರೆ ಠಾಣೆ ಮೆಟ್ಟಿಲೇರಿದ ವಿವಾದ!

Related Video