ಪೆಟ್ರೋಲ್ ಕರಗುತ್ತಿದೆ.. ಗ್ಯಾಸ್ ಉರಿಯುತ್ತಿದೆ.. ಜನರ ಜೇಬು ಖಾಲಿ.. ಖಾಲಿ: ಸಿಲಿಂಡರ್​​ ಬಾಂಬ್!

ಪೆಟ್ರೋಲ್ ಕರಗುತ್ತಿದೆ.. ಗ್ಯಾಸ್ ಉರಿಯುತ್ತಿದೆ.. ಜನರ ಜೇಬು ಖಾಲಿ.. ಖಾಲಿ ! - ಗಗನಕ್ಕೇರಿದ ಗ್ಯಾಸ್.. ಸೆಂಚುರಿ ಸಿಡಿಸಿರೋ ಪೆಟ್ರೋಲ್.. ನಾಟೌಟ್ ! - ಚುನಾವಣೆ ಬಳಿಕ ನರಕದರ್ಶನ.. ಬೆಲೆ ರುದ್ರತಾಂಡವ ! - ದುಬಾರಿ ದುನಿಯಾ.

Share this Video
  • FB
  • Linkdin
  • Whatsapp

ಪೆಟ್ರೋಲ್ ಕರಗುತ್ತಿದೆ.. ಗ್ಯಾಸ್ ಉರಿಯುತ್ತಿದೆ.. ಜನರ ಜೇಬು ಖಾಲಿ.. ಖಾಲಿ ! - ಗಗನಕ್ಕೇರಿದ ಗ್ಯಾಸ್.. ಸೆಂಚುರಿ ಸಿಡಿಸಿರೋ ಪೆಟ್ರೋಲ್.. ನಾಟೌಟ್ ! - ಚುನಾವಣೆ ಬಳಿಕ ನರಕದರ್ಶನ.. ಬೆಲೆ ರುದ್ರತಾಂಡವ ! - ದುಬಾರಿ ದುನಿಯಾ.. ಬೆಲೆ ಏರಿಕೆ ಸಂಕಷ್ಟ. ಭಾರತದಲ್ಲಿ ಪಂಚರಾಜ್ಯ ಚುನಾವಣೆ ಬಳಿಕ ಬೆಲೆ ಏರಿಕೆಯ ಸುನಾಮಿ ಎದ್ದಿದೆ.. ಒಂದಾದ ಮೇಲೆ ಒಂದರಂತೆ ಬೆಲೆ ಏರಿಕೆಯಾಗ್ತಿದ್ದು, ಗ್ರಾಹಕನ ಹೊರೆ ಜಾಸ್ತಿಯಾಗ್ತಾನೆ ಇದೆ. ಇಷ್ಟು ದಿನ ಪೆಟ್ರೋಲ್​​ ಹಾಗೂ ಡೀಸೆಲ್​​ ಬೆಲೆಯ ಹೊರೆಯನ್ನು ಹೊರುತ್ತಿದ್ದ ಗ್ರಾಹಕ ಇದೀಗ ಸಿಲಿಂಡರ್​​​ ಭಾರವನ್ನು ಅನಿವಾರ್ಯವಾಗಿ ಎತ್ತಲೆಬೇಕಾಗಿದೆ.. ಕಳೆದ ನಾಲ್ಕು ತಿಂಗಳಲ್ಲಿ ನಾಲ್ಕು ಬಾರೀ ವಾಣಿಜ್ಯ ಸಿಲಿಂಡರ್​​ ಬೆಲೆ ಏರಿಕೆಯಾಗಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೀಗ ಗೃಹ ಬಳಕೆ ಸಿಲಿಂಡರ್​​ ಬೆಲೆ ಏರಿಸಿ ಗ್ರಾಹಕನ ಹೊರೆಯನ್ನ ಇನ್ನಷ್ಟು ಜಾಸ್ತಿ ಮಾಡಲಾಗಿದೆ.. ಚುನಾವಣೆ ಬಳಿಕದ ಈ ಬೆಳವಣಿಗೆಗೆ ಜನ್ರು ಕೆಂಡ ಕಾರ್ತಿದ್ದಾರೆ. ಇಂಧನ ದರ ಏರಿಕೆಯಿಂದ ಭಾರತೀಯನ ಪರಿಸ್ಥಿತಿ ಹೇಗಾಗಿದೆ ಅನ್ನೋದನ್ನ.. ಪೆಟ್ರೊಲ್​​​, ಡೀಸೆಲ್​ ಹೊರೆ ಹೊರುತ್ತಿರುವಾಗಲೇ ಸಿಲಿಂಡರ್​​ ಭಾರವನ್ನು ಗ್ರಾಹಕನ ಮೇಲೆ ಹಾಕಲಾಗಿದೆ.. ಇಷ್ಟೆ ಅಲ್ಲ, ಚುನಾವಣೆ ಬಳಿಕ ಇನ್ನು ಯವ್ಯಾವ ಭಾರವನ್ನು ಹೊರ್ತಿದ್ದಾನೆ. ಭಾರತದಲ್ಲಿ ಪಂಚ ರಾಜ್ಯ ಚುನಾವಣೆ ಬಳಿಕ ಕೇವಲ ಇಂಧನದ ಬೆಲೆ ಮಾತ್ರವೇ ಜಾಸ್ತಿಯಾಗಿಲ್ಲ.. ಇಂಧನ ಬೆಲೆಯಿಂದಾಗಿ ಪ್ರತಿಯೊಂದು ವಸ್ತುವಿನ ಮೂಲ ಬೆಲೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.

ಇದ್ರಿಂದ ಬಹುತೇಕ ಮೂಲಭೂತ ವಸ್ತಗಳು ಬೆಲೆ ಜಾಸ್ತಿಯಾಗಿದೆ.. ಯಾವ್ಯಾವು ಹೆಚ್ಚಾಗಿದೆ.. ಇದನ್ನ ಕಂಟ್ರೋಲ್​​ ಮಾಡೋಕ್ಕೆ ಕೇಂದ್ರ ಸರ್ಕಾರ ಏನು ಮಾಡ್ತಿದೆ. ಭಾರತ ಮಾತ್ರವೇ ಈ ಒಂದು ಬೆಲೆ ಏರಿಕೆಯ ಬಿಸಿಯನ್ನು ಎದುರಿಸುತ್ತಿಲ್ಲ... ಜಾಗತಿಕವಾಗಿಯೇ ಇಂತಹದೊಂದು ಸಮಸ್ಯೆ ತಲೆದೂರಿದೆ. ಭಾರತದಲ್ಲಿ ಇಂಧನ ದರ ಏರಿಕೆ ಭಾರೀ ಸದ್ದು ಮಾಡ್ತಿದೆ.. ಹಾಗಂತ ಇಂಡಿಯಾದಲ್ಲಿ ಮಾತ್ರವೇ ಇಂಧನದ ದರ ಏರಿಕೆಯಾಗಿಲ್ಲ.. ಜಾಗತಿಕ ಮಟ್ಟದಲ್ಲಿಯೇ ಇದ್ರ ಬೆಲೆ ಏರಿಕೆಯಾಗಿದೆ.. ಯಾವಾಗ ಮಧ್ಯಪ್ರಾಚ್ಯದಲ್ಲಿ ಯುದ್ಧ ಆರಂಭವಾಯ್ತೋ ಆಗಿನಿಂದಲೇ ಜಾಗತಿಕ ಆರ್ಥಿಕತೆಯ ಸ್ಥಿತಿ ತಲ್ಲಣವಾಗೋದಕ್ಕೆ ಶುರುವಾಗಿದೆ. 

Related Video