ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?

6 ವರ್ಷದ ಹಿಂದೆ ಬಂದ ಸಿದ್ದೇಗೌಡ & ನಂದಿನಿ ಲವ್ ಸ್ಟೋರಿಗೆ ಕನ್ನಡ‌ ಸಿನಿ ಪ್ರೇಮಿಗಳು ಶಹಬ್ಬಾಸ್ ಎಂದಿದ್ದರು. ಈಗ ಮತ್ತದೇ ತಂಡ ನಿರ್ದೇಶಕ ಮಹೇಶ್ ಕುಮಾರ್​​​​​​​​​ ಮೊದಲ ಹೆಜ್ಜೆಗೆ ದೊಡ್ಡ ಸಕ್ಸಸ್​ ಸಿಕ್ಕಿತ್ತು.

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ನ‌ ಸೂಪರ್ ಸಕ್ಸಸ್ ಜೋಡಿಗಳಲ್ಲಿ ಒಂದಾಗಿರುವ ರಚಿತಾ ರಾಮ್ ಹಾಗೂ ಸತೀಶ್ ನಿನಾಸಂ ಮತ್ತೆ ಒಂದಾಗಿದ್ದಾರೆ. ಅಯೋಗ್ಯ ಸಿನಿಮಾ ಮೂಲಕ ಮೋಡಿ ಮಾಡಿದ್ದ ಈ ಪೇರ್​​ ಇದೀಗ 6 ವರ್ಷಗಳ ಬಳಿಕ ಮತ್ತೆ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಅದು ಅಯೋಗ್ಯ ಪಾರ್ಟ್ 2 ಸಿನಿಮಾ ಮೂಲಕ. ಇದೀಗ ಈ ಸಿನಿಮಾ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರವೊಂದು ಆಚೆ ಬಂದಿದೆ. ಅದೇನು ಅಂತ ನೋಡೋಣ ಬನ್ನಿ. ಅಯೋಗ್ಯ.. 2018ರ ಸೂಪರ್ ಹಿಟ್ ಸಿನಿಮಾ. 6 ವರ್ಷದ ಹಿಂದೆ ಬಂದ ಸಿದ್ದೇಗೌಡ & ನಂದಿನಿ ಲವ್ ಸ್ಟೋರಿಗೆ ಕನ್ನಡ‌ ಸಿನಿ ಪ್ರೇಮಿಗಳು ಶಹಬ್ಬಾಸ್ ಎಂದಿದ್ದರು. ಈಗ ಮತ್ತದೇ ತಂಡ ನಿರ್ದೇಶಕ ಮಹೇಶ್ ಕುಮಾರ್​​​​​​​​​ ಮೊದಲ ಹೆಜ್ಜೆಗೆ ದೊಡ್ಡ ಸಕ್ಸಸ್​ ಸಿಕ್ಕಿತ್ತು.

Add Asianetnews Kannada as a Preferred SourcegooglePreferred

ಈ ಸಿನಿಮಾ 100 ದಿನ ಅದ್ಧೂರಿ ಪ್ರದರ್ಶನ ಕಂಡಿತ್ತು. ಇದೀಗ ಅಯೋಗ್ಯ-2 ಸಿನಿಮಾ ಬರುತ್ತಿದೆ. ಈ ಭಾರಿ ನಿರ್ದೇಶಕ ಮಹೇಶ್ ಕುಮಾರ್ ಹೊಸದೊಂದು ಹಳ್ಳಿ ಸೊಗಡಿನ ಕಥೆ ಜೊತೆ ದೊಡ್ಡ ಸಕ್ಸಸ್​​ ಕೊಡೋಕೆ ಸಿದ್ಧರಾಗಿದ್ದು, ಅದೇ ಸಿದ್ದೇಗೌಡ ಮತ್ತು ನಂದಿನಿ ಕಾಂಬಿನೇಷನ್​​ ಮತ್ತೆ ಜೊತೆಯಾಗಿದೆ. ಎಂ ಮುನೇಗೌಡ ಅಯೋಗ್ಯ ಸಿನಿಮಾಗೆ ಬಂಡವಾಳ ಹೂಡುತ್ತಿದ್ದು, ಒನ್ಸ್ ಅಗೈನ್ ಅರ್ಜುನ್ ಜನ್ಯ ಸಂಗೀತ ನಿರ್ದೇಶನ‌‌ ಇದೆ. ಇದೀಗ ಅಯೋಗ್ಯ 2 ಸಿನಿಮಾದ ಆಡಿಯೋ ಹಕ್ಕು ಭಾರಿ ಮೊತ್ತಕ್ಕೆ ಬಿಕರಿ ಆಗಿದೆ. ನಟ ಸತೀಶ್ ನೀನಾಸಂ ಹಾಗು ರಚಿತಾ ರಾಮ್ ಜೋಡಿಯ ಅಯೋಗ್ಯ ಸಿನಿಮಾ ಸೂಪರ್​ ಹಿಟ್ ಹಾಡುಗಳನ್ನ ಕೊಟ್ಟಿದೆ.

ಅಯೋಗ್ಯ ಹಾಡುಗಳು ಅಂದು ಬರೀ 9 ಲಕ್ಷಕ್ಕೆ ಸೇಲ್ ಆಗಿತ್ತು. ಆದ್ರೆ ಹಾಡುಗಳು ದೊಡ್ಡಮಟ್ಟಕ್ಕೆ ಹಿಟ್ ಆಗಿದ್ವು. ಹೀಗಾಗಿ ಈಗ ಅಯೋಗ್ಯ-2 ಸಿನಿಮಾದ ಆಲ್ಬಂಗೆ ಬಾರಿ ಬೇಡಿಕೆ ಬಂದಿದ್ದು ಗೋವಾದಲ್ಲಿ ಹಾಡುಗಳ ಮಾರಾಟದ ಡೀಲ್ ನಡೆದಿದೆ. ಆನಂದ್ ಆಡಿಯೋ ಕಂಪನೆ ಬರೋಬ್ಬರಿ 2 ಕೋಟಿ ಕೊಟ್ಟು ಅಯೋಗ್ಯ-2 ಹಾಡುಗಳ ರೈಟ್ಸ್​ ಖರೀದಿಸಿದೆ. ಸೂಪರ್ ಹಿಟ್ ಸಿನಿಮಾದ ಸೀಕ್ವೆಲ್ ಅಂದರೆ ನಿರೀಕ್ಷೆ ಮತ್ತು ಕುತೂಹಲ ಕೊಂಚ ಜಾಸ್ತಿನೆ ಇರಲಿದೆ. ಈಗ ಎಮ್ ಮುನೇಗೌಡ ನಿರ್ಮಾಣ ಮಾಡಿರೋ ಅಯೋಗ್ಯ-2 ಕೂಡ ಸೆಟ್ಟೇರುವುದಕ್ಕೂ ಮೊದಲೇ ನಿರೀಕ್ಷೆ ದುಪ್ಪಟ್ಟು ಮಾಡಿತ್ತು. ಈಗ ಸಿನಿಮಾದ ಎಲ್ಲಾ ಕೆಸಲ ಮುಗಿದಿದ್ದು, ಬಿಡುಗಡೆಗೆ ದಿನಾಂಕ ನೋಡುತ್ತಿದೆ ಚಿತ್ರತಂಡ. 

Related Video