ದೀದಿ ಕೋಟೆಯಲ್ಲಿ ಮಹಾಬಿರುಕು.. ಏನು ಕಾರಣ? ಗಜಕೇಸರಿ ವ್ಯೂಹ.. ದೀದಿ ದಿಗ್ಬಂಧನ.. ಏನಿದರ ಗುಟ್ಟು?

ಬಂಗಾಳದಲ್ಲಿ, ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತ ನಡೆಸ್ತಿದ್ರೆ, ಅತ್ತ ಅಸೆಂಬ್ಲಿಯ ವಿರೋಧ ಪಕ್ಷದ ಸೀಟುಗಳಲ್ಲಿ ಕೂತಿರೋದು ಬಿಜೆಪಿಯ ದಯೆಯಿಂದಲೇ ಗೆದ್ದ ರಿತಬ್ರತಾ ಬ್ಯಾನರ್ಜಿ ಗ್ಯಾಂಗ್.

Share this Video
  • FB
  • Linkdin
  • Whatsapp

ನಮಸ್ತೆ ವೀಕ್ಷಕರೇ.. ನಾವಿವತ್ತು ನಿಮಗೆ ಹೇಳ್ತಾ ಇರೋದು, ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿರೋ ಬಿಗ್ ಬ್ರೇಕಿಂಗ್ ನ್ಯೂಸ್.. ಪಶ್ಚಿಮ ಬಂಗಾಳದ ಎಲೆಕ್ಷನ್ ಮುಗಿದು, ಒಂದು ತಿಂಗಳು ಕೂಡ ಕಳೆದಿಲ್ಲ.. ಆದ್ರೆ ಈ ಗ್ಯಾಪ್ ಅಲ್ಲೇ, ದೀದಿ ಕಟ್ಟಿದ ಕೋಟೆ ಧೂಳಿಪಟವಾಗೋ ಲಕ್ಷಣಗಳು ಕಾಣ್ತಾ ಇದಾವೆ.. ರಕ್ತವನ್ನೇ ಧಾರೆಯೆರೆದು ಕಟ್ಟಿದ ಟಿಎಮ್ಸಿ ಪಕ್ಷವೇ ದೀದಿ ಕೈಜಾರಿ ಹೋಗುತ್ತಾ ಅನ್ನೋ ಚರ್ಚೆ ಶುರುವಾಗಿದೆ.. ಒಂದೇ ಒಂದು ಮಹಾಸೋಲು, ಮೂರು ದಶಕಗಳ ಅಬ್ಬರವನ್ನೇ ಖಲ್ಲಾಸ್ ಮಾಡುತ್ತೆ ಅಂತ ಯಾರು ತಾನೇ ಅಂದ್ಕೊಳೋಕೆ ಸಾಧ್ಯ ಹೇಳಿ.

ಆದ್ರೆ ಈಗ ಅದೇ ಆಗ್ತಾ ಇದೆ. ಬಂಗಾಳದಲ್ಲಿ, ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತ ನಡೆಸ್ತಿದ್ರೆ, ಅತ್ತ ಅಸೆಂಬ್ಲಿಯ ವಿರೋಧ ಪಕ್ಷದ ಸೀಟುಗಳಲ್ಲಿ ಕೂತಿರೋದು ಬಿಜೆಪಿಯ ದಯೆಯಿಂದಲೇ ಗೆದ್ದ ರಿತಬ್ರತಾ ಬ್ಯಾನರ್ಜಿ ಗ್ಯಾಂಗ್.. ಇಲ್ಲಿಂದ ಮುಂದೆ ಈ ಕತೆ ಏನಾಗಲಿದೆ? ಕೋಟೆ ಉಳಿಸಿಕೊಳ್ಳೋಕೆ ದೀದಿ ಏನು ಮಾಡಲಿದ್ದಾರೆ? ಬಂಗಾಳದಲ್ಲಿ ಬರೀ ಸರ್ಕಾರ ಬದಲಾಗಿಲ್ಲ.. ಅಲ್ಲಿನ ರಾಜಕೀಯ, ರಾಜಕೀಯದ ಲೆಕ್ಕಾಚಾರಗಳೇ ಬದಲಾಗ್ತಾ ಇದಾವೆ.. ಎಡಪಕ್ಷಗಳು ಕಟ್ಟಿಕೊಂಡಿದ್ದ ಗಟ್ಟಿ ವೋಟ್ ಬ್ಯಾಂಕೇ ಉಲ್ಟಾ ಹೊಡೀತಿದೆ.

ಅದನ್ನೇ ಬಂಡವಾಳ ಮಾಡಿಕೊಂಡು ಬಿಜೆಪಿ ಹೇಗೆ ಟಿಎಂಸಿಯನ್ನು ಧೂಳೀಪಟ ಮಾಡ್ತಾ ಇದೆ ಗೊತ್ತಾ? ಯಾರೂ ನಿರೀಕ್ಷಿಸದೇ ಇದ್ದ ಹಂತಕ್ಕೆ ಬಂದು ನಿಂತಿದೆ ದೀದಿ ಕೋಟೆಯ ಕತೆ.. ಇಲ್ಲಿಂದ ಮುಂದೇನಾಗಲಿದೆ? ವೀಕ್ಷಕರೇ ದೀದಿ ಪಾಳಯದ ಪರಿಸ್ಥಿತಿ ಅದೆಷ್ಟು ಕೈಮೀರಿ ಹೋಗಿದೆ ಅಂದ್ರೆ, ಒಂದು ಕಾಲದಲ್ಲಿ ಇಡೀ ರಾಜ್ಯವನ್ನ ಕಂಟ್ರೋಲ್ ಮಾಡ್ತಿದ್ದ ಮಮತಾ ಬ್ಯಾನರ್ಜಿ, ಇವತ್ತು ಹೌರಾ, ಮುರ್ಷಿದಾಬಾದ್, ಉತ್ತರ ದಿನಾಜ್‌ಪುರದ ಎಂಎಲ್‌ಎಗಳಿಗೆ ತಾವೇ ಪರ್ಸನಲ್ ಆಗಿ ಫೋನ್ ಮಾಡಿ ಪಾರ್ಟಿ ಬಿಡಬೇಡಿ ಅಂತ ಕೇಳ್ಕೊಳ್ತಾ ಇದಾರಂತೆ.

Related Video