ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ

ಗಾಯಕನಾಗಿ ಜನಪ್ರಿಯರಾಗಿರುವ ನವೀನ್ ಸಜ್ಜು ನಾಯಕನಾಗಿ ನಟಿಸಿರುವ ಮೊದಲ ಚಿತ್ರ "ಲೋ ನವೀನ". ಈಗಾಗಲೇ ಈ ಚಿತ್ರದ ಜನಪದ ಶೈಲಿಯ "ಕೋಣಾಣೆ" ಹಾಡು ಬಿಡುಗಡೆಯಾಗಿ ಎಲ್ಲರ ಮನ ಗೆದ್ದಿದೆ.

Share this Video
  • FB
  • Linkdin
  • Whatsapp

ಗಾಯಕನಾಗಿ ಜನಪ್ರಿಯರಾಗಿರುವ ನವೀನ್ ಸಜ್ಜು ನಾಯಕನಾಗಿ ನಟಿಸಿರುವ ಮೊದಲ ಚಿತ್ರ "ಲೋ ನವೀನ". ಈಗಾಗಲೇ ಈ ಚಿತ್ರದ ಜನಪದ ಶೈಲಿಯ "ಕೋಣಾಣೆ" ಹಾಡು ಬಿಡುಗಡೆಯಾಗಿ ಎಲ್ಲರ ಮನ ಗೆದ್ದಿದೆ. ಇತ್ತೀಚೆಗೆ "ಲೋ ನವೀನ" ಚಿತ್ರದ ಇನ್ನೊಂದು ಹಾಡು ರಿಲೀಸ್ ಆಗಿದ್ದು ಒನ್ಸ್ ಅಗೈನ್ ಸದ್ದು ಸುದ್ದಿ ಮಾಡ್ತಾ ಇದೆ. ಇದೀಗ ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿದೆ. ಸ್ಯಾಂಡಲ್​ವುಡ್​ನ ಸ್ಟಾರ್ ಸಿಂಗರ್​​ ನವೀನ್ ಸಜ್ಜು ನಾಯಕರಾಗಿರೋದು ಗೊತ್ತೇ ಇದೆ. ಲೋ ನವೀನ ಸಿನಿಮಾದಲ್ಲಿ ನವೀನ್ ಹೀರೋ ಆಗಿದ್ದಾರೆ. ಇದೀಗ ಈ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇದೇ ಮೇ 15ನೇ ತಾರೀಖೂ ಲೋ ನವೀನ ಸಿನಿಮಾ ರಾಜ್ಯಾದ್ಯಂತ ತೆರೆ ಕಾಣುತ್ತೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಲೋ ನವೀನ ಹಳ್ಳಿ ಸೊಗಡಿನ ಸೊಬಗಿನ ಸಿನಿಮಾ. ಲೋ ನವೀನ ಚಿತ್ರದಲ್ಲಿ ನಮ್ಮ ನೆಲದ ಸೊಗಡಿನ ಹಾಡುಗಳೇ ಇವೆ. ಇಡೀ ಚಿತ್ರ ಹಳ್ಳಿ ಹಿನ್ನೆಲೆಯ ಕಥೆಯನ್ನ ಹೊಂದಿದೆ. ನವೀನ ಅನ್ನೋ ಯುವಕನ ಸುತ್ತವೆ ಇದೆ. ಲೋ ನವೀನ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿವೆ. ನವೀನ್ ಸಜ್ಜು ಅವರೇ ಮ್ಯೂಸಿಕ್​ ಮಾಡಿದ್ದು, ಜಾನಪದ ಹಾಡುಗಳು ಹಿಟ್ ಆಗಿವೆ. ನಿರ್ಮಾಪಕ ಬೆನ್ ಚಿಕ್ಕಸ್ವಾಮಿ ಬಂಡವಾಳ ಹೂಡಿದ್ದಾರೆ. ನವೀನ್ ಸಜ್ಜುಗೆ ನಾಯಕಿಯಾಗಿ ವರ್ಷ ಅಭಿನಯಿಸಿದ್ದಾರೆ. ಧನುರ್ಧಾರಿ ಪವನ್ ನಿರ್ದೇಶನ ಮಾಡಿದ್ದಾರೆ. ಲೋ ನವೀನ ಚಿತ್ರಕ್ಕೆ ರಿಷಿಕೇಶ್ ಛಾಯಾಗ್ರಾಹಕ, ವಿನಾಯಕ್ ಆಚಾರ್ಯ ನೃತ್ಯ ನಿರ್ದೇಶಕ ಮಾಡಿದ್ದಾರೆ. ಮೇ 15ಕ್ಕೆ ಸಿನಿಮಾ ತೆರೆ ಕಾಣುತ್ತಿದ್ದು, ನವೀನ್ ಸಜ್ಜು ಖರಿಯರ್​​ಗೆ ಬಿಗ್​ ಬ್ರೇಕ್​ ಕೊಡೋ ನಿರೀಕ್ಷೆ ಇದೆ. 

Related Video