ಕೆಜಿಎಫ್ ಸರಣಿ ನೋಡಿ ಥ್ರಿಲ್ ಆದ ಜಪಾನ್ ಮಂದಿ: ಎರಡು ದಿನಕ್ಕೆ ಜಪಾನ್‌ನಲ್ಲಿ ಗಳಿಸಿದ್ದೆಷ್ಟು..?

ಕೆಜಿಎಫ್ ರಾಕಿಗೆ ಜಪಾನ್ನಲ್ಲಿ ಗ್ರ್ಯಾಂಡ್ ವೆಲ್ ಕಮ್!
ಜಪಾನ್ನಲ್ಲಿ ಕೆಜಿಎಫ್ 175 ಶೋಗಳ ಪ್ರದರ್ಶನ..!
ಕೆಜಿಎಫ್ ಸರಣಿ ನೋಡಿ ಥ್ರಿಲ್ ಆದ ಜಪಾನ್ ಮಂದಿ!

Share this Video
  • FB
  • Linkdin
  • Whatsapp

ಇದೂ ಪ್ರತಿಯೊಬ್ಬ ಕನ್ನಡ ಸಿನಿಮಾ ಪ್ರೇಕ್ಷಕರು ಹೆಮ್ಮೆ ಪಡೋ ವಿಷಯ. ನಮ್ಮ ಕನ್ನಡ ಸಿನಿಮಾ ವಿಶ್ವದ ಸಿನಿಮಾ ಹಬ್ ಅಂತ ಕರೆಸಿಕೊಳ್ಳೋ ಜಪಾನ್‌ನಲ್ಲಿ(Japan) ಬಿಡಿಗಡೆ ಆಗಿದೆ ಅಂತ ಕಾಲರ್ ಎತ್ತಿಕೊಂಡು ಹೇಳುವಂತಹ ಸಮಯ. ಹೌದು ಫೈನಲಿ ಜಪಾನ್‌ನಲ್ಲಿ ಸ್ಯಾಂಡಲ್‌ವುಡ್‌ನ ಚಿನ್ನ ಕೆಜಿಎಫ್(KGF) ಸರಣಿಗಳು ತೆರೆ ಕಂಡಿವೆ. ಈ ಸಿನಿಮಾಗೆ ಜಪ್ನಿಗಳಿಂದ ಭಾರಿ ಬೆಂಬಲ ಸಿಕ್ತಾ ಇದ್ದು, ಚಿತ್ರಮಂದಿರಗಳಲ್ಲಿ ಕೆಜಿಎಫ್ ಸೌಂಡ್ ಸಿಕ್ಕಾಪಟ್ಟೆ ಹೈ ಆಗಿದೆ. ಬಿಗ್ ಸ್ಕ್ರೀನ್ ಮೇಲೆ ರಾಕಿ ಎಂಟ್ರಿ. ಯಶ್(Actor Yash) ಎಂಟ್ರಿ ಆಗ್ತಿದ್ದಂತೆ ಸಿನಿ ಪ್ರೇಕ್ಷಕರು ಕಿರುಚಿ ಶಿಳ್ಳೆ ಚಪ್ಪಾಳೆ ಹೊಡೆಯೋದು ಅಬ್ಬಬ್ಬ ಅನ್ನಿಸುತ್ತೆ. ಇದೇ ಸೌಂಡ್ ಈಗ ದೂರದ ಜಪಾನ್ನಲ್ಲೂ ಕೇಳಿಸುತ್ತಿದೆ. ಹೌದು, ಕೆಜಿಎಫ್ ಅನ್ನೋ ಸ್ಯಾಂಡಲ್ವುಡ್ನ ಚಿನ್ನ ಭಾರತದ ಬೆಳ್ಳಿತೆರೆ ಮೇಲೆ ವಿಜೃಂಭಿಸಿದ್ದು ಇನ್ನೂ ಕಣ್ಣಲ್ಲೇ ಇದೆ. ಈಗ ಕೆಜಿಎಫ್ ಜಪಾನ್ಗೂ ಎಂಟ್ರಿ ಕೊಟ್ಟಿದೆ. ಕೆಜಿಎಫ್ ಹಾಗು ಕೆಜಿಎಫ್ ಚಾಪ್ಟರ್2 ಸಿನಿಮಾಗಳು ಜಪಾನ್ನಲ್ಲಿ ಒಟ್ಟಿಗೆ ತೆರೆ ಕಂಡಿದ್ದು, ಅಲ್ಲಿಯೂ ರಾಕಿ ಭಾಯ್ ಅಬ್ಬರಿಸುತ್ತಿದ್ದಾನೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಅಕ್ಕಿ ಬದಲಿಗೆ ಬಂದ ಹಣದಿಂದ ಜೋಳ, ಟೊಮೆಟೊ, ಚಿಕನ್ ಕೊಳ್ಳಿ: ಎಚ್‌.ಕೆ.ಪಾಟೀಲ್‌

Related Video