ಅಕ್ಕಿ ಬದಲಿಗೆ ಬಂದ ಹಣದಿಂದ ಜೋಳ, ಟೊಮೆಟೊ, ಚಿಕನ್ ಕೊಳ್ಳಿ: ಎಚ್‌.ಕೆ.ಪಾಟೀಲ್‌

ಕೇಂದ್ರ ಸರ್ಕಾರ ಅಕ್ಕಿ ಕೊಡದಿರುವುದು ಒಳ್ಳೆಯದೇ ಆಗಿದೆ. ಅಕ್ಕಿ  ಖರೀದಿಸಲು ಬಳಸುವ ಹಣವನ್ನೇ ಕೊಡಿ ಅಂತಾ ಕೆಲವರು ಅಂದಿದ್ರು ಎಂದು ಎಚ್‌.ಕೆ.ಪಾಟೀಲ್‌ ಹೇಳಿದ್ದಾರೆ.
 

First Published Jul 16, 2023, 2:42 PM IST | Last Updated Jul 16, 2023, 3:10 PM IST

ಗದಗ: ಅಕ್ಕಿ ಬದಲಿಗೆ ಬಂದ ಹಣದಿಂದ ಜೋಳ, ಟೊಮೆಟೊ, ಚಿಕನ್ ಬೇಕಾದ್ರೂ ತೆಗೆದುಕೊಳ್ಳಿ. ಕೇಂದ್ರ ಸರ್ಕಾರ(central government) ಅಕ್ಕಿ ಕೊಡಲಿಲ್ಲ ಅಂತಾ ನಾವು ಪೇಚಿಗೆ ಸಿಲುಕಿದ್ವಿ, ಆಗ ಜನರ ಸಲಹೆ ಕೇಳಿದ್ವಿ ಎಂದು ಗದಗದಲ್ಲಿ ಎಚ್‌.ಕೆ. ಪಾಟೀಲ್‌ (HK Patil) ಹೇಳಿದ್ದಾರೆ. ಅನ್ನಭಾಗ್ಯ(Annabhagya)  ಅಕ್ಕಿಯ ನೇರ ನಗದು ಹಣ ವರ್ಗಾವಣೆ ಮಾಡಿದ ಬಳಿಕ ಎಚ್ .ಕೆ. ಪಾಟೀಲ್‌ ಮಾತನಾಡಿದರು. ಒಳ್ಳೆಯದೇ ಆಗಿದೆ ಖರೀದಿಸಲು ಬಳಸುವ ಹಣವನ್ನೇ ಕೊಡಿ ಅಂತಾ ಕೆಲವರು ಅಂದ್ರು‌. ಆ ಹಣದಿಂದ ತಮಗೆ ಬೇಕಾದನ್ನ ಖದೀದಿಸುತ್ತಾರೆ. 5 ಕೆಜಿಯಲ್ಲೇ ಎಡ್ಮೂರು ಕೆಜಿ ಮಾರಿಕೊಂಡು ತಿಂತಿದ್ರು.35 ರೂಪಾಯಿಯ ಅಕ್ಕಿಯನ್ನ 10/12 ರೂಪಾಯಿಗೆ ಮಾರಿಕೊಳ್ಳುತ್ತಿದ್ದಾರೆ. ಹಾಗಾಗಿ ಹಣವನ್ನೇ ಕೊಟ್ಟು ಬಿಡಿ ಅಂತಾ ಜನರೇ ಹೇಳಿದ್ದಾರೆ. ಅಕ್ಕಿ ಸ್ಟಾಕ್ ಆಗುವವರೆಗೂ ಹಣ ಕೊಡಲು ನಿರ್ಧರಿಸಿದ್ದೇವೆ ಎಂದು ಎಚ್‌.ಕೆ.ಪಾಟೀಲ್‌ ಹೇಳಿದ್ದಾರೆ. 

ಇದನ್ನೂ ವೀಕ್ಷಿಸಿ:  ಯುವಕನಿಗೆ ಬೆಂಕಿ ಹಚ್ಚಿದ ಪ್ರಕರಣ: ಆರೋಪಿಗಳ ವಿರುದ್ಧ ಕಠಿಣ ಕ್ರಮ ಎಂದ ಗೃಹ ಸಚಿವರು