‘ದರ್ಶನ್ & ಫಿ-ಮೇಲ್’ ಪಿಎಚ್‌ಡಿ... ಪವಿತ್ರಾ ಶಪಥ: ಇದು ಬೇಲ್ ಮೇಲೆ ಹೊರ ಬಂದ ಪಟ್ಟಣಗೆರೆ ಪರಮವೀರನ ಸಾಹಸ!

ದರ್ಶನ್ ದೇವತಾ ಮನುಷ್ಯ. ಕನ್ನಡ ಚಿತ್ರರಂಗದ ಹೆಗ್ಗುರುತು. ಅದೇ ಕಾರಣಕ್ಕೆ ರಕ್ತ ಹೀರಿ ಬಂದರೂ ಕೆಲವರು ಮೆರವಣಿಗೆ ಮಾಡುತ್ತಿದ್ದಾರೆ. ಅಭೂತಪೂರ್ವ ಸ್ವಾಗತಕ್ಕೆ ಖುದ್ದು ದರ್ಶನ್ ಬೆಚ್ಚಿ ಬಿದ್ದಿದ್ದಾನೆ.

Share this Video
  • FB
  • Linkdin
  • Whatsapp

ದರ್ಶನ್ ದೇವತಾ ಮನುಷ್ಯ. ಕನ್ನಡ ಚಿತ್ರರಂಗದ ಹೆಗ್ಗುರುತು. ಅದೇ ಕಾರಣಕ್ಕೆ ರಕ್ತ ಹೀರಿ ಬಂದರೂ ಕೆಲವರು ಮೆರವಣಿಗೆ ಮಾಡುತ್ತಿದ್ದಾರೆ. ಅಭೂತಪೂರ್ವ ಸ್ವಾಗತಕ್ಕೆ ಖುದ್ದು ದರ್ಶನ್ ಬೆಚ್ಚಿ ಬಿದ್ದಿದ್ದಾನೆ. ಅನ್ನದಾನ ಮಾಡು, ಯಾರನ್ನಾದರೂ ಹೊಡಿ, ನಾಲ್ಕು ಆಟೋ ಕೊಡಿಸು. ಬಾಯಿಗೆ ಬಂದಂತೆ ಬೈಯಿ. ಬಾರಾ ಖೂನ್ ಮಾಫ್ ಎನ್ನುತ್ತಿದೆ ಒಂದು ವರ್ಗ. ದರ್ಶನ್ ಇಷ್ಟೆಲ್ಲ ನಾಲಿಗೆ ಕೈ ಅಲ್ಲಾಡಿಸಿದರೂ ಯಾಕೆ ಹೀಗಾಗುತ್ತಿದೆ ? ಇದೇ ಇವತ್ತಿನ ಸುವರ್ಣ ಫೋಕಸ್, ಪಟ್ಟಣಗೆರೆ ಪರಮವೀರ. ಹಲವು ದಿನಗಳ ಕಾಲ ಬೇಲ್ ಮೇಲೆ ಹೊರ ಬಂದಿರೋ ದಾಸನಿಗೆ ಕಂಟಕವಾಗಿದ್ದು ಒಂದು ಹೆಣ್ಣು. ಅಷ್ಟಕ್ಕೂ ದರ್ಶನ್ ಸಕಲ ಮಹಿಳಾ ಮಣಿಗಳನ್ನು ಹೇಗೆ ನೋಡಿಕೊಳ್ಳುತ್ತಾರೆ ?

ಕಂಠದಲ್ಲಿ ಒಂದೇ ಒಂದು ಶಬ್ದ ಅವಾಚ್ಯ ಶಬ್ದಗಳನ್ನು ಬಳಸದೆ ಯಾವ ರೀತಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ?. ಅದೆಷ್ಟು ಜನ್ಮದ ಪುಣ್ಯವೋ ನಮ್ಮದು. ಅದರಲ್ಲೂ ದರ್ಶನ್ ಮಹಿಳಾ ಅಭಿಮಾನಿಗಳದ್ದು ? ಮಹಾ ಅಚ್ಚರಿ. ದರ್ಶನ್ ಸಕಲ ಮಹಿಳಾ ಮಣಿಗಳನ್ನು ಹೇಗೆ ನೋಡಿಕೊಳ್ಳುತ್ತಾರೆ ? ಕಂಠದಲ್ಲಿ ಒಂದೇ ಒಂದು ಶಬ್ದ ಅವಾಚ್ಯ ಶಬ್ದಗಳನ್ನು ಬಳಸದೆ ಯಾವ ರೀತಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ ? ಆ ಕರುಳು ಹಿಂಡುವ ಕಥನ ಇಲ್ಲಿದೆ. ಕನ್ನಡ ಚಿತ್ರರಂಗದ ಅನೇಕ ನಟಿಯರು ದರ್ಶನ್ ಪರ ಉಗ್ರ ಹೋರಾಟ ಮಾಡಲು ಸಜ್ಜಾಗಿದ್ದಾರೆ. ‘ಎಲ್ಲರನ್ನೂ ಅಮ್ಮ..ಚೆನ್ನಾಗಿದ್ದೀರಾ...’ ಹೀಗೆ ಮಾತಾಡಿಸುವ ದಾಸನ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ಬಗ್ಗೆ ಕೆಂಡ ಕಾರುತ್ತಿದ್ದಾರೆ. ಏನಿದು ಧಮಾಕಾ ? ವಾಚ್ ದಿಸ್ ಸ್ಟೋರಿ.

Related Video