ಶ್ರೀಮಂತ ನಟರ ಪಟ್ಟಿ ಸೇರಿದ ಬಾದ್ ಷಾ ಕಿಚ್ಚ ಸುದೀಪ್ ! ಅಭಿನಯ ಚಕ್ರವರ್ತಿ ಬಳಿ ಇರೋ ಒಟ್ಟು ಆಸ್ತಿ ಎಷ್ಟು ಕೋಟಿ ?

ಕಿಚ್ಚನ ಸೋಷಿಯಲ್ ಮರ್ಕ್ ಬಗ್ಗೆ ಹೊಸದಾಗೇನೂ ಹೇಳಬೇಕಿಲ್ಲ. ಕಷ್ಟ ಅಂತ ಬಂದವರಿಗೆ ಬರಿ ಕೈನಲ್ಲಿ ಕಿಚ್ಚ ಕಳಿಸಿದ ಉದಹಾರಣೆಯೇ ಇಲ್ಲ. ಹೀಗೆ ತೆರೆ ಮೇಲೆ ಹಾಗೂ ತೆರೆ ಹಿಂದೆ ರೀಯಲ್ ಹೀರೋ ಆಗಿರೋ ಸುದೀಪ್ ಬಳಿ ಎಷ್ಟು ಆಸ್ತಿ ಇದೆ..? ಈಗ ಈ ಬಗ್ಗೆ ಹೊಸ ಸುದ್ದಿಯೊಂದು ಹೊರ ಬಂದಿದೆ. 
 

First Published Jul 15, 2024, 10:45 AM IST | Last Updated Jul 15, 2024, 10:45 AM IST

ಕಿಚ್ಚ ಸುದೀಪ್ ಬಣ್ಣದ ಲೋಕಕ್ಕೆ ಕಾಲಿಟ್ಟು 28 ವರ್ಷಗಳು ಕಳೆದಿವೆ. ಈ ಅವಧಿಯಲ್ಲಿ ಸುದೀಪ್ (Sudeep) ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ನಿರ್ದೇಶಕರಾಗಬೇಕು ಎಂಬ ಕನಸಿನೊಂದಿಗೆ ಬಂದ ಅವರು ಆಗಿದ್ದು ಹೀರೋ. ಆ ಬಳಿಕ ಡೈರೆಕ್ಟರ್ ಕ್ಯಾಪ್ ತೊಟ್ರು. ನಿರ್ಮಾಪಕ ಕೂಡ ಆದ್ರು. ಇದೀಗ ಸುದೀಪ್ ಶ್ರೀಮಂತ ನಟರ ಪಟ್ಟಿಯಲ್ಲೂ(Richest actor) ಸ್ಥಾನ ಪಡೆದಿದ್ದಾರೆ. ಕಿಚ್ಚ ನೂರಾರು ಕೋಟಿ ರೂಪಾಯಿಯ ಒಡೆಯ ಅನ್ನೋ ಪಟ್ಟ ಅಲಂಕರಿಸಿದ್ದಾರೆ. ಕಿಚ್ಚ ಸುದೀಪ್ ಈಗ ಕನ್ನಡದ (Kannada)ಅತ್ಯಂತ ಶ್ರೀಮಂತ ನಟ. ಯಾಕಂದ್ರೆ ಕಿಚ್ಚನ ಬಳಿ ಬರೋಬ್ಬರಿ 125 ಕೋಟಿ ಆಸ್ತಿ ಇದೆಯಂತೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ಸುದೀಪ್ ಒಟ್ಟೂ ಆಸ್ತಿ ಸರಿಸುಮಾರು 125 ಕೋಟಿ ರೂಪಾಯಿ. ಸಿನಿಮಾಗಳಿಂದ, ಬ್ರ್ಯಾಂಡ್‌ಗಳ ಪ್ರಚಾರದಿಂದ ಸುದೀಪ್‌ಗೆ ಹಣ ಬರುತ್ತಿದೆ. ಒಂದೊಂದು ಸಿನಿಮಾಕ್ಕೆ 15 ಕೋಟಿ ಸಂಭಾವನೆ ಪಡೆಯುವ ಸುದೀಪ್ ಬೆಂಗಳೂರಿನಲ್ಲಿ ಸ್ವಂತ ಬಂಗಲೆ ಹೊಂದಿದ್ದಾರೆ. ಇದರ ಬೆಲೆ 20 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಅವರು ಅನೇಕ ಕಡೆಗಳಲ್ಲಿ ಜಾಗ ಖರೀದಿ ಮಾಡಿದ್ದಾರೆ. ಮುಂಬೈನಲ್ಲಿ ಸುದೀಪ್ ಫಾರ್ಮ್ಹೌಸ್ ಇದೆ. ಹೈದ್ರಾಬಾದ್ನಲ್ಲಿ ಮನೆ ಇದೆ. ಈ ಜಾಗಗಳ ಬೆಲೆ ವರ್ಷ ಕಳೆದಂತೆ ಹೆಚ್ಚುತ್ತಲೇ ಇದೆ. ಸುದೀಪ್ ನಿರ್ಮಾಪಕ ಕೂಡ ಹೌದು. ‘ಕಿಚ್ಚ ಕ್ರಿಯೇಷನ್ಸ್’ ಬ್ಯಾನರ್ನಲ್ಲಿ ನಿರ್ಮಾಣ ಸಂಸ್ಥೆ ಇದೆ. ಹಲವು ಚಿತ್ರಗಳಿಗೆ  ಕಿಚ್ಚ ಬಂಡವಾಳ ಹೂಡಿದ್ದಾರೆ. ಇಷ್ಟೇ ಅಲ್ಲಾ ಸುದೀಪ್ ಹಲವು ಬ್ರ್ಯಾಂಡ್ಗಳ ಪ್ರಚಾರ ಮಾಡುತ್ತಾರೆ. ಪ್ರತಿ ಬ್ರ್ಯಾಂಡ್ನ ಪ್ರಚಾರ ರಾಯಭಾರಿ ಆಗಲು ಬರೋಬ್ಬರಿ 5 ಕೋಟಿ ರೂಪಾಯಿ ಪಡೆಯುತ್ತಾರೆ. ಸುದೀಪ್ ಅವರಿಗೆ ಕಾರುಗಳ ಬಗ್ಗೆ ವಿಶೇಷ ಪ್ರೀತಿ ಇದೆ. ಟೊಯೊಟಾ ವೆಲ್ಫೈರ್, ಲ್ಯಾಂಬೋರ್ಗಿನಿ, ಸ್ಲೀಕ್ ಹಮ್ಮರ್ 3, ಸಲ್ಮಾನ್ ಖಾನ್ ಉಡುಗೆಯಾಗಿ ನೀಡಿದ ಬಿಎಂಡಬ್ಲ್ಯೂ, ಜೀಪ್ ಕಂಪಾಸ್ ಕಾರುಗಳನ್ನು ಇದೆ. ಕನ್ನಡದ ಬಿಗ್ಬಾಸ್ ಹೋಸ್ಟರ್. ಹೀಗಾಗಿ ಕಿಚ್ಚ ಈಗ ಶ್ರೀಮಂತ ನಟರ ಪಟ್ಟಿ ಸೇರಿದ್ದಾರೆ.

ಇದನ್ನೂ ವೀಕ್ಷಿಸಿ:  ರತ್ನಭಂಡಾರ ಕೋಣೆ ಪ್ರವೇಶಿಸುತ್ತಿದ್ದಂತೆ ಮೂರ್ಛೆ ಹೋದ ಎಸ್ಪಿ! 3 ಕೋಣೆಯಲ್ಲಿ ಸಿಕ್ಕ ಬಂಗಾರ,ಮುತ್ತು,ರತ್ನ, ಹವಳಗಳೆಷ್ಟು?

Video Top Stories