ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ

ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್‌ನ ವಿಯೆಟ್ನಾಂ ಇಂಡಿಯಾ ಇಂಟರ್‌ನ್ಯಾಶನಲ್ ಬಿಜಿನೆಸ್ ಕಾನಕ್ಲೀವ್ ಅಪಾರ್ಡ್‌ 2025 ಅನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 29 ಗಣ್ಯರಿಗೆ ಪ್ರದಾನ ಮಾಡಲಾಯಿತು.

Share this Video
  • FB
  • Linkdin
  • Whatsapp

ವಿಯೆಟ್ನಾಂನ ಹೋ ಚಿ ಮಿನ್ ಸಿಟಿಯ ಇಕ್ವೆಟೋರಿಯಲ್ ಹೊಟೇಲ್ ಸಭಾಂಗಣದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್‌ನ ವಿಯೆಟ್ನಾಂ ಇಂಡಿಯಾ ಇಂಟರ್‌ನ್ಯಾಶನಲ್ ಬಿಜಿನೆಸ್ ಕಾನಕ್ಲೀವ್ ಅಪಾರ್ಡ್‌ 2025 ಅನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 29 ಗಣ್ಯರಿಗೆ ಪ್ರದಾನ ಮಾಡಲಾಯಿತು.

ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ, ಸೆವೆನ್ ಹಿಲ್ಸ್ ಟ್ರೇಡಿಂಗ್ ಕಂಪನಿ ಎಂಡಿ ಮೋಹನ ರಮೇಶ ಆನಂದ, ಮಲ್ಟಿಲಿಟರಲ್ ಟ್ರೇಡಿಂಗ್ ಪ್ರೈವೇಟ್ ಲಿಮಿಟೆಡ್ ಹಾಗೂ ತಂದೂರ್ ರೆಸ್ಟೋರೆಂಟ್ ಸಂಸ್ಥಾಪಕ, ಗೌಡರ್ ರವಿಕುಮಾರ್, ಸೆಂಟರ್ ಫಾರ್ ಏಷ್ಯನ್ ಹ್ಯುಮನ್ ರಿಸೋರ್ಸ್ ರಿಸರ್ಚ್ ಆಂಡ್ ಟ್ರೇನಿಂಟ್ ವಿಯೆಟ್ನಾಂ ಯುನಿವರ್ಸಿಟಿಯ ನಿರ್ದೇಶಕ, ಡಾ. ಫಾನ್ ಥಿ ಹಾಂಗ್ ಕ್ಸುವಾನ್, ಲಿಯೋಂಗ ಲೀ ಇಂಟರ್‌ನ್ಯಾಶನಲ್‌ನ ಸಂಸ್ಥಾಪಕ ನಿರ್ದೇಶಕರಾದ ಕ್ಯಾಥರೀನ್ ಟ್ರಾನ್, ದುಬೈನ ಪರ್ವ ಗ್ರೂಪ್‌ನ ಸಂಸ್ಥಾಪಕ ನೀಲೇಶ್ ಎಚ್.ಪಿ., ಬಿಎಂ ವೈನ್ಸ್‌ನ ವ್ಯವಸ್ಥಾಪಕ ಜಾಯ್ಸ್ ಫಾನ್, ವಿಯೆಟ್ನಾಂನ ಅಂಚಯ್ ಟಿವಿ ಅಧ್ಯಕ್ಷ ಥಾವ್ ಲೀ, ವಿಯೆಟ್ನಾಂನ ಭಾರತೀಯ ಪ್ರತಿನಿಧಿ ಮಹೇಶ ಚಂದ್ ಗಿರಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಪ್ರತಿಯೊಬ್ಬ ಸಾಧಕರಿಗೂ ಪ್ರಶಸ್ತಿ ಪತ್ರ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸಮಾರಂಭದ ಆರಂಭದಲ್ಲಿ ಭಾರತ ಹಾಗೂ ವಿಯೆಟ್ನಾಂ ರಾಷ್ಟ್ರಗೀತೆಯನ್ನು ಹಾಡುತ್ತಿದ್ದಂತೆ ಉಭಯ ದೇಶಗಳ ಗಣ್ಯರು, ಅತಿಥಿಗಳು ಎದ್ದು ನಿಂತು ಗೌರವ ಸಲ್ಲಿಸಿದರು. ವಿಯೆಟ್ನಾಂ ದೇಶದ ಸಾಂಸ್ಕೃತಿಕ ನೃತ್ಯ ಪ್ರದರ್ಶನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮೆರುಗು ನೀಡಿತು. ಪ್ರಶಸ್ತಿ ಪುರಸ್ಕೃತರು ತಮ್ಮ ಸಾಧನೆಯನ್ನು ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಗುರುತಿಸಿ ವಿಯೆಟ್ನಾಂಗೆ ಕರೆತಂದು ಗೌರವಿಸಿದ ಬಗ್ಗೆ ಕೃತಜ್ಞತೆ ಸಲ್ಲಿಸಿದರು.

Related Video