ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?

ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾದ ಟ್ರೈಲರ್ ಬೆನ್ನಲ್ಲೇ ಕಿಚ್ಚ ಸುದೀಪ್ ನಟನೆಯ ಮಾರ್ಕ್ ಟ್ರೈಲರ್ ಕೂಡ ಹೊರಬಂದಿದೆ. ಈ ಎರಡೂ ಚಿತ್ರಗಳ ರಿಲೀಸ್​ ನಡುವೆ 2 ವಾರಗಳ ಅಂತರ ಇದೆ. ಆದ್ರೆ ಟ್ರೈಲರ್ ವೀವ್ಸ್ ಲೆಕ್ಕಾಚಾರದಲ್ಲಿ ಯಾರು ಮುಂದಿದ್ದಾರೆ.

Share this Video
  • FB
  • Linkdin
  • Whatsapp

ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾದ ಟ್ರೈಲರ್ ಬೆನ್ನಲ್ಲೇ ಕಿಚ್ಚ ಸುದೀಪ್ ನಟನೆಯ ಮಾರ್ಕ್ ಟ್ರೈಲರ್ ಕೂಡ ಹೊರಬಂದಿದೆ. ಈ ಎರಡೂ ಚಿತ್ರಗಳ ರಿಲೀಸ್​ ನಡುವೆ 2 ವಾರಗಳ ಅಂತರ ಇದೆ. ಆದ್ರೆ ಟ್ರೈಲರ್ ವೀವ್ಸ್ ಲೆಕ್ಕಾಚಾರದಲ್ಲಿ ಯಾರು ಮುಂದಿದ್ದಾರೆ. ಡೆವಿಲ್ ಅಂಡ್ ಮಾರ್ಕ್ ನಡುವೆ ಯಾರಿಗೆಷ್ಟು ಮಾರ್ಕ್ಸ್ ಸಿಕ್ತು..? ನೋಡೋಣ ಬನ್ನಿ. ಯೆಸ್ ದರ್ಶನ್ ನಟನೆಯ ದಿ ಡೆವಿಲ್ ಮೂವಿ ಡಿಸೆಂಬರ್ 11ಕ್ಕೆ ತೆರೆಗೆ ಬಂದ್ರೆ, ಡಿಸೆಂಬರ್ 25ಕ್ಕೆ ಕಿಚ್ಚನ ಮಾರ್ಕ್ ಸಿನಿಮಾ ತೆರೆಗೆ ಬರ್ತಾ ಇವೆ. ಎರಡೂ ಚಿತ್ರಗಳ ನಡುವೆ 2 ವಾರ ಅಂತರ ಇರೋದ್ರಿಂದ ಎರಡರ ನಡುವೆ ವಾರ್ ಅಂತೂ ಇಲ್ಲ. ಆದ್ರೆ ಫ್ಯಾನ್ಸ್ ಲೆಕ್ಕಾಚಾರದ ವಾರ್ ಮಾತ್ರ ಖಂಡಿತ ಇದ್ದೇ ಇರುತ್ತೆ.

ಸದ್ಯ ದಿ ಡೆವಿಲ್ ಮತ್ತು ಮಾರ್ಕ್ ಟ್ರೈಲರ್​​ಗಳ ವೀವ್ಸ್ ಲೆಕ್ಕಾಚಾರದ ಬಗ್ಗೆ ಫ್ಯಾನ್ಸ್ ನಡುವೆ ಭರ್ತಿ ಚರ್ಚೆ ಆಗ್ತಾ ಇದೆ. ಡಿಸೆಂಬರ್ 5ನೇ ತಾರೀಖು ದಿ ಡೆವಿಲ್ ಟ್ರೈಲರ್ ರಿಲೀಸ್ ಆದ್ರೆ, ಡಿಸೆಂಬರ್​ 7 ನೇ ತಾರೀಖು ಮಾರ್ಕ್ ಟ್ರೈಲರ್ ಹೊರಬಂದಿದೆ. ಹೌದು ಮೂರು ದಿನಗಳಲ್ಲಿ ಡೆವಿಲ್ ಟ್ರೈಲರ್ 11 ಮಿಲಿಯನ್ ವೀವ್ಸ್ ಪಡೆದರೆ, ಮಾರ್ಕ್ ಜಸ್ಟ್ ಒಂದೇ ದಿನಗಳಲ್ಲಿ 14 ಮಿಲಿಯನ್ ವೀವ್ಸ್ ಗಳಿಸಿ ಮುಂದೆ ಇದೆ. ಅಷ್ಟೇ ಅಲ್ಲದೇ ಮಾರ್ಕ್ ಟ್ರೈಲರ್ ಕನ್ನಡದ ಜೊತೆಗೆ ಚತುರ್ಭಾಷೆಗಳಲ್ಲಿ ರಿಲೀಸ್ ಆಗ್ತಾ ಇದ್ದು, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿನಲ್ಲೂ ಮಿಲಿಯನ್ ಗಟ್ಟಳೇ ವೀವ್ಸ್ ಪಡೆದುಕೊಂಡಿದೆ. ಆ ಲೆಕ್ಕಾಚಾರದಲ್ಲಿ ಮಾರ್ಕ್ ಮುಂದೆ ಇದೆ. ಡೆವಿಲ್ ಗಿಂತ ಮಾರ್ಕ್ ಕ್ರೇಜ್ ಹೆಚ್ಚಿದೆ ಅನ್ನೋದು ಸಾಬೀತಾಗಿದೆ. ಇನ್ನೂ ಮಾರ್ಕ್ ಟ್ರೈಲರ್​ನಲ್ಲಿ ಧಂ ಹೊಡೆಯೋದು ಕಡಿಮೆ ಮಾಡಬೇಕಲೇ ಅಂತ ಹೇಳಿರೋದು ಕೂಡ ದಾಸನಿಗೆ ಟಾಂಗ್ ಕೊಡೋ ರೀತಿ ಇದೆ.

ಇದು ಸಹಜವಾಗೇ ದರ್ಶನ್-ಸುದೀಪ್ ಅಭಿಮಾನಿಗಳ ನಡುವೆ ಕುಸ್ತಿಗೆ ಕಾರಣ ಆಗಿದೆ. ಸದ್ಯದ ಮಟ್ಟಿಗೆ ವೀವ್ಸ್ ಲೆಕ್ಕಾಚಾರದಲ್ಲಿ ಡೆವಿಲ್ ಹಿಂದೆ ಇರಬಹುದು. ಆದ್ರೆ ಕಲೆಕ್ಷನ್ ಲೆಕ್ಕಾಚಾರದಲ್ಲಿ ಡೆವಿಲ್ ದಾಖಲೆ ಸೃಷ್ಟಿ ಮಾಡಲಿದೆ ಅಂತಿದ್ದಾರೆ ದರ್ಶನ್ ಫ್ಯಾನ್ಸ್. ಸದ್ಯ ಡೆವಿಲ್ ಅಡ್ವಾನ್ಸ್ ಬುಕ್ಕಿಂಗ್ ಜೋರಾಗಿದ್ದು, ಡೆವಿಲ್ ಖಂಡಿತ ಧಮಾಕೇದಾರ್ ಕಲೆಕ್ಷನ್ ಮಾಡೋ ನಿರೀಕ್ಷೆ ಇದೆ. ಕ್ರಿಸ್​ಮಸ್​​ಗೆ ಬರಲಿರೋ ಮಾರ್ಕ್ ಕೂಡ ಬಾಕ್ಸಾಫೀಸ್​​ನಲ್ಲಿ ಅಬ್ಬರಿಸೋದ್ರಲ್ಲಿ ಡೌಟೇ ಇಲ್ಲ. ಈಗಾಗ್ಲೇ ಕಿಚ್ಚ ಡೆವಿಲ್ ಜೊತೆಗೆ ನಮ್ಮ ಪೈಪೋಟಿ ಇಲ್ಲ ಅಂತ ಹೇಳಿಯಾಗಿದೆ. ಆದ್ರೆ ಫ್ಯಾನ್ಸ್ ಮಾತ್ರ ಡೆವಿಲ್ Vs ಮಾರ್ಕ್ ನಡುವೆ ಯಾರಿಗೆಷ್ಟು ಮಾರ್ಕ್ಸ್ ಅಂತ ಲೆಕ್ಕ ಹಾಕ್ತಾನೇ ಇದ್ದಾರೆ.

Related Video