ರತ್ನಭಂಡಾರ ಕೋಣೆ ಪ್ರವೇಶಿಸುತ್ತಿದ್ದಂತೆ ಮೂರ್ಛೆ ಹೋದ ಎಸ್ಪಿ! 3 ಕೋಣೆಯಲ್ಲಿ ಸಿಕ್ಕ ಬಂಗಾರ,ಮುತ್ತು,ರತ್ನ, ಹವಳಗಳೆಷ್ಟು?

6 ವರ್ಷಗಳ ಬಳಿಕ ತೆರೆಯಿತು ಪುರಿ ಜಗನ್ನಾಥನ ರತ್ನಭಂಡಾರ..!
ಕತ್ತಲೆ ಕೋಣೆಯಲ್ಲಿದ್ದ ಬಂಗಾರದ ಖಜಾನೆಯ ಸೀಕ್ರೆಟ್ ರಿವೀಲ್..! 
ಅಧಿಕಾರಿಗಳಿಗೆ ಸರ್ಪಭಯ,ಹಾವಾಡಿಗರು ಮೊದಲು ಹೋಗಿದ್ಯಾಕೆ..?

First Published Jul 15, 2024, 9:57 AM IST | Last Updated Jul 15, 2024, 9:59 AM IST

46 ವರ್ಷಗಳ ಬಳಿಕ ಪುರಿ ಜಗನ್ನಾಥ (Puri Jagannath) ದೇಗುಲದ ನೆಲಮಾಳಿಗೆಯಲ್ಲಿ ಅಡಗಿದ್ದ ರತ್ನಭಂಡಾರದ (Ratna Bhandar) ಬಾಗಿಲನ್ನು ತೆರೆಯಲಾಗಿದೆ. ಇಷ್ಟು ದಿನ ಆ ರತ್ನಭಂಡಾರದ ಕೀಲಿ ಕೈ ಕಳೆದ ಕಾರಣ ಅದನ್ನ ಓಪನ್ ಮಾಡಲು ಸಾಧ್ಯವಾಗಿರಲಿಲ್ಲ. ಆದ್ರೀಗ ಬರೋಬ್ಬರಿ 46 ವರ್ಷಗಳ ನಂತರ ಪುರಿಜಗನ್ನಾಥ ದೇವಾಲಯದ ರತ್ನಭಂಡಾರದ ಬಾಗಿಲನ್ನು(Doors) ಕಟರ್ ಬಳಸಿ ತೆರೆಯಲಾಗಿದೆ. ದೇವಾಲಯ ಸಮಿತಿಯ 16 ಸದಸ್ಯರು ರತ್ನಭಂಡಾರದ ಕೋಣೆಯೊಳಗೆ ಹೋಗಿದ್ದು, ಕತ್ತಲೆ ಕೋಣೆಯಲ್ಲಿ ಅಡಗಿದ್ದ ಬಂಗಾರದ ಖಜಾನೆಯನ್ನು ಕಂಡು ಶಾಕ್ ಆಗಿದ್ದಾರೆ. ಪುರಿ ಜಗನ್ನಾಥ ದೇವಾಲಯ ದೊಡ್ಡ ಸುದ್ದಿಯಲ್ಲಿದೆ. ಭಾರತದ ಅತ್ಯಂತ ಶ್ರೀಮಂತ ದೇವಸ್ಥಾನಗಳ ಪೈಕಿ ಪುರಿ ಜಗನ್ನಾಥ ದೇವಸ್ಥಾನವೂ ಒಂದು. ತನ್ನಲ್ಲಿನ ಅನೇಕ ವಿಶೇಷತೆಗಳು, ತರ್ಕಕ್ಕೆ ನಿಲುಕದ ಹತ್ತಾರು ವಿಸ್ಮಯಕಾರಿ ವಿಚಾರಗಳಿಂದಲೇ ಈ ದೇವಸ್ಥಾನ ಖ್ಯಾತಿ ಹೊಂದಿದೆ. ಆದ್ರಿಂದು ಇದೇ ಪುರಿ ದೇಗುಲದ ರತ್ನಭಂಡಾರದ ಕೊಠಡಿಯ ಬಾಗಿಲನ್ನು ಬರೋಬ್ಬರಿ 46 ವರ್ಷಗಳ ಬಳಿಕ ತೆರೆಯಲಾಗಿದೆ. ಭಾರತದ ಶ್ರೀಮಂತ ದೇವರುಗಳ ಪೈಕಿ ಪುರಿ ಜಗನ್ನಾಥ ದೇವರೂ ಒಬ್ಬರು. ಊಹೆಗೂ ನಿಲುಕದಷ್ಟು ಧನ ಕನಕ ಸಂಪತ್ತು ದೇಗುಲದಲ್ಲಿ ಇದೆ. ನೆಲಮಾಳಿಗೆಯಲ್ಲಿನ ಚಿನ್ನದಿಂದ ಒಂದು ಊರನ್ನೇ ಖರಿದಿಸಬಹುದು ಅಂತ ಹೇಳಲಾಗ್ತಿತ್ತು. ಆದ್ರೆ ಇಂದು ಅದೇ ರತ್ನ ಭಂಡಾರ ಕೋಣೆಯ ಬಾಗಿಲನ್ನು ತೆರೆಯಲಾಗಿದೆ.

ಇದನ್ನೂ ವೀಕ್ಷಿಸಿ:  ಬೇಸರಗೊಂಡ ಭಕ್ತರಿಂದ ಬಬ್ಬುಸ್ವಾಮಿಯಲ್ಲಿ ಪ್ರಾರ್ಥನೆ: 24 ಗಂಟೆಯೊಳಗೆ ಕಳ್ಳನನ್ನು ಹುಡುಕಿ ಕೊಡುವುದಾಗಿ ದೈವದ ಅಭಯ!

Video Top Stories