Yash Next Movie: ಹೊಸ ವರ್ಷಕ್ಕೆ ಯಶ್‌ ಬಿಗ್ ಅನೌನ್ಸ್‌ಮೆಂಟ್‌: ರಾಕಿ ಭಾಯ್‌ ನೆಕ್ಸ್ಟ್ ಸಿನಿಮಾ ಯಾವ್ದು?

Rocking Star Yash Upcoming Movie: ಕೆಜಿಎಫ್‌-2 ರಿಲೀಸ್ ಆಗಿ ಬರೋಬ್ಬರಿ 8 ತಿಂಗಳು ಕಳೆದೇ ಹೋಯ್ತು. ಆದ್ರೆ ಯಶ್ ಕಡೆಯಿಂದ ಮಾತ್ರ ಮತ್ತೊಂದು ಗುಡ್ ನ್ಯೂಸ್ ಬರಲೇ ಇಲ್ಲ

Share this Video
  • FB
  • Linkdin
  • Whatsapp

ಬೆಂಗಳೂರು (ನ. 17):  'ಕೆಜಿಎಫ್ 2' (KGF 2) ಕನ್ನಡ ಚಿತ್ರರಂಗದ ದಿಕ್ಕನ್ನು ಬದಲಿಸಿದೆ. ಈ ಸಿನಿಮಾದಿಂದ ರಾಕಿಂಗ್‌ಸ್ಟಾರ್ ಆಗಿದ್ದ ರಾಕಿ ಭಾಯ್ ನ್ಯಾಷನಲ್‌ ಸ್ಟಾರ್ (National Star) ಆಗಿ ಪ್ರಮೋಟ್ ಆಗಿದ್ದಾರೆ. ಈಗ ಯಶ್ (Yash) ಕೇವಲ ಕರ್ನಾಟಕಕ್ಕೆ ಅಷ್ಟೇ ಅಲ್ಲ, ವಿಶ್ವದ ಮೂಲೆ ಮೂಲೆಯಲ್ಲೂ ಚಿರಪರಿಚಿತ. ಇಷ್ಟಾದ್ಮೇಲೆ ಯಶ್ ಸಿನಿಮಾಗಾಗಿ ಕಾಯೋರ ಸಂಖ್ಯೆ ದೊಡ್ಡದೇ ಇದೆ. ಆದ್ರೆ ಇದುವರೆಗೂ ಯಶ್ ಹೊಸ ಸಿನಿಮಾ ಅನೌನ್ಸ್ ಮಾಡಿಲ್ಲ. ಆ ಕೋಟ್ಯಾನು ಕೋಟಿ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಕೆಜಿಎಫ್‌-2 ರಿಲೀಸ್ ಆಗಿ ಬರೋಬ್ಬರಿ 8 ತಿಂಗಳು ಕಳೆದೇ ಹೋಯ್ತು. ಆದ್ರೆ ಯಶ್ ಕಡೆಯಿಂದ ಮಾತ್ರ ಮತ್ತೊಂದು ಗುಡ್ ನ್ಯೂಸ್ ಬರಲೇ ಇಲ್ಲ. ಯಶ್ ಫ್ಯಾನ್ಸ್ ಹೊಸ ಸಿನಿಮಾದ ಘೋಷಣೆಗಾಗಿ ತುದಿಗಾಲಲ್ಲಿ ಕಾಯ್ತಿದ್ದಾರೆ. ಆ ದಿನ ಆ ಘಳಿಗೆ ಯಾವಾಗ ಬರುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದಾರೆ. ಇದಕ್ಕೆಲ್ಲಾ ಉತ್ತರ ನ್ಯೂ ಈಯರ್ 2023 ಅನ್ನೋ ವಿಚಾರ ಯಶ್ ಬಳಗದಿಂದ ಘಂಟಾ ಘೋಷವಾಗಿ ಬಂದಿದೆ. 

Kichcha Sudeep: ಅಭಿನಯ ಚಕ್ರವರ್ತಿ ನೆಕ್ಸ್ಟ್ ಪ್ಲಾನ್ ಏನು? ಸಿನಿಮಾ ಅನೌನ್ಸ್ ಯಾವಾಗ?

Related Video