ಟಾಕ್ಸಿಕ್' ಬಗ್ಗೆ ಹಾಲಿವುಡ್‌ನಿಂದಲೇ ಸಿಕ್ತು ಭರ್ಜರಿ ಸುದ್ದಿ! ಪ್ಯಾನ್ ವರ್ಲ್ಡ್‌ ಟಾಪ್ ಟೆಕ್ನೀಷಿಯನ್ಸ್‌ನಿಂದ ಕೆಲಸ..!

ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಊಹಿಸಿದ್ದಕ್ಕಿಂತ ದೊಡ್ಡಮಟ್ಟದಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ಅದಕ್ಕಾಗಿ ಚಿತ್ರತಂಡ ಭಾರೀ ಕಸರತ್ತು ನಡೆಸುತ್ತಿದೆ. ಇದೀಗ ಹಾಲಿವುಡ್ ರೇಂಜ್‌ನಲ್ಲಿ ಸಿದ್ಧವಾಗುತ್ತಿರೋ ಟಾಕ್ಸಿಕ್ ಬಗ್ಗೆ ಹಾಲಿವುಡ್ ಅಂಗಳದಿಂದಲೇ ಭರ್ಜರಿ ಸುದ್ದಿಯೊಂದು ರಿವೀಲ್ ಆಗಿದೆ. 

Share this Video
  • FB
  • Linkdin
  • Whatsapp

'ಟಾಕ್ಸಿಕ್' ಸಿನಿಮಾ ಸ್ಟಾರ್‌ ಕಾಸ್ಟ್ ಬಗ್ಗೆ ಗುಸುಗುಸು ಕೇಳಿ ಬರ್ತಿತ್ತು. ಆದ್ರೆ ಈಗ ಟಾಕ್ಸಿಕ್ ಟೆಕ್ನೀಷಿಯನ್ಸ್(Technicians) ಬಗ್ಗೆ ಭರ್ಜರಿ ಬ್ಯಾಂಗಿಂಗ್ ಸುದ್ದಿಯೊಂದು ಬಂದಿದೆ. ಡ್ರಗ್ಸ್ ಮಾಫಿಯಾ ಎನ್ನುವ ಯೂನಿವರ್ಸಲ್ ಸಬ್ಜೆಕ್ಟ್ ಅನ್ನು ಬಹಳ ದೊಡ್ಡಮಟ್ಟದಲ್ಲಿ ಕಟ್ಟಿಕೊಡುವ ಪ್ರಯತ್ನ ನಡೀತಿದೆ. ಹೀಗಾಗಿ ಇಂಗ್ಲೀಷ್ ಸೇರಿದಂತೆ ಯೂರೋಪ್ ಭಾಷೆಗಳಲ್ಲಿ 'ಟಾಕ್ಸಿಕ್' (Toxic movie) ಅನ್ನ ತೆರೆಗೆ ತರುವ ಪ್ರಯತ್ನ ನಡೀತಿದೆ. ಅದಕ್ಕೆ ತಕ್ಕಂತೆ ಮೇಕಿಂಗ್ ಪ್ಲ್ಯಾನ್ ಮಾಡಲಾಗುತ್ತಿದ್ದು, ಈ ಸಿನಿಮಾಗೆ ಹಾಲಿವುಡ್ (Hollywood) ತಂತ್ರಜ್ಞರು ಕೆಲಸ ಮಾಡುವುದು ಕನ್ಫರ್ಮ್ ಆಗಿದೆ. ಮ್ಯಾಡ್ ಮ್ಯಾಕ್ಸ್ ಸಿನಿಮಾನ ನೀವೆಲ್ಲಾ ನೋಡಿರಬಹುದು. ಇದು ಹಾಲಿವುಡ್ನ ಆಕ್ಷನ್ ಡ್ರಾಮ. ಈ ಸಿನಿಮಾದ (Yash) ಆಕ್ಷನ್ ದೃಷ್ಯಗಳನ್ನ ನೋಡಿದ್ರೆ ವಿಶ್ಯುವಲ್ ಟ್ರೀಟ್ನ ನೋಡಿದ್ರೆ ಅಬ್ಬಬ್ಬಾ ಅನ್ನಿಸುತ್ತೆ. ಅಷ್ಟೆ ಅಲ್ಲ ಡಾರ್ಕ್ ನೈಟ್ ಸಿನಿಮಾವನ್ನ ಎದೆ ಗಟ್ಟಿ ಮಾಡ್ಕೊಂಡು ನೋಡಬೇಕು. ಅಷ್ಟೊಂದು ಥ್ರಿಲ್ ಕೊಡುತ್ತೆ. ಈ ಸಿನಿಮಾಗಳಲ್ಲಿ ಕೆಲಸ ಮಾಡಿದ್ದ, ಸ್ಟೀವ್ ಗ್ರಿಫಿನ್ ಹಾಗೂ ಡಾರ್ಕ್ ನೈಟ್ ಚಿತ್ರದ ರುವಾರಿ ಟಾಮ್ ಸ್ಟ್ರೂಥರ್ಸ್ ಸೆಕೆಂಡ್ ಯೂನಿಟ್ ಡೈರೆಕ್ಟರ್ ಆಗಿ 'ಟಾಕ್ಸಿಕ್' ತಂಡ ಸೇರುತ್ತಿದ್ದಾರೆ. ಅಷ್ಟೆ ಅಲ್ಲ ಡಾರ್ಕ್ ನೈಟ್' ಸೀರಿಸ್, 'ಆಕ್ವಾಮನ್- 2', 'ಮ್ಯಾಡ್ ಮ್ಯಾಕ್ಸ್' ಚಿತ್ರಗಳಿಗೆ ಪ್ರೀ ವಿಷ್ಯುವಲ್‌ಸೈಷನ್ ತಂಡದಲ್ಲಿ ಕೆಲಸ ಮಾಡಿದ್ದ ಕಾರ್ಲೋಸ್ ಕ್ಯಾಸ್ಟಿಲ್ಲೊ, ಡೇಸಿಯೊ ಕ್ಯಾಬಲೆರೊ, ಕ್ಲೌಡಿಯಾ ಹೈಂಜ್, ಶಿರಾಜ್ ಯಾಸಿನ್ ಕೂಡ 'ಟಾಕ್ಸಿಕ್' ಚಿತ್ರಕ್ಕೆ ಕೆಲಸ ಮಾಡುತ್ತಾರೆ ಎನ್ನಲಾಗ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಸಾಂಗ್, ಟೀಸರ್, ಟ್ರೈಲರ್‌ಗಾಗಿ ಭರ್ಜರಿ ಓಟಿಂಗ್..! ಪ್ಯಾನ್ ಇಂಡಿಯಾದಲ್ಲಿ 'ಮಾರ್ಟಿನ್' ಮಿಂಚಿಂಗ್..!

Related Video