ಸಾಂಗ್, ಟೀಸರ್, ಟ್ರೈಲರ್‌ಗಾಗಿ ಭರ್ಜರಿ ಓಟಿಂಗ್..! ಪ್ಯಾನ್ ಇಂಡಿಯಾದಲ್ಲಿ 'ಮಾರ್ಟಿನ್' ಮಿಂಚಿಂಗ್..!

ಈ ವರ್ಷ ಸ್ಯಾಂಡಲ್‌ವುಡ್‌ಗೆ ಸಿನಿಮಾ ಬರ ಬಂದಿದ್ದು ಗೊತ್ತೇ ಇದೆ. ಸ್ಟಾರ್ ಸಿನಿಮಾಗಳಿಲ್ಲದೇ ಬಸವಳಿದಿರೋ ಕನ್ನಡ ಚಿತ್ರರಂಗ ಮತ್ತೆ ಎದ್ದು ನಿಲ್ಲೋ ಟೈಂ ಬಂದಿದೆ. ಆ ದೊಡ್ಡ ಭರವಸೆ ಹುಟ್ಟಿಸಿರೋದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ. ಅದು ಮಾರ್ಟಿನ್ ಸಿನಿಮಾ ಮೂಲಕ. 

First Published Jul 22, 2024, 11:06 AM IST | Last Updated Jul 22, 2024, 11:06 AM IST

ಮಾರ್ಟಿನ್‌ ಸಿನಿಮಾ (Martin movie) ಯಾವಗ ಬರುತ್ತೆ ಅಂತ ಧ್ರುವ(Dhruva sarja) ಫ್ಯಾನ್ಸ್ ಕಾಯುತ್ತಿದ್ದಾರೆ. ಆದ್ರೆ ಅದಕ್ಕು ಮೊದಲು ಸಿನಿಮಾದ ಥಿಯೇಟ್ರಿಕಲ್ ಟ್ರೈಲರ್(Theatrical trailer), ಲವ್ ಸಾಂಗ್, ಹೀರೋ ಇಂಟ್ರಡಕ್ಷನ್ ಸಾಂಗ್‌ನಲ್ಲಿ ಯಾವುದನ್ನ ರಿಲೀಸ್(Release) ಮಾಡೋದು ಅಂತ ಚಿತ್ರತಂಡ ತಲೆ ಕೆಡಿಸಿಕೊಂಡಿತ್ತು. ಅದಕ್ಕೆ ಈಗ ಧ್ರುವನ ಫ್ಯಾನ್ಸ್ ಸಲ್ಯೂಷನ್ ಹುಡುಕಿದ್ದಾರೆ. ಟ್ರೈಲರ್(Trailer), ಸಾಂಗ್ ಯಾವುದು ಬೇಕು ಅಂತ ಫೈನಲ್ ಮಾಡಿದ್ದಾರೆ. ಮಾರ್ಟಿನ್ ಸಿನಿಮಾದ ಸ್ಯಾಂಪಲ್ಸ್‌ನಲ್ಲಿ ಟ್ರೈಲರ್. ಟೀಸರ್, ಸಾಂಗ್ಸ್‌ಗಳ ಲೀಸ್ಟ್ ಮಾಡಿದ್ದ ಚಿತ್ರತಂಡ ಯಾವುದನ್ನ ಮೊದಲು ಬಿಡಬೇಕು ಅಂತ ಪ್ರಶ್ನೆ ಕೇಳಿತ್ತು. ಅದಕ್ಕಾಗಿ ಓಟಿಂಗ್ ಮಾಡಿ ಅಂತ ಹೇಳಿತ್ತು ಮಾರ್ಟಿನ್ ಟೀಂ. ಈಗ ಓಟಿಂಗ್ ಮುಗಿದಿದೆ. ಈ ಓಟಿಂಗ್ ಪೋಲಿಂಗ್‌ಗೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದ್ದು ಮುಂಬೈ, ಡೆಲ್ಲಿ , ಚೆನೈ,  ಹೈದರಾಬಾದ್ ಸೇರಿ ಬೇರೆ ಬೇರೆ ನಗರಗಳಿಂದ ಆಡಿಯೆನ್ಸ್ ಓಟ್ ಹಾಕಿದ್ದಾರೆ. ಕೇವಲ 24 ಗಂಟೆಗಳಲ್ಲಿ 1.2 ಮಿಲಿಯನ್ ಓಟ್ ಬಿದ್ದಿರೋದು ಮಾರ್ಟಿನ್ ಹವಾ ಹೇಗಿದೆ ಎಂಬುದಕ್ಕೆ ಸಾಕ್ಷಿಯಾಗಿದ್ದು ಪ್ಯಾನ್ ಇಂಡಿಯಾ ತುಂಬೆಲ್ಲಾ ಮಾರ್ಟಿನ್ ಮಿಂಚಿಂಗ್ ಆಗ್ತಿದೆ. ಮಾರ್ಟಿನ್ ಸಿನಿಮಾದ ಟ್ರೈಲರ್, ಟೈಟಲ್ ಸಾಂಗ್, ಲವ್ ಸಾಂಗ್, ಥಿಯೇಟ್ರಿಕಲ್ ಟ್ರೈಲರ್ ರಿಲೀಸ್‌ಗೆ ರೆಡಿಯಾಗಿದೆ. ಆದ್ರೆ ಆ ನಾಲ್ಕು ಕಂಟೆಂಟ್‌ನಲ್ಲಿ ಯಾವುದನ್ನ ರಿಲೀಸ್ ಮಾಡುತ್ತೇವೆ ಅಂತ ಮಾರ್ಟಿನ್ ತಂಡ ನಾಳೆ ಅನೌನ್ಸ್ ಮಾಡಲಿದೆ. ಜುಲೈ 29ಕ್ಕೆ ಮುಂಬೈನಲ್ಲಿ ಮಾರ್ಟಿನ್ ಸಿನಿಮಾದ ದೊಡ್ಡ ಕಾರ್ಯಕ್ರಮವೊಂದು ನಡೀತಿದೆ. ಆ ಕಾರ್ಯಕ್ರಮದಲ್ಲಿ ಆಡಿಯೆನ್ಸ್ ಬೇಡಿಕೆ ಇಟ್ಟಿದ್ದ ಮಾರ್ಟಿನ್ ಸ್ಯಾಂಪನ್ಸ್ ರಿಲೀಸ್ ಆಗುತ್ತಿದೆ.

ಇದನ್ನೂ ವೀಕ್ಷಿಸಿ:  ಈ ಚುನಾವಣೆಗೆ ಟ್ರಂಪ್ V/S ಕಮಲಾ ಹ್ಯಾರಿಸ್ ಫೈಟ್..? ಸ್ಪರ್ಧೆಯಿಂದ ಹಿಂದೆ ಸರಿಯುತ್ತಾರಾ ಜೋ ಬೈಡನ್..?

Video Top Stories