ಕುತೂಹಲ ಮೂಡಿಸಿದ ಕದಂಬರ ಕಾಲದ ಕಥೆ..! ಮತ್ತೆ ಸದ್ದು ಮಾಡುತ್ತಿದೆ ಅಬ್ಬರದ ಕಾಂತಾರ..!

ದಾಖಲೆಗಳನ್ನ ಪುಡಿಗಟ್ಟೋಕೆ ಬರ್ತಿದ್ದಾನೆ ಲೆಜೆಂಡ್..!
ಕಾಂತಾರ ಚಿತ್ರೀಕರಣವಾಗ್ತಿರೋದು ಎಲ್ಲಿ ಗೊತ್ತಾ..?
ಕಾಂತಾರ 1ನೇ ಅಧ್ಯಾಯಕ್ಕೆ ಕಾಯುತ್ತಿದೆ ಭಾರತ..!

Share this Video
  • FB
  • Linkdin
  • Whatsapp

ಕಾಂತಾರ.. ಇದೊಂದು ಸಿನಿಮಾ ಹೆಸರಲ್ಲೆ ಒಂದು ಸಂಚಲನ ಇದೆ. ಭಾರತ ಸಿನಿಮಾ ಗ್ರಂಥದಲ್ಲಿ ಕಾಂತಾರ(Kantara 1) ಸಿನಿಮಾದ್ದೇ ಒಂದು ವಿಶೇಷ ಅಧ್ಯಾಯ. ಕನ್ನಡದ ಸಿನಿಮಾ ವಿಶ್ವದ ಮೂಲೆ ಮೂಲೆಗೆ ತಲುಪಿತ್ತು. ತುಳುನಾಡಿನ ಆಚರಣೆಯೊಂದಿಗೆ ಬೆಸೆದಿದ್ದ ಗಟ್ಟಿಯಾದ ಕಥೆ ಇತಿಹಾಸ ಸೃಷ್ಟಿ ಮಾಡಿತ್ತು. ಈಗ ಅಂಥದ್ದೇ ಇನ್ನೊಂದು ಇತಿಹಾಸವನ್ನ ಬರೆಯೋಕೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ(Rishabh Shetty) ಬರ್ತಾ ಇದಾರೆ. ಆದ್ರೆ ಅವರು ಈಗ ಹೇಳೋಕೆ ಹೊರಟಿರೋದು ಕಾಂತಾರ ಚಾಪ್ಟರ್ 1. ದಟ್ಟವಾದ ಕತ್ತಲಿಂದ ಕೂಡಿದ ಗುಹೆ. ಮೇಲೆ ಬೆಂಕಿಯಂತಹ ಒಂದು ಗೋಲ. ಎಡಗೈಗೆ ಬಿಗಿಯಾಗಿ ಕಟ್ಟಿದ ದಾರ. ಕಬ್ಬಿಣದಂತೆ ಕಾಣಿಸ್ತಾ ಇರೋ ರಟ್ಟೆ. ತೋಳಿನ ಮೇಲೊಂದು ಗಾಯ. ಏದುಸಿರ ಕಾರಣಕ್ಕೆ ಏರಿಳಿತ ಕಾಣಿಸ್ತಾ ಇರೋ ಎದೆ. ಕತ್ತಿನಲ್ಲಿ ರುದ್ರಾಕ್ಷಿ ಮಾಲೆ. ಬಲಗೈಲಿ ಆಯುಧ. ಸೋರುತ್ತಿರೋ ರಕ್ತ. ಎಡಗೈಲಿ ತ್ರಿಶೂಲ. ಗಡ್ಡಧಾರಿಯಾಗಿ ಜಟಾಧಾರಿಯಾಗಿ ನಿಂತಿರೋ ರಿಷಬ್ ಶೆಟ್ಟಿ. ಆ ಕಣ್ಣುಗಳಲ್ಲಿ ಬೆಂಕಿಯಿದೆ. ಮೈತುಂಬಾ ರಕ್ತವಿದೆ. ಶತ್ರು ಸಂಹಾರ ಮಾಡಿ ಬಂದರೂ ಇನ್ನೂ ಮುಗಿಯದ ರಕ್ತದಾಹದ ಭಾವನೆ ಮುಖದಲ್ಲಿದೆ. ಇಂತದ್ದೊಂದು ಫಸ್ಟ್ ಲುಕ್ ಯಾರಿಗೆ ತಾನೆ ಮೈ ನವಿರು ಏಳುವಂತೆ ಮಾಡೋದಿಲ್ಲ ಹೇಳಿ. ರಿಷಬ್ ಶೆಟ್ಟಿಯವರ ಬಹುನಿರೀಕ್ಷಿತ ಕಾಂತಾರ ಮೊದಲ ಅಧ್ಯಾಯ ಈಗ ಕೋಟಿ ಕೋಟಿ ಜನರ ಕಾತರಕ್ಕೆ ಕಾರಣವಾಗಿದೆ. ಕಾಂತಾರ ಅನ್ನೋದು ಸಿನೆಮಾವೇ ಅಲ್ಲ..ಅದೊಂದು ವರ್ಣಿಸಲಾರದಂತ ಅನುಭವ. ಸಿನೆಮಾ ಥಿಯೇಟರ್ ಒಳಗೆ ಹೋಗಿ ಕೂತ ಕೂಡಲೇ ನಮ್ಮಪ್ರಯಾಣ ತುಳು ನಾಡಿನ ಕಡೆಗೆ ಸಾಗುತ್ತೆ. ಅಲ್ಲಿಂದ ಎರಡುವರೆ ಗಂಟೆ ನಾವು ತುಳುನಾಡಿನ ಪರಿಸರ, ಆಚರಣೆಯಲ್ಲಿ ಮುಳುಗಿ ಹೋಗ್ತೀವಿ. ಅಕ್ಷರಷಃ ಪರಕಾಯ ಪ್ರವೇಶ. ನೋಡುಗರನ್ನ ಮಂತ್ರಮುಗ್ಧರನ್ನಾಗಿಸಿದ್ದರು ರಿಷಬ್ ಶೆಟ್ಟಿ.

ಇದನ್ನೂ ವೀಕ್ಷಿಸಿ: 3 ದಿನದಲ್ಲಿ ಸಿನಿಮಾ 6 ವರೆ ಕೋಟಿ ಕಲೆಕ್ಷನ್! ಇದು ರೆಬೆಲ್ ರೆಕಾರ್ಡ್ಸ್!

Related Video