3 ದಿನದಲ್ಲಿ ಸಿನಿಮಾ 6 ವರೆ ಕೋಟಿ ಕಲೆಕ್ಷನ್! ಇದು ರೆಬೆಲ್ ರೆಕಾರ್ಡ್ಸ್!

ಅಭಿಷೇಕ್ ನಾಲ್ಕು ವರ್ಷಗಳ ಬಳಿಕ ತೆರೆ ಮೇಲೆ ಕಾಣಿಸಿಕೊಂಡಿದ್ದು, ಎರಡನೇ ಸಿನಿಮಾಗೆ ಎಲ್ಲೆಡೆ ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದ್ದಾರೆ.
 

First Published Nov 28, 2023, 9:28 AM IST | Last Updated Nov 28, 2023, 9:28 AM IST

ದುನಿಯಾ ಸೂರಿ ನಿರ್ದೇಶನದ, ಅಭಿಷೇಕ್ ಅಂಬರೀಷ್(Abishek Ambareesh) ನಟನೆಯ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ(Bad Manners movie) ಕಳೆದ ಶುಕ್ರವಾರ ನ.27ಕ್ಕೆ ರಾಜ್ಯಾದ್ಯಂತ ತೆರೆಕಂಡಿದೆ. ಅಭಿಷೇಕ್ ನಾಲ್ಕು ವರ್ಷಗಳ ಬಳಿಕ ತೆರೆ ಮೇಲೆ ಕಾಣಿಸಿಕೊಂಡಿದ್ದು, ಎರಡನೇ ಸಿನಿಮಾಗೆ ಎಲ್ಲೆಡೆ ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದ್ದಾರೆ.ಸೂರಿ ಹಾಗೂ ಅಭಿ ಕಾಂಬಿನೇಷನ್ ಆಗಿದ್ದಕ್ಕೆ ಅಭಿಮಾನಿಗಳಿಗೆ(Fans) ಬಿಡುಗಡೆಗೂ ಮುನ್ನವೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿತ್ತು. ಮುಂಗಡ ಬುಕ್ಕಿಂಗ್ನಲ್ಲೇ ಸುಮಾರು ಐದು ಕೋಟಿ ರೂ.ಗಳಷ್ಟು ಕಲೆಕ್ಷನ್ ಮಾಡಿತ್ತು. ಸುಮಾರು 300ಕ್ಕೂ ಅಧಿಕ ಥಿಯೇಟರ್ಗಳಲ್ಲಿ ರಿಲೀಸ್ ಆಗಿದ್ದು, ಮೂರು ದಿನಗಳಲ್ಲಿ 6.4 ಕೋಟಿ ರೂ.ಗಳಷ್ಟು ಬಾಚಿಕೊಂಡಿದೆ. ಭಾನುವಾರ ಭಾರತ-ಆಸ್ಟ್ರೇಲಿಯಾ ಟಿ20 ಕ್ರಿಕೆಟ್ ಪಂದ್ಯದ ನಡುವೆಯೂ ಅಭಿಮಾನಿಗಳು ಥಿಯೇಟರ್ಗೆ ಹೋಗಿದ್ದು, ಸಿನಿಮಾದಲ್ಲಿ ಸೂರಿ ಶೈಲಿಯ ಮೇಕಿಂಗ್, ಅಭಿ ರಗಡ್ ಲುಕ್, ಚರಣ್ರಾಜ್ ಸಂಗೀತ, ಶೇಖರ್ ಛಾಯಾಗ್ರಹಣವನ್ನು ಮೆಚ್ಚಿಕೊಂಡಿದ್ದಾರೆ.ಎಂ ಸುಧೀರ್ ನಿರ್ಮಿಸಿ ಜಯಣ್ಣ ವಿತರಿಸಿರುವ ಈ ಚಿತ್ರದಲ್ಲಿ ರಚಿತಾ ರಾಮ್, ಪ್ರಿಯಾಂಕಾ ಕುಮಾರ್ ನಟಿಸಿದ್ದಾರೆ.ಇನ್ನು ಅಭಿಷೇಕ್ ಅಮಬರೀಷ್ ಈಗಾಗಲೆ ಸಿನಿಮಾದ ವಿಜಯಯಾತ್ರೆಯಲ್ಲಿ ಪಾಳ್ಗೊಂಡಿದ್ದು ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.. ಮಂಡ್ಯ ಮದ್ದೂರು ಮೈಸೂರು ತುಮಕೂರಿನಲ್ಲಿ ಅಭಿಷೇಕ್ರನ್ನು ನೋಡಲು ಅಭಿಮಾನಿಗಳು ನೂಕು ನುಗ್ಗಲಿನಿಂದ ಬಂದು ಬ್ಯಾಡ್ ಮ್ಯಾನರ್ಸ್ ಚಿತ್ರಕ್ಕೆ ಜಯಕಾರ ಹಾಕಿದ್ದಾರೆ.

ಇದನ್ನೂ ವೀಕ್ಷಿಸಿ:  Today Horoscope: ಈ ರಾಶಿಯವರಿಗೆ ಇಂದು ಪ್ರೀತಿ ವಿಷಯದಲ್ಲಿ ಮನಸ್ತಾಪ ಬರಲಿದ್ದು, ಪರಿಹಾರಕ್ಕೆ ಹೀಗೆ ಮಾಡಿ..