ವಾಮನ ವರಮಹಾಲಕ್ಷ್ಮೀ ವಿಶೇಷ ಕಾರ್ಯಕ್ರಮ: ಧನ್ವೀರ್‌- ರೀಶ್ಮಾ ನಾಣಯ್ಯ ಜೊತೆ ಸಂದರ್ಶನ

ವಾಮನ ಸಿನಿಮಾದ ನಾಯಕ ಮತ್ತು ನಾಯಕಿ ವರಮಹಾಲಕ್ಷ್ಮೀ ಹಬ್ಬದ ದಿನ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ್ದಾರೆ. ಏನ್‌ ಹೇಳಿದ್ದಾರೆ ನೀವೆ ಕೇಳಿ..
 

Share this Video
  • FB
  • Linkdin
  • Whatsapp

ವಾಮನ ಸಿನಿಮಾ ನಾಯಕ ನಟ ಧನ್ವೀರ್‌(Bazar Dhanveerrah) ಮತ್ತು ರೀಶ್ಮಾ ನಾಣಯ್ಯ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ್ದಾರೆ. ಈ ವೇಳೆ ವಾಮನ(Vamana) ಟೈಟಲ್‌ ಇಟ್ಟಿರುವ ಬಗ್ಗೆ ಮಾತನಾಡಿರುವ ಅವರು, ಕಥೆಗೆ ತಕ್ಕಂತೆ ಹೆಸರನ್ನು ಇಡಲಾಗಿದೆ. ಸಿನಿಮಾದಲ್ಲಿರುವ ಬೆಂಕಿಯನ್ನು ಆರಿಸುವಂತರಾಗಿ ನಟಿ ರೀಶ್ಮಾ ನಾಣಯ್ಯ(Reeshma Nanaiah) ಬರುತ್ತಾರೆ. ಸಿನಿಮಾದಲ್ಲಿ ವಾಮನ ಒಳ್ಳೆಯವರಿಗೆ ಒಳ್ಳೆಯವನು, ಕೆಟ್ಟವರಿಗೆ ಕೆಟ್ಟವನಾಗಿರುತ್ತಾನೆ. ವಾಮನ ಧನ್ವೀರ್‌ ಅವರ ಮೂರನೇ ಸಿನಿಮಾವಾಗಿದೆ. ಧನ್ವೀರ್‌ಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ ಅಭಿನಯಿಸಿದ್ದು, ತಾರಾ, ಸಂಪತ್‌, ಆದಿತ್ಯ ಮೆನನ್‌, ಶಿವರಾಜ್ ಕೆಆರ್ ಪೇಟೆ, ಅವಿನಾಶ್‌, ಅಚ್ಯುತ್‌ ಕುಮಾರ್‌, ಕಾಕ್ರೊಚ್‌ ಸುಧಿ, ಭೂಷಣ್‌ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. 

ಇದನ್ನೂ ವೀಕ್ಷಿಸಿ: ಬಾಹ್ಯ ಸೌಂದರ್ಯದಲ್ಲಿ ಏನಿದೆ ? ಮದುವೆ ಬಗ್ಗೆ 'ಉಪಾಧ್ಯಕ್ಷ' ಸಿನಿಮಾ ನಟ ಹೇಳಿದ್ದೇನು ?

Related Video