ಬಾಹ್ಯ ಸೌಂದರ್ಯದಲ್ಲಿ ಏನಿದೆ ? ಮದುವೆ ಬಗ್ಗೆ 'ಉಪಾಧ್ಯಕ್ಷ' ಸಿನಿಮಾ ನಟ ಹೇಳಿದ್ದೇನು ?
ವರಮಹಾಲಕ್ಷ್ಮೀ ಹಬ್ಬದ ದಿನ ಉಪಾಧ್ಯಕ್ಷ ಸಿನಿಮಾ ನಟ ಚಿಕ್ಕಣ್ಣ ಮತ್ತು ನಟಿ ಮಲೈಕಾ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.
ವರಮಹಾಲಕ್ಷ್ಮೀ ಹಬ್ಬದ ದಿನ ಕಾಮಿಡಿ ಕಿಂಗ್, ನಟ ಚಿಕ್ಕಣ್ಣ ಉಪಾಧ್ಯಕ್ಷ(Upadakshaya) ಸಿನಿಮಾ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಈ ಸಿನಿಮಾದ ಮೂಲಕ ಚಿಕ್ಕಣ್ಣ(Chikkanna) ನಾಯಕ ನಟನಾಗಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಚಿಕ್ಕಣ್ಣ ಹೀರೋ ಆಗಿ ನಟಿಸಿರೋ ಉಪಾಧ್ಯಕ್ಷ ಸಿನಿಮಾ ತೆರೆ ಕಾಣಲು ಸಿದ್ಧವಾಗಿದೆ. ಈ ಸಿನಿಮಾ ಬಗ್ಗೆ ಮಾತನಾಡಿದ ನಟ ಚಿಕ್ಕಣ್ಣ, ನಾವು ಯಾವುದೇ ತಯಾರಿ ಮಾಡಿಲ್ಲ. ಈ ಸಿನಿಮಾಗೆ ಸ್ವಲ್ಪ ಹೇರ್ ಸ್ಟೈಲ್ ಚೇಂಜ್ ಮಾಡಲಾಗಿದೆ. ಅಲ್ಲದೇ ಡ್ಯಾನ್ಸ್‌ಗೆ ಸುಮಾರು ಒಂದೂವರೆ ತಿಂಗಳು ಅಭ್ಯಾಸವನ್ನು ಚಿಕ್ಕಣ್ಣ ಮಾಡಿದ್ದಾರಂತೆ. ಉಪಾಧ್ಯಕ್ಷ’ ಸಿನಿಮಾದಲ್ಲಿ ‘ಉಪಾಧ್ಯಕ್ಷ’ನ ಮದುವೆಯಾಗುತ್ತದೆ. ಆ ಬಳಿಕ ಆತನ ಜೀವನದಲ್ಲಿ ಏನಾಗುತ್ತದೆ ಎನ್ನುವುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆಯಂತೆ.
ಇದನ್ನೂ ವೀಕ್ಷಿಸಿ: ಟೋಬಿ ರಾಜ್ ಬಿ ಶೆಟ್ಟಿ ಕೆರಿಯರ್ ವಿಭಿನ್ನ ಸಿನಿಮಾ: ಮುಗ್ದತೆ.. ರೌದ್ರತೆಯ ನಡುವಿನ ಭಯಾನಕ ಕಥೆ