
'ಅಂಪರಂಜಿ' ಮಹಾಲಕ್ಷ್ಮೀ ಫಸ್ಟ್ ಕನ್ನಡ ಸಿನಿಮಾ: 'ದುರ್ಗಾಷ್ಠಮಿ' ನಂತರ ನಟಿ ಕಣ್ಮರೆಯಾಗಿದ್ದು ಯಾಕೆ ?
ನಟಿ ಮಹಾಲಕ್ಷ್ಮೀ ಸಿನಿಮಾ ಲೈಫ್‌ನಿಂದ ಬ್ರೇಕ್ ತೆಗೆದುಕೊಂಡಿದ್ದೇಕೆ..? ಸುವರ್ಣ ನ್ಯೂಸ್ ಸ್ಪೆಷಲ್ ಸಂದರ್ಶದಲ್ಲಿ ಅವರು ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ.
30 ವರ್ಷಗಳ ನಂತರ ಸಿನಿ ದುನಿಯಾಗೆ ನಟಿ ಮಹಾಲಕ್ಷ್ಮೀ ಎಂಟ್ರಿಕೊಟ್ಟಿದ್ದಾರೆ. ಇವರು 90ರ ದಶಕದ ಸುಂದರಿ. ಮಹಾಲಕ್ಷ್ಮೀ(Mahalakshmi) ಅವರು ಡಾ. ರಾಜ್‌ಕುಮಾರ್ ಅವರೊಂದಿಗೆ ಯಾಕೆ ಸಿನಿಮಾ (Cinema) ಮಾಡ್ಲಿಲ್ಲ ಅನ್ನೋದನ್ನೂ ಇಲ್ಲಿ ಹೇಳಿದ್ದಾರೆ. ಒಂದ್ಕಾಲದಲ್ಲಿ ಕನ್ನಡ ಚಿತ್ರರಂಗವನ್ನೇ ಆಳಿದ ಟಾಪ್ ನಟಿ ಮಹಾಲಕ್ಷ್ಮೀ ಆಗಿದ್ದಾರೆ. ಕಣ್ಣಲ್ಲೇ ಸೆಳೆಯೋ ಸುಂದರಿ ನಟಿ ಮಹಾಲಕ್ಷ್ಮೀ. ಡಾ. ರಾಜ್ ಕುಮಾರ್(Raj Kumar) ಅವರೊಂದಿಗೆ ಒಂದೇ ಹಾಡಲ್ಲಿ ಬಂದು ಹೋಗಿದ್ರು. ಇವರು ನಟಿಸಿದ್ದ ಇವಳೆಂಥಾ ಹೆಂಡ್ತಿ, ಬಾರೆ ನನ್ನ ಮುದ್ದಿನ ರಾಣಿ ಸಿನಿಮಾಗಳು ಫುಲ್ ಫೇಮಸ್ ಆಗಿವೆ. ಇದೀಗ ಹಿರಿಯ ನಟಿ ಮಹಾಲಕ್ಷ್ಮೀ ಕನ್ನಡ ಕಿರುತೆರೆಗೆ ಎಂಟ್ರಿ ಕೊಡಲಿದ್ದಾರಂತೆ. ಹಾಗಂತ ಕಿರುತೆರೆ ತುಂಬೆಲ್ಲಾ ಸುದ್ದಿ ಹಬ್ಬಿದೆ. ಮೊದಲ ಬಾರಿಗೆ ಕನ್ನಡ ಧಾರಾವಾಹಿಯಲ್ಲಿ ನಟಿಸಲು ಮಹಾಲಕ್ಷ್ಮೀ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ವೀಕ್ಷಿಸಿ: ನಿಖಿಲ್ ಕುಮಾರಸ್ವಾಮಿ ಪುತ್ರ ಮುಂದೇನಾಗ್ತಾರಂತೆ ಗೊತ್ತಾ? ನಟನಾ ಅಥವಾ ರಾಜಕಾರಣಿನಾ ?