22 ವರ್ಷಗಳ ಬಳಿಕ ಮತ್ತೆ ಬಂತು ಕಲಾಸಿಪಾಳ್ಯ; ಸಿನಿಮಾ ಮೂಲಕ ಫ್ಯಾನ್ಸ್‌ಗೆ 'ಕೆಂಚ'ನ 'ದರ್ಶನ'

ಕಲಾಸಿಪಾಳ್ಯ.. ಬೆಂಗಳೂರಿನ ಬ್ಯುಸಿಯೆಸ್ಟ್ ಏರಿಯಾಗಳಲ್ಲೊಂದು.. ರೌಡಿಸಂಗೆ ಈ ಏರಿಕಾ ಕೂಡ ಒಂದು ಮೈದಾನವೇ.. ಆದ್ರೆ ಈ ಕಲಾಸಿಪಾಳ್ಯಕ್ಕೆ ನೇಮು ಫೇಮು ಬಂದಿದ್ದು ನಟ ದರ್ಶನ್ ಅದೇ ‘ಕಲಾಸಿಪಾಳ್ಯ’ ಹೆಸರಿನಲ್ಲಿ ಸಿನಿಮಾ ಮಾಡಿದ್ಮೇಲೆ..

Share this Video
  • FB
  • Linkdin
  • Whatsapp

ನಟ ದರ್ಶನ್ (Darshan Thoogudeepa) ಅವರಿಗೆ ಮೈ ತುಂಬಾ ಸವಾಲುಗಳು ಸುತ್ತಿಕೊಂಡಿವೆ. ಜೈಲಿನಿಂದ ಹೊರ ಬರೋ ಚಾಲೆಂಜ್ ಒಂದಾದ್ರೆ, 'ಬಾಸ್'​​ ಅನ್ನೋ ಸಿನಿಮಾದಿಂದ ತನ್ನ ಬಂಡವಾಳ ಎಲ್ಲಿ ಬಯಲಾಗುತ್ತೋ ಅನ್ನೋ ತಲೆ ಬೇನೆ ಮತ್ತೊಂದು ಕಡೆ. ಈ ಎರಡು ವಿಷಯದಲ್ಲಿ ದಾಸ ಕಾನೂನು ಸಮರ ಸಾರುತ್ತಿದ್ರೆ, ಫ್ಯಾನ್ಸ್​ ಮಾತ್ರ 'ಕಲಾಸಿಪಾಳ್ಯ'ವನ್ನ ಮತ್ತೆ ಒಂದು ರೌಂಡ್ ಹಾಕಿಬರೋಣ ಅಂತ ಹೊರಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದಾಸನ ಮಾಸ್‌ ಕ್ಲಾಸಿಕ್‌ ʻಕಲಾಸಿಪಾಳ್ಯʼ ರೀ-ರಿಲೀಸ್‌..!
ಕಲಾಸಿಪಾಳ್ಯ.. ಬೆಂಗಳೂರಿನ ಬ್ಯುಸಿಯೆಸ್ಟ್ ಏರಿಯಾಗಳಲ್ಲೊಂದು.. ರೌಡಿಸಂಗೆ ಈ ಏರಿಕಾ ಕೂಡ ಒಂದು ಮೈದಾನವೇ.. ಆದ್ರೆ ಈ ಕಲಾಸಿಪಾಳ್ಯಕ್ಕೆ ನೇಮು ಫೇಮು ಬಂದಿದ್ದು ನಟ ದರ್ಶನ್ ಅದೇ ಕಲಾಸಿಪಾಳ್ಯ ಹೆಸರಿನಲ್ಲಿ ಸಿನಿಮಾ ಮಾಡಿದ್ಮೇಲೆ..

ದರ್ಶನ್ ವೃತ್ತಿ ಬದುಕಿಗೆ ತಿರುವು ಕೊಟ್ಟಿದ್ದ ಸಿನಿಮಾ ಕಲಾಸಿಪಾಳ್ಯ!

ಕಲಾಸಿಪಾಳ್ಯ.. ಇದು ನಟ ದರ್ಶನ್ ವೃತ್ತಿ ಬದುಕಿನಲ್ಲಿ ತುಂಬಾನೇ ವಿಶೇಷವಾದ ಸಿನಿಮಾ. ಯಾಕಂದ್ರೆ ದರ್ಶನ್​ಅವರದ್ದು ಕಲಾಸಿಪಾಳ್ಯ ಬರೋ ಮೊದಲು ಒಂದು ಲೆಕ್ಕ ಆದ್ರೆ, ಕಲಾಸಿಪಾಳ್ಯ ಬಂದ ಮೇಲೆ ಮತ್ತೊಂದು ಲೆಕ್ಕ ಆಗಿತ್ತು. ದಾಸನ ವೃತ್ತಿ ಜೀವನದಲ್ಲಿ ದೊಡ್ಡ ಹಿಟ್ ಮತ್ತು ಬ್ರೇಕ್ ಕೊಟ್ಟಿದ್ದು ಕಲಾಸಿಪಾಳ್ಯ..

ಕಲಾಸಿಪಾಳ್ಯ ಸಿನಿಮಾ ಬಂದ ಮೇಲೆ ನಟ ದರ್ಶನ್ ಮತ್ತೆ ಸೋಲು ಅನ್ನೋ ಪದದ ಹತ್ತಿರವೂ ಸುಳಿಯಲಿಲ್ಲ. ಅಯ್ಯ, ಶಾಸ್ತ್ರಿ, ಸ್ವಾಮಿ, ಮಂಡ್ಯ, ಸುಂಟರಗಾಳಿ ಹೀಗೆ ಸಕ್ಸಸ್​ ಫುಲ್ ಸಿನಿಮಾಗಳನ್ನ ಕೊಡುತ್ತಾ ಸ್ಟಾರ್ ಆದ್ರು. ಅಂದಿನಿಂದ ಇಂದಿನವರೆಗೆ ನಟ ದರ್ಶನ್ ಬೆಳೆದುಬಂದ ದಾರಿ, ಈಗಿನ ಸ್ಥಿತಿಗತಿ ಬಗ್ಗೆ ಇಲ್ಲಿದೆ ಕೆಲವು ಇಂಟರೆಸ್ಟಿಂಗ್ ಮಾಹಿತಿ.. 
ಹೆಚ್ಚಿನ ಮಾಹಿತಿಗೆ 'ಸಿನಿಮಾ ಹಂಗಾಮ' ನೋಡಿ..

Related Video