ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?

ಸೆಲೆಬ್ರಿಟಿಗಳು ಮಾಡೋ ಕೆಲಸಗಳು ಅವೇರ್‌ನೆಸ್ ಮೂಡಿಸುತ್ತವೆ. ಅಂತರಾಷ್ಟ್ರೀಯ ಯೋಗ ದಿನದಂದು ಪರಪ್ಪನ ಅಗ್ರಹಾರ ಜೈಲಿನಿಂದಲೇ ದಾಸ ತನ್ನ ಕೈಲಾದ ಯೋಗ ಆಸನಗಳನ್ನ ಮಾಡಿ ಹೊರ ಜಗತ್ತಿಗೆ ಯೋಗ ಸಂದೇಶ ಕಳುಹಿಸಿದ್ದಾರೆ.

Share this Video
  • FB
  • Linkdin
  • Whatsapp

ಸವಾಲು ಎದುರಿಸೋದು ನಟ ದರ್ಶನ್ (Darshan Thoogudeepa) ಅವರಿಗೆ ಹಳೇ ಅಭ್ಯಾಸ. ಅದು ಸಿನಿಮಾರಂಗ ಆಗಿರಲಿ, ವೈಯಕ್ತಿಕ ಬದುಕೇ ಇರಲಿ, ಬಂಡೆಯಂತಹ ಸವಾಲುಗಳನ್ನ ದಾಸ ಕುಟ್ಟಿ ಪುಡಿ ಮಾಡಿದ್ದಾರೆ. ಈಗ ಪರಪ್ಪನ ಅಗ್ರಹಾರ ಜೈಲಿನಿಂದ ಹೊರ ಬರೋದಕ್ಕೆ ಹೆಣಗಾಡುತ್ತಿರೋ ನಟ ದರ್ಶನ್, ಜೈಲಿನಲ್ಲೇ ಯೋಗದ ಚಾಲೆಂಜ್ ಎದುರಿಸಿದ್ದಾರೆ. ಅದನ್ನ ಅಚ್ಚುಕಟ್ಟಾಗಿ ಒಬ್ಬ ಸ್ಟೂಡೆಂಟ್ ರೀತಿ ನಿಭಾಯಿಸಿದ್ದಾರೆ. ಹಾಗಾದ್ರೆ ದಾಸನ ಯೋಗಾ-ಯೋಗ ಹೇಗಿತ್ತು?

ನಟ ದರ್ಶನ್ ಸೆಲೆಬ್ರಿಟಿ ಆಗಿದ್ದವರು. ಹೀಗಾಗಿ ಈ ಸೆಲೆಬ್ರಿಟಿಗಳು ಮಾಡೋ ಕೆಲಸಗಳು ಅವೇರ್‌ನೆಸ್ ಮೂಡಿಸುತ್ತವೆ. ಅಂತರಾಷ್ಟ್ರೀಯ ಯೋಗ ದಿನದಲ್ಲಿ ಹತ್ತಾರು ಸೆಲೆಬ್ರಿಟಿ ನಟ ನಟಿಯರು ಭಾಗಿ ಆಗಿ ಆ ಯೋಗದ ಮಹತ್ವ ಸಾರಿದ್ದಾರೆ. ನಟ ದರ್ಶನ್ ಜೈಲಿನಿಂದ ಹೊರಗಿದ್ದಿದ್ದರೆ ಯೋಗ ಮಾಡುತ್ತಿದ್ರೋ ಇಲ್ಲವೋ, ಆದ್ರೆ ಪರಪ್ಪನ ಅಗ್ರಹಾರ ಜೈಲಿನಿಂದಲೇ ದಾಸ ತನ್ನ ಕೈಲಾದ ಯೋಗ ಆಸನಗಳನ್ನ ಮಾಡಿ ಹೊರ ಜಗತ್ತಿಗೆ ಯೋಗ ಸಂದೇಶ ಕಳುಹಿಸಿದ್ದಾರೆ.

ಹೇಗಿತ್ತು ನಟ ದರ್ಶನ್ ಯೋಗ ದಿನಾಚರಣೆ? ಏನೆಲ್ಲಾ ಮಾಡಿದ್ರು? ಪವಿತ್ರಾ ಗೌಡ ಅಂದು ಮಾಡಿದ್ದೇನು? ಎಲ್ಲಾ ಮಾಹಿತಿಗೆ 'ಸಿನಿಮಾ ಹಂಗಾಮ' ವಿಡಿಯೋ ನೋಡಿ..

Related Video