Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?

Karnataka Congress: ಕೆಪಿಸಿಸಿ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್ ನೇಮಕವಾಗಿದ್ದು, ರಾಜ್ಯ ಕಾಂಗ್ರೆಸ್‌ನಲ್ಲಿ ಹೊಸ ರಾಜಕೀಯ ಸಮೀಕರಣಗಳಿಗೆ ವೇದಿಕೆ ಸಿದ್ಧವಾಗಿದೆ. 2028ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್..

Share this Video
  • FB
  • Linkdin
  • Whatsapp

ಕೈ ಪಡೆಗೆ ನೂತನ ಸಾರಥಿ.. ರಾಜ್ಯ ಕಾಂಗ್ರೆಸ್​ನಲ್ಲಿ ಹೊಸ ಅಧ್ಯಾಯ..!,, ದಿಲ್ಲಿ ಮಟ್ಟದ ನಾಯಕನಿಗೆ ಗಲ್ಲಿ ರಾಜಕಾರಣದ ಜವಾಬ್ದಾರಿ ಸಿಕ್ಕಿದ್ದೇಗೆ..?,, ಸೇವಾದಳ to ಸಂಸತ್.. ಅಧ್ಯಕ್ಷರ​ ಮುಂದೆ ಸಾವಿರ ಸವಾಲು!,, 2028ರ ಕುರುಕ್ಷೇತ್ರಕ್ಕೆ ಮುನ್ನುಡಿ.. ಡಿಕೆ-ಬಿಕೆ ಬ್ರಹ್ಮಾಸ್ತ್ರ..! ಇದೇ ಇವತ್ತಿನ ಸುವರ್ಣ ಸ್ಪೆಷಲ್.. ಹರಿಪ್ರಸಾದ್ ‘ಹಸ್ತ’ಸಾರಥ್ಯ. ಇದುವರೆಗೆ ದಿಲ್ಲಿಯ ಎಐಸಿಸಿ ಕಚೇರಿಯಲ್ಲಿ ಕುಳಿತು ದೇಶದ ವಿವಿಧ ರಾಜ್ಯಗಳ ಚುನಾವಣಾ ತಂತ್ರ ಹೆಣೆಯುತ್ತಿದ್ದ ಆ ರಾಜಕೀಯ ಚತುರ, ಈಗ ನೇರವಾಗಿ ಕರ್ನಾಟಕದ ಅಖಾಡಕ್ಕೆ ಧುಮುಕಿದ್ದಾರೆ.

ಮಾಜಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಂದ ಕೆಪಿಸಿಸಿ ಅಧ್ಯಕ್ಷಗಿರಿ ಚುಕ್ಕಾಣಿ ಹಿಡಿದಿರುವ ಹರಿಪ್ರಸಾದ್ ನಡೆ ಹೇಗಿರಲಿದೆ? ಈ "ದಿಲ್ಲಿ ಲೀಡರ್"ಗೆ ಕರ್ನಾಟಕದ "ಗಲ್ಲಿ ಪಾಲಿಟಿಕ್ಸ್" ತಲೆನೋವಾಗುತ್ತಾ ಅಥವಾ ವಿಪಕ್ಷಗಳ ತಂತ್ರಕ್ಕೆ ಇವರೇ ಕೌಂಟರ್ ಕೊಡ್ತಾರಾ..? ಹರಿಪ್ರಸಾದ್ ಹಸ್ತಸಾರಥ್ಯ ರಾಜ್ಯ ರಾಜಕಾರಣದಲ್ಲಿ ಏನೆಲ್ಲಾ ಬದಲಾವಣೆ ತರಬಹುದು..? ಅಸಲಿಗೆ 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೇ ಮಂತ್ರಿಮಂಡಳದಲ್ಲಿ ಬಿ.ಕೆ ಹರಿಪ್ರಸಾದ್​ಗೆ ಸ್ಥಾನ ಸಿಗಬೇಕಿತ್ತು. ಆದ್ರೆ ಸಿದ್ದರಾಮಯ್ಯ ಮಂತ್ರಿ ಮಂಡಳದಲ್ಲಿ ಬಿ.ಕೆಗೆ ಸ್ಥಾನ ಸಿಗಲಿಲ್ಲ.

ಈಗ ಡಿ.ಕೆ.ಶಿ ಸಿಎಂ ಆಗಿ ಹೊಸ ಮಂತ್ರಿಮಂಡಳ ಅಸ್ಥಿತ್ವಕ್ಕೆ ಬರುವ ಹೊತ್ತಲ್ಲಾದ್ರೂ ಹರಿಪ್ರಸಾದ್​ ಸ್ಥಾನ ಸಿಗುತ್ತೆ ಅನ್ನೋ ನಿರೀಕ್ಷೆಯಲ್ಲಿದ್ರು. ಆದ್ರೆ ಒಕ್ಷದ ಶಿಸ್ತಿನ ಸೇನಾನಿಗೆ ಸಿಕ್ಕಿದ್ದು ಕೆಪಿಸಿಸಿ ದಳಪತಿ ಪಟ್ಟ. ಟಾರ್ಗೆಟ್ 2028 ಕ್ಕೆ ಕೈ ಪಾಳಯದಲ್ಲಿ ಭರ್ಜರಿ ಲೀಡರ್‌ಶಿಪ್ ಬದಲಾವಣೆ ಗಾಳಿ ಬೀಸುತ್ತಿದೆ. ಕೆಪಿಸಿಸಿ ಗದ್ದುಗೆಗೆ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಎಂಟ್ರಿ ಕೊಟ್ಟಾಗಿದೆ. ಆದರೆ, ರಾಜ್ಯ ರಾಜಕೀಯದ ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆ ಅಂದ್ರೆ... ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?

Related Video