ನಿಖಿಲ್ ಕುಮಾರಸ್ವಾಮಿ ಪುತ್ರ ಮುಂದೇನಾಗ್ತಾರಂತೆ ಗೊತ್ತಾ? ನಟನಾ ಅಥವಾ ರಾಜಕಾರಣಿನಾ ?

ನಿಖಿಲ್‌ ಕುಮಾರಸ್ವಾಮಿ ಪುತ್ರ  ಅವ್ಯಾನ್‌ಗೆ ಶ್ರೀಕೃಷ್ಣ ಜನ್ಮಷ್ಟಾಮಿ ದಿನ ಕೃಷ್ಣನ ಉಡುಗೆ ಹಾಕಿ, ಫೋಟೋ ತೆಗೆಯಲಾಗಿದೆ.
 

Share this Video
  • FB
  • Linkdin
  • Whatsapp

ನಿಖಿಲ್‌ ಕುಮಾರಸ್ವಾಮಿ(Nikhil Kumaraswamy) ತಮ್ಮ ಪುತ್ರನಿಗೆ ಕೃಷ್ಣನಂತೆ ಅಲಂಕಾರ ಮಾಡಿರುವ ಫೋಟೋಸ್‌ (Photos) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇನ್ನೂ ಈ ಫೋಟೋ ನೋಡಿದ ಫ್ಯಾನ್ಸ್‌ ನೀವು ರಾಜಕಾರಣಿ ಆಗುತ್ತಿರೋ ಅಥವಾ ನಟನಾಗ್ತೀರಾ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಇನ್ನೂ ಮೊಮ್ಮಗನನ್ನು ನೋಡಿದ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಮಗ ನೀನು ಕೂಡ ಹೀರೋನೇ ಆಗೋದು ಎಂದು ಹೇಳಿದ್ದಾರೆ. ಇನ್ನೂ ಕೆಲವು ಅಭಿಮಾನಿಗಳು ನೀವು ಸಿನಿಮಾ ಮಾಡಿ, ಹೀರೋನೆ ಆಗಿ ಎಂದಿದ್ದಾರಂತೆ. ಇನ್ನೂ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರೋ ಕುಮಾರಸ್ವಾಮಿ ಅವರು ಮೊಮ್ಮಗನಿಗೆ ಕೃಷ್ಣನ(Krishna) ವೇಷ ಧರಿಸಿ ಖುಷಿ ಪಟ್ಟು ಸಂಭ್ರಮಿಸಿದ್ದಾರೆ. ಹೊಸ ಸಿನಿಮಾದಲ್ಲಿ ನಿಖಿಲ್ ಬ್ಯುಸಿಯಾಗಿದ್ದರೂ ಸಮಯ ಮಾಡಿಕೊಂಡು ಈ ನಡುವೆಯೂ ತಪ್ಪದೇ ಮನೆಯ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಶಾರುಖ್ ಖಾನ್ ಕೈ ಹಿಡಿದ ದಕ್ಷಿಣದ ಸ್ಟಾರ್ಸ್..! ಸೌತ್‌ನಲ್ಲಿ ಕಿಂಗ್ ಖಾನ್ ಮಿಂಚಲು ಕಾರಣ ಇವ್ರೇ..!

Related Video