
ರಾಜಕೀಯವಾಗಿ ರಿಟೈರ್ಡ್ ಆದ್ರೂ ಶ್ರೀನಿವಾಸ್ ಪ್ರಸಾದ್‌ಗೇಕೆ ಡಿಮ್ಯಾಂಡ್!? ಈ ಇಬ್ಬರು ನಾಯಕರ ಮುನಿಸಿಗೆ ಕಾರಣವೇನು..?
8 ವರ್ಷಗಳ ಕುಸ್ತಿ.. ದಶಕಗಳ ದೋಸ್ತಿ..ಪ್ರಸಾದ್ ಈಗ ಯಾರ ಆಸ್ತಿ?
ಹಳೆ ಮೈಸೂರು ಗೆಲ್ಲಲು ದೋಸ್ತಿ ಅಸ್ತ್ರ ಪ್ರಯೋಗಿಸಿದ ಸಿದ್ದರಾಮಯ್ಯ
ಮೋದಿ ಸಮಾವೇಶಕ್ಕೂ ಮುನ್ನ ಬಿಗ್ ಟ್ವಿಸ್ಟ್ ಕೊಟ್ಟ ಸಿದ್ದರಾಮಯ್ಯ
8 ವರ್ಷಗಳ ಜಗಳ ಮರೆತು ಸಿಎಂ ಸಿದ್ದರಾಮಯ್ಯ(Siddaramaiah) ಮತ್ತು ಶ್ರೀನಿವಾಸ್ ಪ್ರಸಾದ್(Srinivas Prasad) ಒಂದಾಗಿದ್ದಾರೆ. ರಾಜಕೀಯವಾಗಿ ನಿವೃತ್ತಿ ಆದ್ರೂ ಶ್ರೀನಿವಾಸ್ ಪ್ರಸಾದ್‌ಗೆ ಇನ್ನೂ ಡಿಮ್ಯಾಂಡ್ ಮಾತ್ರ ಕಡಿಮೆ ಆಗಿಲ್ಲ. ಶ್ರೀನಿವಾಸ್ ಪ್ರಸಾದ್ 6 ಬಾರಿ ಸಂಸದರಾಗಿದ್ದವರು. ಹಳೆ ಮೈಸೂರು(Old Mysore) ಭಾಗದಲ್ಲಿ ದಲಿತ ಮತಗಳ ಮೇಲೆ ಸಂಸದ ಶ್ರೀನಿವಾಸ್ ಪ್ರಸಾದ್ ಹಿಡಿತ ಇಟ್ಟುಕೊಂಡಿದ್ದಾರೆ. ಇಂಥ ಪವರ್‌ಫುಲ್ ನಾಯಕನ ಬೆಂಬಲಕ್ಕೆ ಎಲ್ಲಾ ಪಕ್ಷಗಳು ಕಾಯ್ತಿವೆ. ಹಳೆ ಮೈಸೂರು ಭಾಗದಲ್ಲಿರೋ ಪವರ್‌ಫುಲ್ ಸಂಸದರು ಬಿಜೆಪಿಯಿಂದ(BJP) ಸದ್ಯ ದೂರವಾಗುತ್ತಿದ್ದಾರೆ ಎಂದೇ ಹೇಳಬಹುದು. ಅಲ್ಲದೇ ಅವರನ್ನು ಮೋದಿ(Narendra Modi) ಸಮಾವೇಶಕ್ಕೂ ಆಹ್ವಾನ ಮಾಡಿಲ್ಲ. ಬಿಜೆಪಿಯೇ ಚಾಮರಾಜನಗರ ಸಂಸದರನ್ನ ದೂರ ಮಾಡಿತಾ ಅನ್ನೋ ಪ್ರಶ್ನೆಗಳು ಮೂಡುತ್ತಿವೆ.
Add Asianetnews Kannada as a Preferred Source

ಇದನ್ನೂ ವೀಕ್ಷಿಸಿ: MB Patil on Kumaraswamy : ಕುಮಾರಸ್ವಾಮಿ ಬಿಜೆಪಿಗೆ ಹೋಗಿ ದಾರಿ ತಪ್ಪಿದ್ದಾರೆ: ಸಚಿವ ಎ.ಬಿ.ಪಾಟೀಲ್