ರಾಕಿ ಸಾಮ್ರಾಜ್ಯಕ್ಕೆ 'ಲೇಡಿ ಬಾಸ್': ನಿರ್ದೇಶಕಿಗೆ ಬಿಗ್ ಬಜೆಟ್ ಟಾಕ್ಸಿಕ್ ಸಿನಿಮಾದ ಬರ್ತ್‌ಡೇ ಗಿಫ್ಟ್!

ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಮೂವಿ ರಿಲೀಸ್ ಯಾವಾಗ..? ಆ ಪ್ರಶ್ನೆಯನ್ನ ಈಗಲೇ ಕೇಳೋದಕ್ಕೆ ಹೋಗಬೇಡಿ. ಸದ್ಯಕ್ಕೆ ಒಂದು ಸಣ್ಣ ಝಲಕ್ ತೋರಿಸ್ತಿನಿ ನೋಡಿ ಅಂದಿದೆ ಟಾಕ್ಸಿಕ್ ಟೀಂ. ಏನದು ಝಲಕ್..?

Share this Video
  • FB
  • Linkdin
  • Whatsapp

ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಮೂವಿ ರಿಲೀಸ್ ಯಾವಾಗ..? ಆ ಪ್ರಶ್ನೆಯನ್ನ ಈಗಲೇ ಕೇಳೋದಕ್ಕೆ ಹೋಗಬೇಡಿ. ಸದ್ಯಕ್ಕೆ ಒಂದು ಸಣ್ಣ ಝಲಕ್ ತೋರಿಸ್ತಿನಿ ನೋಡಿ ಅಂದಿದೆ ಟಾಕ್ಸಿಕ್ ಟೀಂ. ಏನದು ಝಲಕ್..? ವಾಚ್ ದಿಸ್ ಸ್ಟೋರಿ. ಟಾಕ್ಸಿಕ್ ಸಿನಿಮಾ ತಂಡ ಫ್ಯಾನ್ಸ್​ಗೆ ಒಂದು ಬಿಗ್ ಅಪ್ಟೇಡ್ ಕೊಟ್ಟಿದೆ. ಚಿತ್ರದ ನಿರ್ದೇಶಕಿ ಗೀತು ಮೋಹನ್‌ದಾಸ್ ಹುಟ್ಟುಹಬ್ಬದ ಪ್ರಯುಕ್ತ, ಚಿತ್ರದ ಬಿಟಿಎಸ್ ಅಂದ್ರೆ 'ಬಿಹೈಂಡ್ ದಿ ಸೀನ್ಸ್' ವಿಡಿಯೋವನ್ನ ರಿಲೀಸ್ ಮಾಡಲಾಗಿದೆ. ಈ ಒಂದು ನಿಮಿಷದ ಈ ವಿಡಿಯೋದಲ್ಲಿ ಟಾಕ್ಸಿಕ್ ಪ್ರಪಂಚ ಎಷ್ಟು ಬೃಹತ್ ಆಗಿದೆ ಅನ್ನೋದರ ಸುಳಿವು ಸಿಕ್ಕಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅದ್ದೂರಿ ಸೆಟ್, ಭಾರಿ ಆಕ್ಷನ್ ದೃಶ್ಯಗಳ ನಡುವೆ ನ್ಯಾಷನಲ್ ಅವಾರ್ಡ್ ವಿನ್ನರ್ ಗೀತು ಮೋಹನ್‌ದಾಸ್ ಇಡೀ ತಂಡವನ್ನು ಮುನ್ನಡೆಸುತ್ತಿರುವ ರೀತಿ ನಿಜಕ್ಕೂ 'ಲೇಡಿ ಪವರ್' ಏನು ಅನ್ನೋದನ್ನ ತೋರಿಸ್ತಾ ಇದೆ. ಪ್ರತಿಯೊಂದು ದೃಶ್ಯವನ್ನ ಅತ್ಯಂತ ಸೂಕ್ಷ್ಮವಾಗಿ, ಪರ್ಫೆಕ್ಟ್ ಆಗಿ ಸೂಪರ್‌ವೈಸ್ ಮಾಡುತ್ತಿರುವ ಈ ನಿರ್ದೇಶಕಿಯ ವಿಷನ್ ವಿಡಿಯೋದಲ್ಲಿ ಎದ್ದು ಕಾಣ್ತಿದೆ. ಬಿಟಿಎಸ್ ವಿಡಿಯೋದಲ್ಲಿ ಗಮನಿಸಬೇಕಾದ ಮತ್ತೊಂದು ವಿಚಾರ ಅಂದ್ರೆ ಮೇಕಿಂಗ್ ಕ್ವಾಲಿಟಿ. ಹಾಲಿವುಡ್ ರೇಂಜ್‌ನಲ್ಲಿ ಸೆಟ್ ಹಾಕಲಾಗಿದೆ. ಪ್ರತಿಯೊಂದು ಫ್ರೇಮ್ ಕೂಡ ಕತ್ತಲೆಯಲ್ಲಿ, ಒಂದು ರಸ್ಟಿಕ್ ಫೀಲ್ ಕೊಡ್ತಾ ಇದೆ.

ಹೌದು ಸದ್ಯ ಚಿತ್ರದ ಬಿಜಿನೆಸ್ ವಿಚಾರಕ್ಕೆ ಮತ್ತೆ ಅಮೆರಿಕಕ್ಕೆ ಹೋಗಿರೋ ಯಶ್, ಬಹುತೇಕ ಟಾಕ್ಸಿಕ್​ನ ಡಿಸೆಂಬರ್​ಗೆ ರಿಲೀಸ್ ಮಾಡೋ ಪ್ಲಾನ್ ನಲ್ಲಿದ್ದಾರೆ. ನಿಮಗೆ ಗೊತ್ತಿರೋ ಹಾಗೆ ಕೆಜಿಎಫ್ ಸೇರಿದಂತೆ ಯಶ್​ಗೆ ದೊಡ್ಡ ಗೆಲುವು ಕೊಟ್ಟ ಚಿತ್ರಗಳೆಲ್ಲಾ ಬಂದಿದ್ದು ಡಿಸೆಂಬರ್​ನಲ್ಲೇ. ಸೋ ಡಿಸೆಂಬರ್​ಗೆ ಸಿನಿಮಾ ರಿಲೀಸ್ ಪ್ಲಾನ್ ಮಾಡ್ತಾ ಇರೋ, ಯಶ್ ಗ್ಲೋಬಲ್ ಬಿಜಿನೆಸ್​​ನತ್ತ ಗಮನ ಇಟ್ಟಿದ್ದಾರೆ. ಅಷ್ಟೋತ್ತಿಗೆ ರಾಮಾಯಣ ಕೂಡ ಬಂದಿರುತ್ತೆ. ದೀಪಾವಳಿ ರಾವಣನಾಗಿ ಅಬ್ಬರಿಸಿ ವರ್ಷಾಂತ್ಯಕ್ಕೆ ರಾಯನಾಗಿ ಅವತರಿಸೋ ಪ್ಲಾನ್​ನಲ್ಲಿದ್ದಾರೆ ಯಶ್..!

Related Video