MB Patil on Kumaraswamy : ಕುಮಾರಸ್ವಾಮಿ ಬಿಜೆಪಿಗೆ ಹೋಗಿ ದಾರಿ ತಪ್ಪಿದ್ದಾರೆ: ಸಚಿವ ಎ.ಬಿ.ಪಾಟೀಲ್‌

ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ದಾರಿ ತಪ್ಪಿದ್ದಾರೆ ಎಂಬ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ ಸಚಿವ ಎಂ.ಬಿ.ಪಾಟೀಲ್‌ ತಿರುಗೇಟು ನೀಡಿದ್ದಾರೆ.

Share this Video

ವಿಜಯಪುರ: ಗ್ಯಾರಂಟಿ ಯೋಜನೆಗಳಿಂದ ಹಳ್ಳಿ ಮಹಿಳೆಯರು ದಾರಿ ತಪ್ಪಿದ್ದಾರೆ ಎಂಬ ಹೆಚ್‌.ಡಿ.ಕುಮಾರಸ್ವಾಮಿ(HD Kumaraswamy) ಹೇಳಿಕೆಗೆ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್(MB Patil) ಟಾಂಗ್‌ ಕೊಟ್ಟಿದ್ದಾರೆ. ಕುಮಾರಸ್ವಾಮಿ ಬಿಜೆಪಿಗೆ(BJP) ಹೋಗಿ ದಾರಿ ತಪ್ಪಿದ್ದಾರೆ. ದಾರಿ ತಪ್ಪಿದ್ದಾರೆ ಎಂದರೆ ಏನು ಎಂದು ಅವರನ್ನೇ ಕೇಳಿ. ಕುಮಾರಸ್ವಾಮಿ(HD Kumaraswamy) ಅದನ್ನೂ ಸ್ಪಷ್ಟಪಡಿಸಲಿ. ಗ್ಯಾರಂಟಿ ಯೋಜನೆಗಳ( Guarantee Scheme) ಹಣದಿಂದ ಮಕ್ಕಳನ್ನು ಶಾಲೆಗೆ ಕಳುಹಿಸೋದು ದಾರಿ ತಪ್ಪಿದಂಗಾ? ಅನ್ನಭಾಗ್ಯದಿಂದ ಹಸಿದ ಹೊಟ್ಟೆ ಊಟ ಮಾಡಿದ್ದು ದಾರಿ ತಪ್ಪಿದಂಗಾ? ಒಳ್ಳೆಯ ಬಟ್ಟೆ ಹಾಕಿಕೊಂಡಿದ್ದು ದಾರಿ ತಪ್ಪಿದಂಗಾ ? ಗ್ಯಾಸ್ ಸಿಲೆಂಡರ್ ಹಾಗೂ ಇತರೆ ವಸ್ತುಗಳ ಬೆಲೆ ಏರಿಕೆ ಮಧ್ಯೆ ಸಮಾಧಾನ ಪಟ್ಟು ಮನೆ ನಡೆಸಿದ್ದು ದಾರಿ ತಪ್ಪಿದಂಗಾ? ದಾರಿ ತಪ್ಪಿದ್ದು ಏನು ಎಂಬುದನ್ನು ಕೇಳಿ ಎಂದು ಸಚಿವ ಎಂ.ಬಿ.ಪಾಟೀಲ್‌ ಕೇಳಿದ್ದಾರೆ. ಕುಮಾರಸ್ವಾಮಿ ಬಿಜೆಪಿಗೆ ಹೋಗಿ ದಾರಿ ತಪ್ಪಿದ್ದಾರೆ. ದಾರಿ ತಪ್ಪಿದ ಮೇಲೆ ದಾರಿ ತಪ್ಪಿದ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ವಿಜಯಪುರ ನಗರದಲ್ಲಿ ಎಂ .ಬಿ. ಪಾಟೀಲ್ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ಲೋಕಸಭಾ ಚುನಾವಣೆ ನಂತರ ಗ್ಯಾರಂಟಿ ಯೋಜನೆಗಳು ಬಂದ್ ಆಗುತ್ತವೆ: ಬಸನಗೌಡ ಪಾಟೀಲ ಯತ್ನಾಳ್‌

Related Video