AIADMK: ಎರಡೆಲೆ ಚಿಹ್ನೆಯ ಹಿಂದಿದೆ ಮೂಕಾಂಬಿಕೆ ಕಥೆ: ಈಗ ವಿಜಯ್ ಕೂಡ ದೇವಿಯ ಮೊರೆ!

ಎಂಜಿಆರ್‌ನಿಂದ ವಿಜಯ್‌ವರೆಗೆ ತಮಿಳುನಾಡು ರಾಜಕೀಯ ಮತ್ತು ಕೊಲ್ಲೂರು ಮೂಕಾಂಬಿಕೆ ಕ್ಷೇತ್ರದ ನಡುವೆ ವಿಶೇಷ ನಂಟಿದೆ ಎನ್ನಲಾಗುತ್ತದೆ. AIADMK ಎರಡೆಲೆ ಚಿಹ್ನೆಯ ಕಥೆಯಿಂದ ಹಿಡಿದು ವಿಜಯ್ ವಿಶೇಷ ಪೂಜೆಯವರೆಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

Share this Video
  • FB
  • Linkdin
  • Whatsapp

ನಿಮಗೊಂದು ಅಚ್ಚರಿಯ ವಿಷ್ಯ ಗೊತ್ತಾ,.? ಎಂ.ಜಿ.ಆರ್ ಮಣಿಪಾಲ್​ದಲ್ಲಿ ಶೂಟಿಂಗ್ ಮಾಡ್ತಾ ಇರ್ತಾರೆ. ತಮಿಳುನಾಡಿನಲ್ಲಿ ಚುನಾವಣೆ ಘೋಷಣೆ ಆಗುತ್ತೆ. ಕೊಲ್ಲೂರಿನಲ್ಲಿ ಪೂಜೆ ಸಲ್ಲಿಸಿ ತಮಿಳುನಾಡಿಗೆ ಹೊರಟು ನಿಲ್ತಾರೆ. ಆಗ ದೇಗುಲದ ಕಳಶದಲ್ಲಿದ್ದ ಎರಡೆಲೆಯನ್ನ ನೋಡಿದವರು, ಅದೇ ಎರಡೆಲೆ ಚಿತ್ರವನ್ನೇ ತಮ್ಮ ಪಕ್ಷದ ಚಿಹ್ನೆ ಮಾಡಿಕೊಳ್ತಾರೆ. ಚಿತ್ರನಟ ಎಂ.ಜಿ.ಆರ್ ಅಂದು AIADMK ಪಾರ್ಟಿ ಕಟ್ಟಿ ಸಿಎಂ ಆಗೋದ್ರ ಹಿಂದೆ ದೇವಿ ಕೃಪೆ ಇದೆ.

ಇಂದಿನ ಸಿಎಂ ವಿಜಯ್​ಗೂ ಆ ರಕ್ಷೆ ಸಿಕ್ಕಿದೆ. ಖುದ್ದು ಡ್ರೈವ್ ಮಾಡಿಕೊಂಡು ಬಂದು, ದೇಗುಲ ವಸ್ತ್ರ ಸಂಹಿತೆ ಪಾಲಿಸಿ ಪೂಜೆ ಸಲ್ಲಿಸಿ ವಿಜಯ್ ಕೂಡ ದೇವಿಗೆ ಶರಣಾಗತ ಆಗಿದ್ದಾರೆ. ಅಸಲಿಗೆ ಸದ್ಯ ವಿಜಯ್ ಗೆದ್ದು ತಮಿಳು ನಾಡು ಸಿಎಂ ಆದ್ರೂ ಅವರ ಪಕ್ಷಕ್ಕೆ ಪೂರ್ಣ ಬಹುಮತ ಇಲ್ಲ. ಅಷ್ಟೇ ಅಲ್ಲ ಚುನಾವಣೆಗೆ ಮುನ್ನ ಜನರಿಗೆ ಕೊಟ್ಟ ಭರವಸೆಗಳನ್ನ ಈಡೇರಿಸುವ ಸವಾಲು ಅವರ ಮುಂದಿದೆ. ಸೋ ಆ ಪಯಣದಲ್ಲೂ ಯಶಸ್ಸು ಕೊಡು ಅಂತ ಮೂಕಾಂಬಿಕೆ ಬಳಿ ಪ್ರಾರ್ಥಿಸಿದ್ದಾರೆ ಭಕ್ತ ದಳಪತಿ..!

Related Video