Dhurandhar​ ಮೇಲಿಲ್ಲದ ಪ್ರೀತಿ ಆಲಿಯಾ ಭಟ್ ಮೇಲೆ ಯಾಕೆ..? ಶಾರುಖ್ ಖಾನ್ ನಡೆಗೆ ನೆಟ್ಟಿಗರು ಕಿಡಿ!

Alia Bhatt ಅಭಿನಯದ 'ಆಲ್ಫಾ' ಸಿನಿಮಾಗೆ ಶುಭ ಕೋರಿದ ಶಾರುಖ್ ಖಾನ್ ವಿರುದ್ಧ ಧುರಂಧರ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧುರಂಧರ್ ಸಿನಿಮಾದ ಬಗ್ಗೆ ಮೌನವಾಗಿದ್ದ ಶಾರುಖ್ ನಡೆ ಈಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.

Share this Video
  • FB
  • Linkdin
  • Whatsapp

ಬಾಲಿವುಡ್‌ನ ಖ್ಯಾತ ನಟ ಶಾರುಖ್ ಖಾನ್ ನಡೆಗೆ ನೆಟ್ಟಿಗರು ಗರಂ ಆಗಿದ್ದಾರೆ. ಶಾರುಖ್ ವಿರುದ್ಧ ದುರಂಧ‌ರ್ ಫ್ಯಾನ್ಸ್ ಫುಲ್ ಕಿಡಿಕಾರ್ತಿದ್ದಾರೆ. ನಿಮ್ಮ ಸಿನಿಮಾ ನೋಡಲು ಎಂದು ಕೆಲವರು ಎಚ್ಚರಿಕೆ ಕೊಟ್ಟಿದ್ದಾರೆ. ಅಷ್ಟಕ್ಕೂ ಆಗಿದ್ದೇನು ಅಂತೀರಾ? ಈ ಸ್ಟೋರಿ ನೋಡಿ. ನಟ ಶಾರುಖ್ ಖಾನ್ ಈಗ ಟ್ರೋಲರ್ಸ್​​ಗಳ ಹಿಟ್​ ಟಾರ್ಗೆ ಟ್ ಆಗಿದ್ದಾರೆ. ಅಷ್ಟೆ ಅಲ್ಲ ಶಾರುಖ್​​​ಗೆ ನಟ ರಣವೀರ್ ಸಿಂಗ್ ಮೇಲೆ ಎಷ್ಟು ಹೊಟ್ಟೆಕಿಚ್ಚಿದೆ ಅನ್ನೋ ಗುಟ್ಟನ್ನ ಇದೇ ಟ್ರೋಲರ್ಸ್​ ರಿವಿಲ್ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯಾಕಂದ್ರೆ ಇಡೀ ದೇಶವೇ ಕೊಂಡಾಡಿದ್ದ ಧುರಂದರ್​​​ ಬಗ್ಗೆ ಎಲ್ಲೂ ತುಟಿಕ್ ಪಿಟಿಕ್ ಅನ್ನದ ಕಿಂಗ್ ಖಾನ್ ಈಗ ಏಕಾಏಕಿ ಅಲಿಯಾ ಸಿನಿಮಾವನ್ನ ಹಾಡಿ ಹೊಗಳಿದ್ದಾರೆ. ಅಲಿಯಾ ಭಟ್ ನಟನೆಯ ಆ್ಯಕ್ಷನ್ ಥಿಲ್ಲರ್ ಸಿನಿಮಾ ಆಲ್ಫಾ. ಮೊನ್ನೆಯಷ್ಟೆ ಈ ಸಿನಿಮಾದ ಟೀಸರ್ ಬಂದು ಸಖತ್ ಸೌಂಡ್ ಮಾಡ್ತಿದೆ. ನಟಿ ಆಲಿಯಾ ಭಟ್ ಲುಕ್ ಆಕೆಯ ಫಾಲೋವರ್ಸ್​ ನಿದ್ದೆಗೆಡಿಸಿದೆ. ಈ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗ್ತಿದ್ದಂತೆ ಅಲರ್ಟ್ ಆದ ಶಾರುಖ್​ ಖಾನ್ ಆಲ್ಫಾ ಚಿತ್ರಕ್ಕೆ ಶುಭ ಕೋರಿದ್ದಾರೆ.

ಇದು ಧುರಂದರ್ ಭಕ್ತರ ಕಣ್ಣಿಗೆ ಬಿದ್ದಿದೆ. ದುರಂಧರ್ ಸಿನಿಮಾ ಬಂದಾಗ ಆ ಚಿತ್ರವನ್ನ ಇಡೀ ದೇಶವೇ ಕೊಂಡಾಡಿತ್ತು. ಆದ್ರೆ ನಟ ಶಾರುಖ್ ಖಾನ್ ಮಾತ್ರ ಮೌನವಾಗಿದ್ರು. ಆಲಿಯಾ ಭಟ್ ಅವರ ಹೈ-ವೋಲೈಜ್ ಆ್ಯಕ್ಷನ್ ಅವತಾರವನ್ನು ಮುಕ್ತ ಕಂಠದಿಂದ ಶ್ಲಾಘಿಸೋ ಶಾರುಖ್ ಖಾನ್, ಧುರಂದರ್ ಬಂದಾಗ ಎಲ್ಲಿ ಹೋಗಿದ್ರಿ ಅಂತ ಟ್ರೋಲ್ ಮಾಡುತ್ತಿದ್ದಾರೆ. ಶಾರುಖ್ ಖಾನ್ ತಾರತಮ್ಯತೆ ಮಾಡ್ತಿದ್ದಾರೆ 'ಧುರಂದರ್ ಯಶಸ್ಸಿನ ಬಗ್ಗೆ ಶಾರುಖ್ಗೆ ಅಸೂಯೆ ಇದೆ ಅಂತೆಲ್ಲಾ ಕಿಂಗ್ ಖಾನ್​ರನ್ನ ಜರಿಯುತ್ತಿದ್ದಾರೆ. ಒಟ್ಟಾರೆ ಶಾರುಖ್ ಮಾಡಿರೋ ಫೋಸ್ಟ್ ಇದೀಗ ಸಿಕ್ಕಾಪಟ್ಟೆ ಸಂಚಲನ ಸೃಷ್ಟಿಸಿದೆ. 

Related Video