Asianet Suvarna News Asianet Suvarna News

ರಾಜ್ಯದಲ್ಲಿ ರಂಗೇರಿದ ರಾಜಕೀಯ: ಕೈ ಪಡೆಗೆ ಹಿಮಾಚಲ, ಕಮಲ ಪಡೆಗೆ ಗುಜರಾತ್ ಸ್ಫೂರ್ತಿ

ಗುಜರಾತ್‌ ಹಾಗೂ ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಯ ಫಲಿತಾಂಶಗಳು, ಕರ್ನಾಟಕಕ್ಕೆ ಒಂದೊಂದು ಸಂದೇಶವನ್ನು ಕಳಿಸುತ್ತಿದೆ. 
 

ಗುಜರಾತ್‌ ದಿಗ್ವಿಜಯದ ನಂತರ ರಾಜ್ಯ ಬಿಜೆಪಿಯಲ್ಲಿ ಢವಢವ ಶುರುವಾಗಿದೆ. 5 ಸಚಿವರು 42 ಶಾಸಕರಿಗೆ ಗುಜರಾತ್'ನಲ್ಲಿ ಟಿಕೆಟ್‌ ಕೊಟ್ಟಿರಲಿಲ್ಲ. ಹಾಗಾಗಿ ಚುನಾವಣೆಗೂ ಮುನ್ನ ರಾಜ್ಯ ಬಿಜೆಪಿಯಲ್ಲಿ ಭಾರೀ ಬದಲಾವಣೆ ಸಾಧ್ಯತೆ ಇದೆ. ಹಿಮಾಚಲ ಪ್ರದೇಶದಂತೆ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಎಬ್ಬಿಸಲು ಕಾಂಗ್ರೆಸ್‌ ಹೋರಾಟಕ್ಕೆ ಸಜ್ಜಾಗಿದೆ. ಹಿಮಾಚಲ ಪ್ರದೇಶದಂತೆ ಕರ್ನಾಟಕದಲ್ಲೂ ಗೆಲುವು ಆಗುವ ವಿಶ್ವಾಸದಲ್ಲಿ ಕಾಂಗ್ರೆಸ್‌ ಇದೆ. ಇನ್ನು  ಗುಜರಾತ್‌ ಬಳಿಕ ರಾಜ್ಯದಲ್ಲಿ  ಗೆಲ್ಲುವ ಭರವಸೆಯಲ್ಲಿ ಬಿಜೆಪಿ ಇದ್ದು, ರಾಜ್ಯದಲ್ಲೂ ಗುಜರಾತ್‌ ಮಾದರಿ ಟಿಕೆಟ್‌ ಹಂಚಿಕೆಗೆ ಪ್ಲಾನ್‌ ನಡೆದಿದೆ. ಇದರಿಂದ ಬಿಜೆಪಿಯ ಹಿರಿಯ ನಾಯಕರಿಗೆ ಭಯ ಶುರುವಾಗಿದೆ.