BJP Ticket to New Faces: ಹಳಬರಿಗೆ ಕೊಕ್..ಹೊಸಬರಿಗೆ ಹೈಕಮಾಂಡ್ ಅವಕಾಶ: ಯಾರು ಯಾರಿಗೆ ಈ ಬಾರಿ ಚಾನ್ಸ್‌ ಸಿಗಲಿದೆ ?

ತುಮಕೂರಿಗೆ ಮಾಜಿ ಸಚಿವ ವಿ.ಸೋಮಣ್ಣ ಆಯ್ಕೆ ಫೈನಲ್..?
ನಳಿನ್ ಕುಮಾರ್ ಕಟೀಲ್ ಬದಲು ಕ್ಯಾಪ್ಟನ್ ಬ್ರಿಜೇಶ್ ಚೌಟಾಗೆ ಲಕ್
ಗಣಿನಾಡು ಬಳ್ಳಾರಿಗೆ ದೇವೇಂದ್ರಪ್ಪ ಬದಲು ಬಿ.ಶ್ರೀರಾಮುಲು ಫಿಕ್ಸ್

Share this Video
  • FB
  • Linkdin
  • Whatsapp

ಬಿಜೆಪಿ (BJP) ಪಟ್ಟಿಯಲ್ಲಿ ಕೆಲ ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಚಾನ್ಸ್ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಹಳಬರಿಗೆ ಕೊಕ್ ಕೊಟ್ಟು ಹೊಸಬರಿಗೆ ಹೈಕಮಾಂಡ್ ಅವಕಾಶ ನೀಡಲಿದೆ ಎಂದು ತಿಳಿದುಬಂದಿದೆ. ಕೊಪ್ಪಳ(Koppal) ಕ್ಷೇತ್ರಕ್ಕೆ ಸಂಗಣ್ಣ ಕರಡಿ ಬದಲು ಡಾ. ಬಸವರಾಜ್ ಆಯ್ಕೆ ಮಾಡುವ ಸಾಧ್ಯತೆ ಇದೆ. ದಾವಣಗೆರೆಯಲ್ಲಿ(Davanagere) ಜಿ.ಎಂ.ಸಿದ್ದೇಶ್ವರ್ ಬದಲಿಗೆ ಲಿಂಗರಾಜುಗೆ ಟಿಕೆಟ್(Ticket) ನೀಡಬಹುದು. ಮೈಸೂರು-ಕೊಡಗು ಕ್ಷೇತ್ರಕ್ಕೆ ಪ್ರತಾಪ್ ಸಿಂಹ ಬದಲು ಯದುವೀರ್‌ಗೆ , ಬೆಂಗಳೂರು ಗ್ರಾಮಾಂತರದಿಂದ ಡಾ.ಸಿ.ಎನ್.ಮಂಜುನಾಥ್ ಸ್ಪರ್ಧೆ ಪಕ್ಕಾ ಎನ್ನಲಾಗ್ತಿದೆ. ತುಮಕೂರಿಗೆ ಮಾಜಿ ಸಚಿವ ವಿ.ಸೋಮಣ್ಣ ಆಯ್ಕೆ ಫೈನಲ್‌ ಮಾಡಲಾಗಿದೆ ಎಂದು ಹೇಳಲಾಗ್ತಿದೆ.

ಇದನ್ನೂ ವೀಕ್ಷಿಸಿ: Loksabha: ಬಿಜೆಪಿಯಲ್ಲಿ ಇನ್ನೂ ಮುಗಿಯದ ಟಿಕೆಟ್‌ ಟೆನ್ಷನ್‌ ! 10 ಹಾಲಿ ಸಂಸದರಿಗೆ ಟಿಕೆಟ್‌ ನೀಡಲು ಗ್ರೀನ್‌ ಸಿಗ್ನಲ್‌?

Related Video