
ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರ ಘೋಷಣೆಯಾದ ದಿನದಿಂದಲೂ ಗಾಂಧಿನಗರದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಯಾಕಂದ್ರೆ 'ಸಪ್ತ'ಸಾಗರದಾಚೆ ಎಲ್ಲೋ' ಖ್ಯಾತಿಯ ಹೇಮಂತ್ ರಾವ್ ನಿರ್ದೇಶನ, ಮತ್ತೊಮ್ಮೆ ಶಿವಣ್ಣ-ಡಾಲಿ ಜೊತೆಯಾಟ. ಎಲ್ಲಕ್ಕಿಂತ ಹೆಚ್ಚಾಗಿ ಅಣ್ಣಾವ್ರ ಬಾಂಡ್ ಸ್ಟೈಲ್ ಸಿನಿಮಾ…
ಶಿವಣ್ಣ ಕರಿಯರ್‌ನಲ್ಲೇ ಮೋಸ್ಟ್ ಸ್ಪೆಷಲ್ ಸಿನಿಮಾ! ಏನಿದು 666 ಆಪರೇಷನ್ ಡ್ರೀಮ್ ಥಿಯೇಟರ್..?
666 ಆಪರೇಷನ್ ಡ್ರೀಮ್ ಥಿಯೇಟರ್: ಈ ಚಿತ್ರ ಘೋಷಣೆಯಾದ ದಿನದಿಂದಲೂ ಗಾಂಧಿನಗರದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಯಾಕಂದ್ರೆ 'ಸಪ್ತ'ಸಾಗರದಾಚೆ ಎಲ್ಲೋ' ಖ್ಯಾತಿಯ ಹೇಮಂತ್ ರಾವ್ ನಿರ್ದೇಶನ... ಮತ್ತೊಮ್ಮೆ ಶಿವಣ್ಣ-ಡಾಲಿ ಜೊತೆಯಾಟ... ಎಲ್ಲಕ್ಕಿಂತ ಹೆಚ್ಚಾಗಿ ಅಣ್ಣಾವ್ರ ಬಾಂಡ್ ಸಿನಿಮಾ ಸ್ಟೈಲ್ನ ಗೆಟಪ್ಸ್.. ರೆಟ್ರೋ ಪೋಸ್ಟರ್ಸ್ ಫ್ಯಾನ್ಸ್ ಗಮನ ಸೆಳೆದಿದ್ವು. ಇದೀಗ ಈ ಚಿತ್ರದ ಟೀಸರ್ ರಿಲೀಸ್ ಆಗಿದ್ದು ಧೂಳ್ ಎಬ್ಬಿಸ್ತಾ ಇದೆ.
ಅಸಲಿಗೆ ಶಿವಣ್ಣನ ಜೊತೆಗೆ ಸಿನಿಮಾ ಮಾಡಬೇಕು ಅಂತ ಫಿಕ್ಸ್ ಆಗಿದ್ದ ನಿರ್ದೇಶಕ ಹೇಮಂತ್ ಶಿವಣ್ಣನಿಗಾಗೇ ಈ ಕಥೆ ಮಾಡಿದ್ದಂತೆ. ಬಾಂಡ್ ಶೈಲಿಯ ಕಥೆ ಹೆಣೆದು ಶಿವಣ್ಣನನ್ನ ಅಣ್ಣಾವ್ರ ರೀತಿ ತೆರೆ ಮೇಲೆ ತೋರಿಸಿದ್ದಾರೆ ಹೇಮಂತ್.
ಡಾ. ರಾಜಕುಮಾರ್ ನಟನೆಯ ಬಾಂಡ್ ಸಿನಿಮಾಗಳಲ್ಲಿ ಅವರ ಪಾತ್ರಕ್ಕೆ ಪ್ರಕಾಶ್ ಅನ್ನೋ ಹೆಸರು ಇರ್ತಾ ಇತ್ತು. ಅದೇ ಹೆಸರಿನ ಪಾತ್ರವನ್ನೆ ಶಿವಣ್ಣ ಇಲ್ಲಿ ಮಾಡಿದ್ದಾರೆ. ಡಾಲಿ ಧನಂಜಯ್ ಇಲ್ಲಿ ಶಂಕರ್ ಅನ್ನೋ ಪಾತ್ರ ನಿರ್ವಹಿಸಿದ್ದಾರೆ.
ಪ್ರಿಯಾಂಕಾ ಮೋಹನ್ ಸೇರಿದಂತೆ ಇನ್ನೂ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದಾರೆ. ಅದ್ವೈತ ಗುರುಮೂರ್ತಿ ಕ್ಯಾಮರಾ ವರ್ಕ್ ಮಾಡಿದ್ದಾರೆ. ಶಿವರಾಜ್‌ಕುಮಾರ್ ಇದೂವರೆಗೂ 130 ಪ್ಲಸ್ ಸಿನಿಮಾ ಮಾಡಿದ್ದಾರೆ. ಅವರನ್ನ ಫ್ಯಾನ್ಸ್ ಕೂಡ ನೂರಾರು ಅವತಾರದಲ್ಲಿ ನೋಡಿದ್ದಾರೆ. ಈ ಸಿನಿಮಾ ಶಿವಣ್ಣನ ಪಾಲಿಗೂ ಸ್ಪೆಷಲ್.. ಫ್ಯಾನ್ಸ್ಗೂ ಸಖತ್ ಟ್ರೀಟ್ ಕೊಡೋದ್ರಲ್ಲಿ ಡೌಟೇ ಇಲ್ಲ...!
'ಸಿನಿಮಾ ಹಂಗಾಮ' ನೋಡಿ...