
ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್ ಕೇಸ್ ಕೈ ಇಟ್ಟಲೆಲ್ಲಾ ಕರೆಂಟು!
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್‌ಗೆ ಅವರ ಅಭಿಮಾನಿಗಳಿಂದಲೇ ಹೊಸ ಸಂಕಷ್ಟ ಎದುರಾಗಿದೆ. ಈ ಪ್ರಕರಣದ ಸಾಕ್ಷಿಯೊಬ್ಬರಿಗೆ, ದರ್ಶನ್ ಅಭಿಮಾನಿಯೂ ಹಾಗೂ ಮತ್ತೊಬ್ಬ ಸಾಕ್ಷಿಯೂ ಆಗಿರುವ ವ್ಯಕ್ತಿಯೇ ಬೆದರಿಕೆ ಹಾಕಿದ್ದು, ಸಾಕ್ಷ್ಯ ನಾಶದ ಯತ್ನದಡಿ ಇದೀಗ ಪೊಲೀಸರ ವಶವಾಗಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಜೈಲು ಸೇರಿ 2 ವರ್ಷವೇ ಕಳೆದುಬಿಟ್ಟಿದೆ. ಅವರನ್ನ ಹೊರಗೆ ತರಲು ಆತನ ಕುಟುಂಬ ಇನ್ನಿಲ್ಲದ ಪ್ರಯತ್ನಗಳನ್ನ ಮಾಡ್ತಿದೆ.. ಬಟ್ ಕೋರ್ಟ್ ಮಾತ್ರ ದರ್ಶನ್ ಒಂದು ವರ್ಷ ಜೈಲಿನಲ್ಲೇ ಇರಬೇಕು ಅಂತ ಹೇಳಿಬಿಟ್ಟಿದೆ.. ಪರಿಸ್ತಿತಿ ಹೀಗಿರುವಾಗ್ಲೇ ದರ್ಶನ್ ಅಭಿಮಾನಿಗಳು ಮತ್ತೊಂದು ಎಡವಟ್ಟು ಮಾಡಿಬಿಟ್ಟಿದ್ದಾರೆ.. ರೇಣುಕಾಸ್ವಾಮಿ ಕೊಲೆ ಕೇಸ್‌ನ ವಿಚಾರಣೆ ಕೋರ್ಟ್ನಲ್ಲಿ ನಡೆಯುತ್ತಿರುವಾಗ್ಲೇ ದರ್ಶನ್ ಅಭಿಮಾನಿಗಳು ಮತ್ತು ಈ ಕೇಸ್ನಲ್ಲೀ ಸಾಕ್ಷಿಯೂ ಆಗಿರುವನೊಬ್ಬ ಮತ್ತೊಬ್ಬ ಸಾಕ್ಷಿಗೆ ಬೆದರಿಕೆ ಹಾಕಿದ್ದಾನೆ. ಕೋರ್ಟ್ನಲ್ಲಿ ಸಾಕ್ಷಿ ಹೇಳದಂತೆ ವಾರ್ನ್ ಮಾಡಿದ್ದಾನೆ. ಸದ್ಯ ಬೆದರಿಕೆ ಹಾಕಿದವರೆಲ್ಲರೂ ಪೊಲೀಸರ ಅತಿಥಿಯಾಗಿದ್ದಾರೆ.
ಕೇಸ್ನಲ್ಲಿ ಸಾಕ್ಷಿಯಾಗಿದ್ದ ಪುನೀತ್, ಈಗ ಸಾಕ್ಷ್ಯ ನಾಶದ ಕೇಸ್ ನಲ್ಲಿ ತನ್ನಿಬ್ಬರು ಸಹಚರರ ಜತೆ ಅರೆಸ್ಟ್ ಆಗಿದ್ದಾನೆ. ಇಂಥಹ ಅಭಿಮಾನಿಗಳಿಂದ ದರ್ಶನ್‌ಗೆ ಮತ್ತೆ ಸಂಕಷ್ಟ ಎದುರಾಗಿದೆ. ಸಾಕ್ಷಿ ನಾಶ ಮಾಡೋದು.. ಸಾಕ್ಷಿಗಳನ್ನ ಬೆದರಿಸೋದು.. ಇದೇ ಮೊದಲೇನೂ ಅಲ್ಲ.. ಆದ್ರೆ ಸಾಕ್ಷಿ ಹೆಳಬೇಕಿದ್ದೋನೇ ಮತ್ತೊಂದು ಸಾಕ್ಷಿ ಮೇಲೆ ಒತ್ತಡ ಹೇರಿದ್ದು ಈಗ ರೇಣುಕಾಸ್ವಾಮಿ ಕೊಲೆ ಕೇಸ್ಗೆ ಬಿಗ್ ಟ್ವಿಸ್ಟ್ ಕೊಡುತ್ತೆ.. ಕೋರ್ಟ್ ಪ್ರಕರಣವನ್ನ ನೋಡುವ ರೀತಿಯನ್ನೇ ಬದಲಿಸಿಬಿಡುತ್ತೆ ಅನ್ನೋದು ವಕೀಲರ ಮಾತು. ಸೋ ದರ್ಶನ್ ಅಭಿಮಾನಿಗಳು ಬಾಸ್ ಸಹಾಯ ಮಾಡಲು ಹೋಗಿ ಮತ್ತಷ್ಟು ಸಂಕಷ್ಟ ತಂದೊಡ್ಡುತ್ತಿದ್ದಾರೆ.