
Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಕೋರ್ಟ್‌ಗೆ ಬಂದು ಸತ್ಯ ಹೇಳಬೇಕಾದ ಸಾಕ್ಷಿಗಳನ್ನ ದಾರಿಯಲ್ಲೇ ತಡೆದು, ಕಾರಿಗೆ ತುಂಬಿಕೊಂಡು, ಆಮಿಷ ಒಡ್ಡಿ, ಬೆದರಿಕೆ ಹಾಕಿ, ಸಾಕ್ಷ್ಯನಾಶ ಮಾಡಲು ಜಾಲವೊಂದು ಹೆಣೆಯಲ್ಪಟ್ಟಿದೆಯಾ? ಈ ಪ್ರಶ್ನೆಗೆ ‘ಹೌದು’ ಅನ್ನೋ ಉತ್ತರ ಬರುತ್ತಿದೆ. ಈ ಸ್ಟೋರಿ ನೋಡಿ..
ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣ, ಹಾಗೂ ಅದರ ಆರೋಪಿ ನಟ ದರ್ಶನ್ (Darshan Thoogudeepa) ಸದ್ಯ ಜೈಲಿಲ್ಲಿರೋದು ಗೊತ್ತೇ ಇದೆ. ಕಾನೂನು ತನ್ನ ಕೆಲಸವನ್ನ ಮಾಡ್ತಾ ಇದೆ, ನ್ಯಾಯಾಲಯದಲ್ಲಿ ವಿಚಾರಣೆಯೂ ಪ್ರಗತಿಯಲ್ಲಿದೆ. ಆದರೆ, ಈ ನಡುವೆ ಬೆಚ್ಚಿಬೀಳಿಸುವಂತ ರಹಸ್ಯವೊಂದು ಬಯಲಾಗಿದೆ! ಹೌದು, ದರ್ಶನ್ ನ ಹೇಗೆಯಾದರೂ ಮಾಡಿ ಪಾರು ಮಾಡಬೇಕು, ಕಾನೂನಿನ ಕಣ್ಣಿಗೆ ಮಣ್ಣೆರಚಬೇಕು ಅಂತ ದೊಡ್ಡದೊಂದು ಗ್ಯಾಂಗ್ ಆಕ್ಟಿವ್ ಆಗಿದೆಯಾ? ನಿರಂತರವಾಗಿ ಸಾಕ್ಷಿಗಳನ್ನ ಸಂಪರ್ಕಿಸಿ ಸಾಕ್ಷ್ಯನಾಶ ಮಾಡುವ ಕೆಲಸ ನಡೀತಿದೆಯಾ..? ಡಿ ಗ್ಯಾಂಗ್ನ ಆ ಕೃತ್ಯ ಸದ್ಯ ಖಾಕಿ ಪಡೆಯನ್ನೇ ಬೆಚ್ಚಿಬೀಳಿಸಿದೆ.
ದರ್ಶನ್ ಪಾರು ಮಾಡಲು ಕಾಣದ ಕೈಗಳ ಕೆಲಸ..? ಸಾಕ್ಷಿಗಳ ಬೇಟೆಗೆ ಹೊಂಚು ಹಾಕಿ ಕೂತಿರುತ್ತೆ ಕಾರು..!
ವೀಕ್ಷಕರೇ, ಮಿಸ್ಟರ್ ಐರಾವತ ಸಿನಿಮಾದಲ್ಲಿ ದರ್ಶನ್ ಪೊಲೀಸರು ಹೇಗೆ ಕೆಲಸ ಮಾಡಬೇಕು ಅಂತ ಹೊಡೆದ ಈ ಡೈಲಾಗ್ ಕೇಳಿದ್ರಾ..? ಈಗ ಈ ರೀಲ್ ಪೊಲೀಸ್ ರಿಯಲ್ ಆಗಿ ಕೊಲೆ ಕೇಸ್ ಆರೋಪಿಯಾಗಿ ಜೈಲಿನಲ್ಲಿರೋ ವಿಷ್ಯ ನಿಮಗೆ ಗೊತ್ತೇ ಇದೆ. ಅಷ್ಟೇ ಅಲ್ಲ ಜೈಲಿನಲ್ಲಿ ಇದ್ದುಕೊಂಡೇ ದರ್ಶನ್, ಈ ಕೇಸ್ ನಿಂದ ಖುಲಾಸೆ ಆಗ್ಲಿಕ್ಕೆ ಸಂಚೊಂದನ್ನ ಮಾಡಿದ್ದಾರಾ..? ರೇಣುಕಾಸ್ವಾಮಿ ಕೊಲೆ ಕೇಸ್ನ ಸಾಕ್ಷಿಗಳನ್ನ ಸಂಪರ್ಕಿಸಿ ಸಾಕ್ಷ್ಯನಾಶ ಮಾಡ್ಲಿಕ್ಕೆ ಗ್ಯಾಂಗ್ಒಂದನ್ನು ಫಾರ್ಮ್ ಮಾಡಿದ್ದಾರಾ..? ಖುದ್ದು ರಿಯಲ್ ಪೊಲೀಸ್ ಒಬ್ರು ಕೊಟ್ಟಿರೋ ದೂರನ್ನ ನೋಡಿದ್ರೆ ನಿಮಗೆ ಆ ಶಾಕಿಂಗ್ ವಿಷ್ಯ ಗೊತ್ತಾಗುತ್ತೆ.
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಕೋರ್ಟ್‌ಗೆ ಬಂದು ಸತ್ಯ ಹೇಳಬೇಕಾದ ಸಾಕ್ಷಿಗಳನ್ನ ದಾರಿಯಲ್ಲೇ ತಡೆದು, ಕಾರಿಗೆ ತುಂಬಿಕೊಂಡು, ಆಮಿಷ ಒಡ್ಡಿ, ಬೆದರಿಕೆ ಹಾಕಿ, ಸಾಕ್ಷ್ಯನಾಶ ಮಾಡಲು ಜಾಲವೊಂದು ಹೆಣೆಯಲ್ಪಟ್ಟಿದೆಯಾ? ಈ ಪ್ರಶ್ನೆಗೆ ಹೌದು ಅಂತಿದೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಇತ್ತೀಚಿನ ಸೆನ್ಸೇಷನಲ್ ಎಫ್‌ಐಆರ್! ಕೋರ್ಟ್ ಮಾನಿಟರಿಂಗ್ ಕರ್ತವ್ಯದಲ್ಲಿರುವ ಎ.ಎಸ್.ಐ ನಟೇಶ್ ಕೆ.ಎನ್ ಸ್ವತಃ ನೀಡಿರುವ ದೂರು ಇಡೀ ತನಿಖಾ ವ್ಯವಸ್ಥೆಯನ್ನೇ ಬೆಚ್ಚಿಬೀಳಿಸಿದೆ.
ಹೆಚ್ಚಿನ ಮಾಹಿತಿಗೆ 'ಸಿನಿಮಾ ಹಂಗಾಮ' ನೋಡಿ..