
ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
ಮೂರು ವರ್ಷಗಳ ಹೋರಾಟದ ನಂತರ ಮುಖ್ಯಮಂತ್ರಿಯಾದ ಡಿ.ಕೆ.ಶಿವಕುಮಾರ್, ಮೊದಲ 30 ದಿನಗಳಲ್ಲಿ ತಮ್ಮ ಆಡಳಿತದ ಝಲಕ್ ತೋರಿಸಿದ್ದಾರೆ. ಅಭಿವೃದ್ಧಿ ಯೋಜನೆಗಳಿಗೆ ಒತ್ತು ನೀಡುತ್ತಾ, ತಮ್ಮ ರಾಜಕೀಯ ಚದುರಂಗದಾಟದ ಶೈಲಿಯಲ್ಲಿಯೇ ಅವರು ತೆಗೆದುಕೊಂಡ 10 ದಿಟ್ಟ ನಿರ್ಧಾರಗಳು ಕುತೂಹಲ ಮೂಡಿಸಿವೆ.
ಮೂರು ವರ್ಷ ಮೌನ ಹೋರಾಟದ ಮೂಲಕ ಸಿಎಂ ಸಿಂಹಾಸನಕ್ಕೆ ಅಧಿಪತಿಯಾಗಿದ್ದಾರೆ ಡಿ.ಕೆ.ಶಿವಕುಮಾರ್. ಅಧಿಕಾರ ವಹಿಸಿಕೊಂಡ ಒಂದು ತಿಂಗಳಲ್ಲಿ ತಮ್ಮ ಆಡಳಿತ ಹೇಗಿರುತ್ತೆ ಅನ್ನೋದ್ರ ಝಲಕ್ ತೋರಿಸಿದ್ದಾರೆ ಕನಕಾಧಿಪತಿ. ಇದಕ್ಕೆ ಅವರು ತೆಗೆದುಕೊಂಡಿರೋ ಆ 10 ದಿಟ್ಟ ನಿರ್ಧಾರಗಳೇ ಸಾಕ್ಷಿ. ಆಡಳಿತದ ಜೊತೆಗೆ, ಸಿಎಂ ಗದ್ದುಗೆ ಏರಿದ ಬಳಿಕ ಡಿಕೆ ಪಾಲಿಟಿಕ್ಸ್ ಸ್ಟೈಲ್ನಲ್ಲಿಯೂ ಒಂದಿಷ್ಟು ಬದಲಾವಣೆಗಳಾಗಿವೆ. ಹಾಗಿದ್ರೆ ಕಳೆದ 30 ದಿನಗಳಲ್ಲಿ ಡಿಕೆ ತೆಗೆದುಕೊಂಡಿರೋ ಆ ದಶ ದಿಟ್ಟ ನಿರ್ಧಾರಗಳು ಯಾವು..? ಮುಖ್ಯಮಂತ್ರಿ ಸಿಂಹಾಸನವನ್ನ ಅಲಂಕರಿಸಿದ ಬಳಿಕ ಹೇಗೆ ಬದಲಾಗಿದೆ ಕನಕಪುರ ಬಂಡೆ ಪಾಲಿಟಿಕ್ಸ್ ಸ್ಟೈಲ್.?
ಮೊದಲಿನಿಂದಲೂ ಅಭಿವೃದ್ಧಿ ಯೋಜನೆಗಳ ಕಡೆಗೆ ಹೆಚ್ಚು ಒತ್ತು ಕೊಡೋ ನಾಯಕ ಡಿ.ಕೆ.ಶಿವಕುಮಾರ್. ಮುಖ್ಯಮಂತ್ರಿಯಾದ ಬಳಿಕವೂ ಅದನ್ನವರು ಮುಂದುವರೆಸಿದ್ದಾರೆ. ಕಳೆದ 30 ದಿನದಲ್ಲಿ ಅವರು ಮಾಡಿರೋ ಬೃಹತ್ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಗಳೆ ಇದಕ್ಕೆ ಸಾಕ್ಷಿ. ಇವುಗಳ ಜೊತೆಗೆ ತಮ್ಮ ಕನಸಿನ ಯೋಜನೆಗಳನ್ನೂ ಜಾರಿಗೊಳಿಸೋ ನಿಟ್ಟಿನಲ್ಲಿಯೂ ಡಿಕೆ ದಿಟ್ಟ ಹೆಜ್ಜೆಗಳನ್ನ ಇಡ್ತಿದ್ದಾರೆ
ರಾಜಕೀಯದಲ್ಲಿ ಡಿ.ಕೆ.ಶಿವಕುಮಾರ್ ಪಕ್ಕಾ ಚುದುರಂಗದಾಟಗಾರ. ರಿಸ್ಕ್ ತೆಗೆದುಕೊಂಡು ದೊಡ್ಡ ಸಕ್ಸಸ್ ಪಡೆಯೋದು ಅವರ ಟ್ರೇಡ್ ಮಾರ್ಕ್. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರವೂ ಆ ಹಳೇ ಸ್ಟೈಲ್ ಬದಲಾಗಿಲ್ಲ. ಒಂದು ದಿಟ್ಟ ನಿರ್ಧಾರದ ಮೂಲಕ ಎರಡು ಗುರಿಯನ್ನ ಮುಟ್ಟಿದ್ದಾರೆ ಸಿಎಂ ಡಿ.ಕೆ.ಶಿವಕುಮಾರ್.