ಇಂದು ನಿಮ್ಮ ದಿನ ಭವಿಷ್ಯ ಹೇಗಿದೆ? : ಕಷ್ಟ ಪರಿಹಾರಕ್ಕೆ ಅಮ್ಮನವರಿಗೆ ಶ್ವೇತ ವರ್ಣದ ಪುಷ್ಪದಿಂದ ಅರ್ಚನೆ ಮಾಡಿ..

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?
 

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಭಾನುವಾರ, ಅಷ್ಟಮಿ ತಿಥಿ, ಪುಬ್ಬ ನಕ್ಷತ್ರ.

ಅಷ್ಟಮಿಯಲ್ಲಿ ಮಹಾಗೌರಿ ಆರಾಧನೆ ಮಾಡಬಹುದು. ಆಕೆಗೆ ಬಿಳುಪಾದ ಹೂವಿನಿಂದ ಇಲ್ಲವೇ, ಶ್ವೇತ ವರ್ಣದ ಪುಷ್ಪಗಳನ್ನು ಸಂಗ್ರಹ ಮಾಡಿ ಪುಷ್ಪಾರ್ಚನೆ ಮಾಡಿ. ಅಲ್ಲದೇ ನಮ್ಮ ಭಾವ ತುಂಬಾ ಸಮೃದ್ಧವಾಗಿರಬೇಕು. ಒಳ್ಳೆಯ ಮನಸ್ಸಿನಿಂದ ತಾಯಿಯ ಪೂಜೆ ಮಾಡಿದ್ರೆ, ದೇವಿಯ ಅನುಗ್ರಹ ನಮ್ಮದಾಗಲಿದೆ. ನಮ್ಮ ತಾಯಿಯನ್ನು ಹೇಗೆ ನೋಡಿಕೊಳ್ಳುತ್ತೇವೋ, ಹಾಗೆ ಅಮ್ಮನವರ ಪ್ರಾರ್ಥನೆ ಮಾಡಬೇಕು. 

ಇದನ್ನೂ ವೀಕ್ಷಿಸಿ: News Hour: ಪ್ರಮಾಣವಚನ ಸ್ವೀಕರಿಸಿದ ಸಚಿವರು, ಟ್ರಬಲ್‌ ತಂದ ಹಿರಿಯರು!

Related Video